
ಬಳ್ಳಾರಿ, 26 ನವೆಂಬರ್ (ಹಿ.ಸ.)
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2026–27ನೇ ಸಾಲಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದ ಬಾಲ ಪ್ರತಿಭೆ, ಕಿಶೋರ ಪ್ರತಿಭೆ, ಯುವ ಪ್ರತಿಭೆ ಹಾಗೂ ಸಮೂಹ ಸ್ಪರ್ಧೆಗಳ ಫಲಿತಾಂಶ ಪ್ರಕಟಿಸಲಾಗಿದೆ. ನವೆಂಬರ್ 24 ಮತ್ತು 25ರಂದು ನಡೆದ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಪ್ರಕಟಿಸಿದ್ದಾರೆ.
ಬಾಲ ಪ್ರತಿಭೆ ವಿಭಾಗ: ಶಾಸ್ತ್ರೀಯ ನೃತ್ಯದಲ್ಲಿ ಗುಣ ಸಿಂಧು ಪ್ರಥಮ, ದೀಕ್ಷಾ ಸಿ.ಎಸ್. ದ್ವಿತೀಯ, ಧನ್ಯಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ. ಸುಗಮ ಸಂಗೀತದಲ್ಲಿ ಕೆ. ಅದ್ವಕ್ ನಿನಾದ್, ಸಾನ್ವಿ ಬೆಳಗಂಡಿ ಹಾಗೂ ಸನ್ನಿಧಿ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದ್ದಾರೆ. ಜಾನಪದ ಗೀತೆಯಲ್ಲಿ ಟಿ.ಹೆಚ್. ಗಗನ್, ಕೆ. ಮನಸ್ವಿ ಮತ್ತು ಜೀವನ ಗೌಡ ಪಿ. ವಿಜೇತರಾಗಿದ್ದಾರೆ.
ಚಿತ್ರಕಲೆಯಲ್ಲಿ ಆಶ್ರಿತ ಪ್ರಥಮ, ಹಾರಿಕ ಕೆ.ವಿ. ದ್ವಿತೀಯ, ಶ್ರದ್ಧಾ ಬೋಪೆ ತೃತೀಯ ಸ್ಥಾನ ಪಡೆದಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯದಲ್ಲಿ ಆಯಿಷ್ ಫರಿನ್, ಗಣೇಶ್ ಗೌಡ ಹಾಗೂ ದೊಡ್ಡನ ಗೌಡ ಎಸ್. ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಿ. ಅವನಿ, ಎಂ. ಅನ್ವಿತ ಹಾಗೂ ಆರ್.ಎಂ. ಅಪೇಕ್ಷ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದ್ದಾರೆ.
ಕಿಶೋರ ಪ್ರತಿಭೆ ವಿಭಾಗ: ಶಾಸ್ತ್ರೀಯ ನೃತ್ಯದಲ್ಲಿ ದೀಕ್ಷಾ ಯಂಡಿಗೇರಿ ಪ್ರಥಮ, ಅಪರ್ಣ ದೀಪು ದ್ವಿತೀಯ, ಅಮೃತ ಕೆ. ತೃತೀಯ ಸ್ಥಾನ ಪಡೆದಿದ್ದಾರೆ. ಸುಗಮ ಸಂಗೀತದಲ್ಲಿ ತನಿಷ್ಕಾ ಕೆ. ಪ್ರಥಮ, ಎಂ.ಎಸ್. ಜಯಲಕ್ಷ್ಮೀ ದ್ವಿತೀಯ, ವೈಭವಿ ತೃತೀಯ ಸ್ಥಾನ ಗಳಿಸಿದ್ದಾರೆ.
ಜಾನಪದ ಗೀತೆಯಲ್ಲಿ ಗೌರಿ ಸೃಜನ ಜಿ., ಶ್ವೇತಾ ಹಾಗೂ ಹೆಚ್. ದೀಪಿಕಾ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಚಿತ್ರಕಲೆಯಲ್ಲಿ ಅತ್ರಯಿ ಘೋಷ್ ಪ್ರಥಮ, ಗಣೇಶ ದ್ವಿತೀಯ, ನಿಶಾಂತ್ ತೃತೀಯ ಸ್ಥಾನ ಗಳಿಸಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯದಲ್ಲಿ ವೀರ ಪಂಚಾಕ್ಷರಿ, ಗೌರಿಶ್ರೀ ಕೆ. ಹಾಗೂ ಉಮೇಶ್ ಜೆ.ಸಿ. ವಿಜೇತರಾಗಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪಿ. ಮೇಧ ಪ್ರಥಮ ಹಾಗೂ ಎಲ್. ಅಮೃತ ವರ್ಷಿಣಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಯುವ ಪ್ರತಿಭೆ ವಿಭಾಗ: ಶಾಸ್ತ್ರೀಯ ನೃತ್ಯದಲ್ಲಿ ಭವ್ಯ ಪ್ರಥಮ, ಎಸ್. ಸ್ನೇಹ ದ್ವಿತೀಯ, ಕೆ. ಸಂಜನ ತೃತೀಯ ಸ್ಥಾನ ಗಳಿಸಿದ್ದಾರೆ. ಸುಗಮ ಸಂಗೀತದಲ್ಲಿ ವಿಭಾ ಆರ್. ಕುಲಕರ್ಣಿ, ಹೆಚ್. ಜ್ಯೋತಿ ಹಾಗೂ ಗ್ಲೋರಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.
ಚಿತ್ರಕಲೆಯಲ್ಲಿ ಖುಷಿ ಕಮಿತ್ಕರ್ ಪ್ರಥಮ, ಭಾರ್ಗವಿ ಪಿ. ದ್ವಿತೀಯ, ಮಲ್ಲಿಕಾರ್ಜುನ ಜೆ.ಪಿ. ತೃತೀಯ ಸ್ಥಾನ ಗಳಿಸಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯದಲ್ಲಿ ಪುಟ್ಟರಾಜ ಕೆ. ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ರೀವಾಣಿ ಎಸ್. ಪ್ರಥಮ ಸ್ಥಾನ ಪಡೆದಿದ್ದಾರೆ. ಆಶುಭಾಷಣದಲ್ಲಿ ಸರಸ್ವತಿ ಸಿ. ಪ್ರಥಮ, ಕವಿತಾ ಸಿ. ದ್ವಿತೀಯ ಹಾಗೂ ಜಿ. ಗಣೇಶ್ ತೃತೀಯ ಸ್ಥಾನ ಗಳಿಸಿದ್ದಾರೆ.
ಸಮೂಹ ಸ್ಪರ್ಧೆಗಳು: ನಾಟಕ ಸ್ಪರ್ಧೆಯಲ್ಲಿ ಶ್ರೀಧರ್ ಎಂ.ಆರ್. ಮತ್ತು ತಂಡ ಪ್ರಥಮ, ಸುಲೋಚನ ಮತ್ತು ತಂಡ ದ್ವಿತೀಯ, ಅಭಿಲಾಶ್ ಆಚಾರ್ ಬಿ.ಸಿ. ಮತ್ತು ತಂಡ ತೃತೀಯ ಸ್ಥಾನ ಪಡೆದಿದ್ದಾರೆ. ಜನಪದ ನೃತ್ಯದಲ್ಲಿ ರಾಧಿಕ ಮತ್ತು ತಂಡ ಪ್ರಥಮ, ಹೆಚ್. ಗಣೇಶ್ ಮತ್ತು ತಂಡ ದ್ವಿತೀಯ ಹಾಗೂ ಗನ್ ಸಿಂಗ್ ಮತ್ತು ತಂಡ ತೃತೀಯ ಸ್ಥಾನ ಗಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್