
ಬಳ್ಳಾರಿ, 25 ನವೆಂಬರ್ (ಹಿ.ಸ.)
ಬಳ್ಳಾರಿ ನಗರ ಸೇರಿ ವಿವಿಧಕಡೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆರೋಪಿಯಿಂದ 14.80 ಲಕ್ಷ.ರೂ ಮೌಲ್ಯದ 37 ಬೈಕ್ಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಳ್ಳಾರಿ ನಗರದ ರೂಪನಗುಡಿ ರಸ್ತೆಯ ಹರಿಶ್ಚಂದ್ರ ನಗರದ ನಿವಾಸಿ ಕಾಳಿ ಪ್ರಸಾದ್ (40) ಆರೋಪಿ. ಅರೋಪಿಯು ಗಾಂಧಿನಗರ, ಬ್ರೂಸ್ಪೇಟೆ, ತೋರಣಗಲ್ಲು, ಮುನಿರಬಾದ್, ಕಂಪ್ಲಿ ಹಾಗೂ ಆಂಧ್ರಪ್ರದೇಶದ ಗುಂತಕಲ್ಲು ಪೊಲೀಸರು ಠಾಣೆಯ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದು, ಅವುಗಳ ಪೈಕಿ 37 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಅರೋಪಿಯು ಕದ್ದ ವಾಹನಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್