ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್
ನವದೆಹಲಿ, 03 ನವೆಂಬರ್ (ಹಿ.ಸ.): ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ 14 ವರ್ಷಗಳ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ತೆರೆ ಬಿದ್ದಿದೆ. 38 ವರ್ಷದ ಮ್ಯಾಕ್ಸ್‌ವೆಲ್ 2026ರ ಐಸಿಸಿ ಪುರುಷರ ಟಿ20
ग्लेन मैक्सवेल फोटो @मैक्सवेल इंस्टाग्राम


ನವದೆಹಲಿ, 03 ನವೆಂಬರ್ (ಹಿ.ಸ.):

ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ 14 ವರ್ಷಗಳ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ತೆರೆ ಬಿದ್ದಿದೆ. 38 ವರ್ಷದ ಮ್ಯಾಕ್ಸ್‌ವೆಲ್ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಒಮಾನ್ ವಿರುದ್ಧ ಕೊನೆಯದಾಗಿ ಆಸ್ಟ್ರೇಲಿಯಾ ಪರ ಆಡಿದ್ದರು.

ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿರುವ ಮ್ಯಾಕ್ಸ್‌ವೆಲ್, 'ಈ ನಿರ್ಧಾರ ಸ್ವಲ್ಪ ನೋವು ತಂದಿದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ' ಎಂದು ಫೈನಲ್ ವರ್ಡ್ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.

ಆಯ್ಕೆ ಸಮಿತಿಯೊಂದಿಗಿನ ಮಾತುಕತೆ ಕುರಿತು ಪ್ರತಿಕ್ರಿಯಿಸಿದ ಅವರು, ಟಿ20 ವಿಶ್ವಕಪ್‌ಗೂ ಮೊದಲು ಮತ್ತು ನಂತರ ಹಲವು ಬಾರಿ ಚರ್ಚೆ ನಡೆಸಿದ್ದೇವೆ. ಈ ಮಾತುಕತೆ ಮುಕ್ತವಾಗಿ ಹಾಗೂ ಸ್ಪಷ್ಟವಾಗಿ ನಡೆದಿತ್ತು ಎಂದು ಹೇಳಿದ್ದಾರೆ.

ತಮ್ಮ ಕ್ರಿಕೆಟ್ ಬದುಕಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮ್ಯಾಕ್ಸ್‌ವೆಲ್, ದೇಶವನ್ನು ಪ್ರತಿನಿಧಿಸುವ ಅವಕಾಶ ದೊರೆತಿದ್ದಕ್ಕೆ ಕೃತಜ್ಞನಾಗಿದ್ದೇನೆ. 2009ರ ಸುಮಾರಿಗೆ ಮೊದಲ ಬಾರಿಗೆ ವಿಕ್ಟೋರಿಯಾ ತಂಡದ ಆಟಗಾರರ ಕೊಠಡಿಗೆ ಕಾಲಿಟ್ಟಾಗ ಇಂತಹ ಕ್ರಿಕೆಟ್ ಬದುಕು ಸಿಗಲಿದೆ ಎಂದು ಯಾರಾದರೂ ಹೇಳಿದ್ದರೆ ಸಂತೋಷದಿಂದ ಒಪ್ಪಿಕೊಳ್ಳುತ್ತಿದ್ದೆ ಎಂದು ಸ್ಮರಿಸಿದ್ದಾರೆ.

ಮ್ಯಾಕ್ಸ್‌ವೆಲ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಆಸ್ಟ್ರೇಲಿಯಾ ಪರ ಮೂರೂ ಮಾದರಿಗಳಲ್ಲಿ ಆಡಿದ್ದಾರೆ. 149 ಏಕದಿನ, 130 ಟಿ20 ಅಂತಾರಾಷ್ಟ್ರೀಯ ಹಾಗೂ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2015 ಮತ್ತು 2023ರ ಏಕದಿನ ವಿಶ್ವಕಪ್ ಹಾಗೂ 2021ರ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡಗಳ ಭಾಗವಾಗಿದ್ದರು.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮ್ಯಾಕ್ಸ್‌ವೆಲ್ ವಿಶ್ವದಾದ್ಯಂತ ಅಭಿಮಾನಿಗಳ ಗಮನ ಸೆಳೆದಿದ್ದರು. ಅವರ ಆಕ್ರಮಣಕಾರಿ ಬ್ಯಾಟಿಂಗ್, ಅತ್ಯುತ್ತಮ ಕ್ಷೇತ್ರರಕ್ಷಣೆ ಹಾಗೂ ಉಪಯುಕ್ತ ಬೌಲಿಂಗ್ ತಂಡಕ್ಕೆ ಹಲವು ಸಂದರ್ಭಗಳಲ್ಲಿ ನೆರವಾಗಿತ್ತು.

ವಿಶೇಷವಾಗಿ 2023ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅವರು ದಾಖಲಿಸಿದ ಅಜೇಯ ದ್ವಿಶತಕ ಕ್ರಿಕೆಟ್ ಇತಿಹಾಸದ ಸ್ಮರಣೀಯ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಗಾಯದ ಸಮಸ್ಯೆ ಹಾಗೂ ಕಠಿಣ ಪರಿಸ್ಥಿತಿಯ ನಡುವೆಯೂ ಅಜೇಯ ದ್ವಿಶತಕ ಸಿಡಿಸಿ ಆಸ್ಟ್ರೇಲಿಯಾ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ 149 ಪಂದ್ಯಗಳಿಂದ 3,990 ರನ್ ಗಳಿಸಿರುವ ಮ್ಯಾಕ್ಸ್‌ವೆಲ್, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 154.4ರ ಸ್ಟ್ರೈಕ್‌ರೇಟ್‌ನೊಂದಿಗೆ 2,897 ರನ್ ದಾಖಲಿಸಿದ್ದಾರೆ. ಏಳು ಟೆಸ್ಟ್ ಪಂದ್ಯಗಳಿಂದ 339 ರನ್ ಗಳಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಶತಕಗಳನ್ನು ಸಿಡಿಸಿದ್ದು, 136 ವಿಕೆಟ್‌ಗಳನ್ನು ಪಡೆದಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande