ಸತತ ಸೋಲಿನ ಹತಾಸೆಯಿಂದ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳದಿಲ್ಲ:ಬಸವರಾಜ ಬೊಮ್ಮಾಯಿ
ಹಾವೇರಿ, 04 ನವೆಂಬರ್ (ಹಿ.ಸ.): ಚುನಾವಣೆಗಳಲ್ಲಿ ಸತತ ಸೋಲಿನಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದು ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ.ಅನೈತಿಕ ಹಾಗೂ ದುಷ್ಟ ಕೂಟವಾಗಿ ಮಾರ್ಪಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳ
Basavaraj-Bommai-Accuses-Rahul-Gandhi-of-Taking-George-Soros-Funds-to-Weaken-India


ಹಾವೇರಿ, 04 ನವೆಂಬರ್ (ಹಿ.ಸ.):

ಚುನಾವಣೆಗಳಲ್ಲಿ ಸತತ ಸೋಲಿನಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದು ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ.ಅನೈತಿಕ ಹಾಗೂ ದುಷ್ಟ ಕೂಟವಾಗಿ ಮಾರ್ಪಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಂದು ಹಾವೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಧಾರವಾಡ ವಿಭಾಗದ ವತಿಯಿಂದ ಏರ್ಪಡಿಸಿದ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಷ್ಟ್ರೀಯತೆಯ ಕೊರತೆ:*ಹತಾಶ ಮನೋಭಾವದ ಕಾಂಗ್ರೆಸ್ ಪಕ್ಷವು ಇಂದು ಸರಿಯಾದ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲದೆ, ಅನೈತಿಕ ಹಾಗೂ ದುಷ್ಟ ಕೂಟವಾಗಿ ಮಾರ್ಪಟ್ಟಿದೆ. ಬಾಂಗ್ಲಾ, ನೇಪಾಳದಲ್ಲಿ ದಂಗೆಯಾಯಿತು. ನಮ್ಮ ದೇಶದಲ್ಲಿ ಆಗುತ್ತಿಲ್ಲ ಎನ್ನುವ ಹತಾಸೆ ಅವರಿಗೆ. ಬಾಂಗ್ಲಾ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದವರು ನಾವು, ನೇಪಾಳಕ್ಕೆ ಪ್ರತಿದಿನ ಸಹಾಯ ಮಾಡುತ್ತಿರುವವರು ನಾವು ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಚರ್ಚೆ ಮಾಡುವಾಗ 15 ದಿನಗಳ ಕಾಲ ಸತತವಾಗಿ ಸ್ಟ್ರೈಕ್ ಮಾಡಿದರು. ಅದರ ಬದಲು ಸಂಪೂರ್ಣ ಚರ್ಚೆ ಮಾಡಬಹುದಿತ್ತು. ಎಸ್ ಐಆರ್ ಪ್ರಕ್ರಿಯೆಯಲ್ಲಿ 13 ಕೋಟಿ ಜನರ ಹೆಸರು ಡಿಲೀಟ್ ಆಗಿದ್ದು, ಅದರಲ್ಲಿ ಮೂರು ಕೋಟಿ ಜನರು ನಿಧನ ಹೊಂದಿದ್ದಾರೆ.ಸುಮಾರು ಆರೂವರೆ ಕೋಟಿ ಜನರ ಮತ ಡುಪ್ಲಿಕೇಟ್ ಆಗಿವೆ. ಇನ್ನುಳಿದವರು ಎಸ್ ಐಆರ್ ಸಂದರ್ಭದಲ್ಲಿ ವಿಳಾಸದಲ್ಲಿಲ್ಲ, ಅವರಿಗೆ ಈಗಲೂ ಅವಕಾಶ ಇದೆ. ಕಾಂಗ್ರೆಸ್ ನವರು ಓಟ್ ಚೋರಿ ಎಂದು ಹುಚ್ಚರ ಸಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

*ಮೋದಿ ಮೇಲಿನ ಟೀಕೆಗಳಿಗೆ ಆಕ್ರೋಶ*ಪ್ರಜಾಪ್ರಭುತ್ವ ಉಳಿಸುವುದಾಗಿ ಹೇಳುತ್ತ ಪ್ರಧಾನಿ ಮೋದಿಯವರನ್ನು ಪ್ರತಿದಿನ ಬೈಯುವುದೇ ಕಾಂಗ್ರೆಸ್ ನಾಯಕರಿಗೆ ಕಾಯಕವಾಗಿದೆ.

ಅವರನ್ನು ಬೈಯದಿದ್ದರೆ ಕಾಂಗ್ರೆಸ್ ನವರಿಗೆ ತಿಂದಿರುವುದು ಕರಗುವುದಿಲ್ಲ. ಮೋದಿಯವರು ಬಹಳ ಉದಾರಿಗಳು ಏನು ಬೇಕಾದರೂ ಬೈಯಿರಿ ಎಂದು ಸುಮ್ಮನಾಗಿದ್ದಾರೆ. ಅವರನ್ನು ಎಷ್ಟು ಬೈಯುತ್ತಾರೆ, ಅವರು ಅಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದರು.

2012ರ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರು ಮೋದಿಯವರನ್ನು 'ಮೌತ್ ಕಾ ಸೌದಾಗರ್' (ಸಾವಿನ ವ್ಯಾಪಾರಿ) ಎಂದು ಕರೆದಿದ್ದರು.

ಆ ಮೇಲೆ ಮೋದಿಯವರು ಎರಡು ಬಾರಿ ಚುನಾವಣೆಯಲ್ಲಿ ಗೆದ್ದರು, ಮೋದಿ ನಿನ್ನ ಸಮಾಧಿ ತಯಾರಾಗಿದೆ ಎಂದು ಬೈದರು, ಇಷ್ಟು ಕೆಟ್ಟದಾಗಿ ಬೈದರೂ ಅವರ ಮೇಲೆ ಒಂದೂ ಪ್ರಕರಣ ದಾಖಲಿಸಲಿಲ್ಲ.ಇದಕ್ಕಿಂತ ದೊಡ್ಡ ಪ್ರಜಾಪ್ರಭುತ್ವ ಇನ್ನೊಂದು ಯಾವುದಾದರೂ ಇದಿಯಾ? ಕರ್ನಾಟಕದಲ್ಲಿ ರಾಹುಲ್ ಗಾಂಧಿ ವಿರುದ್ದ ಯಾರಾದರೂ ಮಾತನಾಡಿದರೆ ಅವರ ವಿರುದ್ದ ಪ್ರಕರಣ ದಾಖಲಿಸಿ ಕೋರ್ಟ್ ಗೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

*ಪ್ರಜಾಪ್ರಭುತ್ವದ ಅಸ್ತಿತ್ವ:* ಇಂದು ನಿಜವಾದ ಪ್ರಜಾಪ್ರಭುತ್ವ ಜಗತ್ತಿನಲ್ಲಿ ಜೀವಂತವಾಗಿರುವುದು ಕೇವಲ ಭಾರತದಲ್ಲಿ ಮಾತ್ರ. ದೇಶದಲ್ಲಿ ಅರಾಜಕತೆಯನ್ನು ಹುಟ್ಟುಹಾಕಲು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಅದರ ವಿರುದ್ದ ನಮ್ಮ ಪಾದಯಾತ್ರೆ ನಡೆಯುತ್ತಿದೆ ಎಂದು ಹೇಳಿದರು.

ನರೇಂದ್ರ ಮೋದಿ ಬದಲು ಇಂದಿರಾ ಗಾಂಧಿ ಈಗ ದೇಶದ ಪ್ರಧಾನಿ ಆಗಿದ್ದರೆ, ರಾಹುಲ್ ಗಾಂಧಿ ಈ ರೀತಿ ಮಾತನಾಡಿದ್ದರೆ, ಅವರನ್ನೆ ಬಂಧಿಸಿ ಒಳಗೆ ಹಾಕಿಸುತ್ತಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾಲ್ಕು ಜನ ಸೇರಿ ಮಾತನಾಡಿದರೂ ಬಂಧಿಸುತ್ತಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ವಿದ್ಯಾರ್ಥಿ ಯಾಗಿದ್ದೆ, ನಮ್ಮನ್ನು ಕ್ಲಾಸ್ ರೂಮಿಗೆ ಬಂದು ಬಂಧಿಸಿದ್ದರು.

ಪ್ರಜಾಪ್ರಭುತ್ವ ವನ್ನು ಸಂಪೂರ್ಣ ವಾಗಿ ಕೊಲೆ ಮಾಡಿರುವ ಪಕ್ಷ ಕಾಂಗ್ರೆಸ್. ಸಂವಿಧಾನವನ್ನು ತಿರುಚಿ ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಂಡಿರುವುದು ಕಾಂಗ್ರೆಸ್. ಭಾರತದಲ್ಲಿ ಅರಾಜಕತೆ ಹುಟ್ಟು ಹಾಕುವ ವಿಫಲ ಪ್ರಯತ್ನ ಮಾಡುತ್ತಿರುವ ಪಕ್ಷ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.

*ದೇಶಭಕ್ತಿಯ ನಾಯಕತ್ವ*ಪ್ರಧಾನಿ ನರೇಂದ್ರ ಮೋದಿ ಅವರದು ಅಚಲವಾದ ದೇಶಭಕ್ತಿಯ ನಾಯಕತ್ವವಾಗಿದೆ. ಅವರು ದೇಶಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದಾರೆ.

ಅನೇಕ ಸವಾಲುಗಳನ್ನು ಎದುರಿಸಿ ಮೂರು ಬಾರಿ ಪ್ರಧಾನಿಯಾಗಿದ್ದು, 2029ಕ್ಕೆ ನಾಲ್ಕನೇ ಬಾರಿಯೂ ಪ್ರಧಾನಿಯಾಗಲಿದ್ದಾರೆ. ಮೋದಿಯವರನ್ನು ತಡೆಯಲು ದೇಶ ಮತ್ತು ವಿದೇಶದ ಶಕ್ತಿಗಳು ಎಷ್ಟೇ ಪ್ರಯತ್ನಿಸಿದರೂ ಅವರನ್ನು ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಗೆ ಅಮೇರಿಕಾದ ವ್ಯಾಪಾರಿ ಸೋರಸ್ ಸಂಪೂರ್ಣ ಫಂಡ್ ನೀಡುತ್ತಾನೆ. ಆತ ಹೇಳಿದಂತೆ ಕಾಂಗ್ರೆಸ್ ನವರು ಕೇಳುತ್ತಾರೆ ಎಂದು ಹೇಳಿದರು.

ಎಸ್ ಐ ಆರ್ ಆದ ಮೇಲೆ ಕೇರಳದಲ್ಲಿ ಕಾಂಗ್ರೆಸ್ ಗೆದ್ದಿದೆ. ಕರ್ನಾಟಕದಲ್ಲಿಯೂ ಎಸ್ ಐ ಆರ್ ಸರಿ ಇದೆ ಎಂದು ಲೋಕೋಪಯೋಗಿ ಸಚಿವರೇ ಹೇಳಿದ್ದಾರೆ.ಆದರೆ, ರಾಹುಲ್ ಗಾಂಧಿ ಅದನ್ನು ಒಪ್ಪುವುದಿಲ್ಲ. ಅವರನ್ನೇ ಕರೆದು ತಾಕೀತು ಮಾಡುತ್ತಾರೆ. 13 ಕೋಟಿ ಜನರಲ್ಲಿ 13 ನೂರು ಜನರಾದರೂ ತಮ್ಮ ಓಟ್ ಚೋರಿಯಾಗಿದೆ ಎಂದು ಹೇಳಲಿ, ಯಾರೂ ದೂರು ಕೊಟ್ಟಿಲ್ಲ, ಎಸ್ ಐ ಆರ್ ಇರುವುದೇ ಶುದ್ದೀಕರಣಕ್ಕಾಗಿ ಎಂದು ಹೇಳಿದರು.

*ಪ್ರಜಾಪ್ರಭುತ್ವದ ಬಲವರ್ಧನೆ:* ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಹಾಗೂ ಅರಾಜಕತೆ ಮತ್ತು ಹತಾಶ ಮನೋಭಾವದ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯವರ ವಿರುದ್ಧವಾಗಿ ಎಲ್ಲರೂ ಒಗ್ಗೂಡಬೇಕು. ನಿಮ್ಮ ಪ್ರತಿಯೊಂದು ಹೆಜ್ಜೆ ಅರಾಜಕತೆಯ ವಿರುದ್ದವಾಗಿದೆ.

ನಿಮ್ಮ ಪ್ರತಿಯೊಂದು ಹೆಜ್ಜೆ ರಾಹುಲ್ ಗಾಂಧಿಯ ಬುದ್ದಿ ಚೋರಿಯಾಗಿರುವ ವಿರುದ್ದವಾಗಿದೆ. ನಿಮ್ಮ ಹೆಜ್ಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗಟ್ಟಿಗೊಳಿಸಲು, ವಿಕಸಿತ ಭಾರತ ಮಾಡಲು ಆತ್ಮನಿರ್ಭರ ಮಾಡಲು. 2047 ಕ್ಕೆ ಭಾರತ ವಿಶ್ವದ ನಂಬರ್ ಒನ್ ಯಶಸ್ವಿ ಪ್ರಜಾಪ್ರಭುತ್ವ ದೇಶವನ್ನಾಗಿ ಮಾಡಲು ನಿಮ್ಮ ಹೆಜ್ಜೆ ನಿರಂತರವಾಗಿ ನಡೆಯಬೇಕು. 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕಮಲ ಅರಳಿಸಿ ಬಳಿಕ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನೇ ಪ್ರಧಾನಿ ಮಾಡಬೇಕು ಎಂದು ಹೇಳಿದರು.

-------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande