

ಬಳ್ಳಾರಿ, 26 ನವೆಂಬರ್ (ಹಿ.ಸ.)
ಕನ್ನಡ ಉಪನ್ಯಾಸಕ, ಲೇಖಕ ಡಾ. ಸಂಪಿಗೆ ನಾಗರಾಜ್ ಅವರ `ಬಯಲ ಆಲಯದೊಳಗೆ' ಕಾದಂಬರಿಯನ್ನು ಕನ್ನಡ ಸಾಂಸ್ಕøತಿಕ ಪರಿಷತ್ತು ನಗರದ ಸತ್ಯಂ ಶಿಕ್ಷಕರ ಶಿಕ್ಣಣ ಮಹಾ ವಿದ್ಯಾಲಯದಲ್ಲಿ ನವೆಂಬರ್ 27ರ ಶುಕ್ರವಾರ ಬೆಳಗ್ಗೆ 10.30 ಕ್ಕೆ ಲೋಕಾರ್ಪಣೆ ಮಾಡಲಿದೆ.
ಕನ್ನಡ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಸಿದ್ಧರಾಮ ಕಲ್ಮಠ ಅವರು ಮಾಹಿತಿ ನೀಡಿದ್ದು, ಸಮಾಜವಾದಿ ಚಿಂತಕ, ಲೋಹಿಯಾ ಪ್ರಕಾಶನದ ಡಾ. ಸಿ.ಚನ್ನಬಸಣ್ಣ ಅವರು ಕಾದಂಬರಿಯನ್ನು ಬಿಡುಗಡೆ ಮಾಡಲಿದ್ದಾರೆ. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕರು, ಲೇಖಕರು ಆಗಿರುವ ಡಾ. ಹಳೆಮನೆ ರಾಜಶೇಖರ ಅವರು ಕೃತಿಯ ಕುರಿತು ಮಾತನಾಡಲಿದ್ದಾರೆ.
ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಹೆಚ್. ವೀರಭದ್ರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ರಾಯಚೂರುನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಚನ್ನಪ್ಪ ಅವರು ಮುಖ್ಯ ಅತಿಥಿಗಳಾಗಿದ್ದಾರೆ.
ಕಾದಂಬರಿಕಾರರಾದ ಡಾ. ಸಂಪಿಗೆ ನಾಗರಾಜ್, ವಕೀಲ ಬಾದಾಮಿ ಶಿವಲಿಂಗ ನಾಯಕ, ವಿಶ್ರಾಂತ ಪ್ರಾಧ್ಯಾಪಕ ಟಿ.ಎಂ. ಲಿಂಗರಾಜ್ ಅವರು ಅತಿಥಿಗಳಾಗಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್