ಲಾಲ್ಬಾಗ್ ಮೂಲಕ ಸುರಂಗ ರಸ್ತೆ ಮಾರ್ಗ ಬದಲಾವಣೆ ನಿರ್ಧಾರಕ್ಕೆ ವಾಕರ್ಸ್ ಅಸೋಸಿಯೇಷನ್ ಸ್ವಾಗತ
ಬೆಂಗಳೂರು, 26 ನವೆಂಬರ್ (ಹಿ.ಸ.): ಲಾಲ್‌ಬಾಗ್ ಮತ್ತು ಐತಿಹಾಸಿಕ ಬಂಡೆಯ ಮೂಲಕ ಹಾದುಹೋಗಲು ಉದ್ದೇಶಿಸಿದ್ದ ಪ್ರಸ್ತಾವಿತ ಸುರಂಗ ರಸ್ತೆ ಮಾರ್ಗವನ್ನು ಬದಲಾಯಿಸುವ ನಿರ್ಧಾರವನ್ನು ಲಾಲ್‌ಬಾಗ್ ವಾಕರ್ಸ್ ಅಸೋಸಿಯೇಷನ್ ಸ್ವಾಗತಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಅಧ್ಯಕ್ಷ ಡಾ. ಎಸ್. ಉಮೇಶ್ ಕು
ಲಾಲ್ಬಾಗ್ ಮೂಲಕ ಸುರಂಗ ರಸ್ತೆ ಮಾರ್ಗ ಬದಲಾವಣೆ ನಿರ್ಧಾರಕ್ಕೆ ವಾಕರ್ಸ್ ಅಸೋಸಿಯೇಷನ್ ಸ್ವಾಗತ


ಬೆಂಗಳೂರು, 26 ನವೆಂಬರ್ (ಹಿ.ಸ.):

ಲಾಲ್‌ಬಾಗ್ ಮತ್ತು ಐತಿಹಾಸಿಕ ಬಂಡೆಯ ಮೂಲಕ ಹಾದುಹೋಗಲು ಉದ್ದೇಶಿಸಿದ್ದ ಪ್ರಸ್ತಾವಿತ ಸುರಂಗ ರಸ್ತೆ ಮಾರ್ಗವನ್ನು ಬದಲಾಯಿಸುವ ನಿರ್ಧಾರವನ್ನು ಲಾಲ್‌ಬಾಗ್ ವಾಕರ್ಸ್ ಅಸೋಸಿಯೇಷನ್ ಸ್ವಾಗತಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಅಧ್ಯಕ್ಷ ಡಾ. ಎಸ್. ಉಮೇಶ್ ಕುಮಾರ್, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮಾರ್ಗ ಬದಲಾವಣೆ ನಿರ್ಧಾರವನ್ನು ದೃಢಪಡಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ಲಾಲ್‌ಬಾಗ್ ಮತ್ತು ಪ್ರಾಚೀನ ಪೆನಿನ್ಸುಲರ್ ಗ್ನೈಸ್ ಶಿಲಾರಚನೆಯನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತಿಭಟನೆ ಆರಂಭಿಸಿದ ಮೊದಲ ಸಂಘಟನೆ ತಮ್ಮದಾಗಿದೆ. ಉದ್ಯಾನದ ಪರಿಸರ, ಭೌಗೋಳಿಕ ಹಾಗೂ ಐತಿಹಾಸಿಕ ಮಹತ್ವವನ್ನು ಎತ್ತಿಹಿಡಿಯಲು ಹಲವು ಭಾನುವಾರಗಳಂದು ನಿರಂತರ ಪ್ರತಿಭಟನೆ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಸಂಘಟನೆಯ ಮನವಿಗೆ ಸ್ಪಂದಿಸಿ ಲಾಲ್‌ಬಾಗ್ ಮತ್ತು ಐತಿಹಾಸಿಕ ಬಂಡೆಯನ್ನು ಸಂಭಾವ್ಯ ಪರಿಸರ ಹಾಗೂ ರಚನಾತ್ಮಕ ಹಾನಿಯಿಂದ ರಕ್ಷಿಸುವ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೋರಾಟ ಯಶಸ್ವಿಯಾಗಲು ಸಹಕರಿಸಿದ ಸಂಘಟನೆಯ ಸದಸ್ಯರು, ನಿತ್ಯ ವಾಯುವಿಹಾರಿಗಳು ಹಾಗೂ ಕಾಳಜಿಯುಳ್ಳ ನಾಗರಿಕರಿಗೂ ಧನ್ಯವಾದ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande