ಅಂಚೆ ಕಾರ್ಯಾಚರಣೆ ಮತ್ತು ಆಸ್ತಿ ನಿರ್ವಹಣಾ ಯೋಜನೆಗಳ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ನವದೆಹಲಿ, 25 ನವೆಂಬರ್ (ಹಿ.ಸ.): ದೇಶದಲ್ಲಿ ಅಂಚೆ ಸೇವೆಗಳ ಕಾರ್ಯಾಚರಣೆ ಹಾಗೂ ಮೂಲಸೌಕರ್ಯ ಸೌಲಭ್ಯಗಳ ನಿರ್ವಹಣೆಯನ್ನು ಬಲಪಡಿಸುವ ಉದ್ದೇಶದಿಂದ ₹1,141 ಕೋಟಿ ಮತ್ತು ₹1,491 ಕೋಟಿ ಮೊತ್ತದ ಎರಡು ಯೋಜನೆಗಳನ್ನು ಮುಂದಿನ ಐದು ವರ್ಷಗಳವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್
डॉक (प्रतिनिधि चित्र)


ನವದೆಹಲಿ, 25 ನವೆಂಬರ್ (ಹಿ.ಸ.):

ದೇಶದಲ್ಲಿ ಅಂಚೆ ಸೇವೆಗಳ ಕಾರ್ಯಾಚರಣೆ ಹಾಗೂ ಮೂಲಸೌಕರ್ಯ ಸೌಲಭ್ಯಗಳ ನಿರ್ವಹಣೆಯನ್ನು ಬಲಪಡಿಸುವ ಉದ್ದೇಶದಿಂದ ₹1,141 ಕೋಟಿ ಮತ್ತು ₹1,491 ಕೋಟಿ ಮೊತ್ತದ ಎರಡು ಯೋಜನೆಗಳನ್ನು ಮುಂದಿನ ಐದು ವರ್ಷಗಳವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಂಚೆ ಇಲಾಖೆಯ ಈ ಎರಡೂ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.

ಸಚಿವ ಸಂಪುಟದ ನಿರ್ಧಾರಗಳ ಕುರಿತು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದರು.

ಅಂಚೆ ಕಾರ್ಯಾಚರಣೆ ಯೋಜನೆಗೆ ₹1,141 ಕೋಟಿ

16ನೇ ಹಣಕಾಸು ಆಯೋಗದ ಐದು ವರ್ಷಗಳ ಅವಧಿಗೆ ಅಂಚೆ ಕಾರ್ಯಾಚರಣೆ ಯೋಜನೆಯನ್ನು ಅನುಮೋದಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಅಂಚೆ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವುದು, ಪತ್ರ ಮತ್ತು ಪಾರ್ಸೆಲ್ ಸೇವೆಗಳ ನಿರ್ವಹಣೆ, ವಿದ್ಯುನ್ಮಾನ ವಾಣಿಜ್ಯ ಹಾಗೂ ಅಂತಾರಾಷ್ಟ್ರೀಯ ಅಂಚೆ ಸರಕು ಸಾಗಣೆ ವ್ಯವಸ್ಥೆಯನ್ನು ಬಲಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.

ಅಲ್ಲದೆ, ಅಂಚೆ ವಿತರಣಾ ಸೇವೆಗಳ ಡಿಜಿಟಲೀಕರಣ ಮತ್ತು ಸೌಲಭ್ಯಗಳ ವಿಸ್ತರಣೆಗೆ ಆದ್ಯತೆ ನೀಡಲಾಗುತ್ತದೆ.

ಆಸ್ತಿ ನಿರ್ವಹಣೆಗೆ ₹1,491 ಕೋಟಿ

ಆಸ್ತಿ ನಿರ್ವಹಣಾ ಯೋಜನೆಯಡಿ ದೇಶಾದ್ಯಂತ 190 ಹೊಸ ಇಲಾಖಾ ಅಂಚೆ ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. 5,050 ಅಂಚೆ ಕಚೇರಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. 200 ಐತಿಹಾಸಿಕ ಅಂಚೆ ಕಟ್ಟಡಗಳನ್ನು ಸಂರಕ್ಷಿಸಲಾಗುತ್ತದೆ.

ಇದರ ಜತೆಗೆ ಅಂಚೆ ಸೇವೆಗೆ ಸಂಬಂಧಿಸಿದ 150 ವಸತಿ ಬಡಾವಣೆಗಳನ್ನು ನವೀಕರಿಸಲಾಗುತ್ತದೆ. ಬೆಂಗಳೂರಿನಲ್ಲಿ ಸಮಗ್ರ ತಂತ್ರಜ್ಞಾನ ಕೇಂದ್ರವನ್ನೂ ಸ್ಥಾಪಿಸಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande