ಭಾರತೀಯರು ನನ್ನನ್ನು ಪ್ರೀತಿಯಿಂದ ಸ್ವೀಕರಿಸಿ, ಅಪ್ಪಿಕೊಂಡಿದ್ದಾರೆ: ಸೋನಿಯಾ ಗಾಂಧಿ
ಭಾರತದ ಜನತೆ ತಮ್ಮನ್ನು ಪ್ರೀತಿಯಿಂದ ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭಾವನಾತ್ಮಕವಾಗಿ ಹೇಳಿದ್ದಾರೆ. ಅವರ ಈ ಸಂದೇಶದ ವಿಡಿಯೋ ಇದೀಗ ಗಮನ ಸೆಳೆದಿದೆ.
sonia-gandhi-says-people-of-india-accepted-and-embraced-her-emotional-message


ನವದೆಹಲಿ, 24 ನವೆಂಬರ್ (ಹಿ.ಸ.):

ಭಾರತದ ಜನತೆ ತಮ್ಮನ್ನು ಪ್ರೀತಿಯಿಂದ ಸ್ವೀಕರಿಸಿ, ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭಾವನಾತ್ಮಕವಾಗಿ ಹೇಳಿದ್ದಾರೆ.

ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಬದುಕಿನ ಪಯಣದಲ್ಲಿ ಭಾರತೀಯರು ತೋರಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲವನ್ನು ಸ್ಮರಿಸಿರುವ ಅವರು, ದೇಶದ ಜನತೆಯೊಂದಿಗಿನ ತಮ್ಮ ಬಾಂಧವ್ಯದ ಕುರಿತು ಮನದಾಳದ ಮಾತುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಭಾರತಕ್ಕೆ ಆಗಮಿಸಿದ ಆರಂಭಿಕ ದಿನಗಳಿಂದಲೂ ಇಲ್ಲಿನ ಜನರು ತೋರಿದ ಪ್ರೀತಿ ಮತ್ತು ಆತ್ಮೀಯತೆ ತಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಸಮಾಜ ತಮ್ಮನ್ನು ಹೊರಗಿನವರೆಂದು ಪರಿಗಣಿಸದೆ, ತಮ್ಮವರಂತೆಯೇ ಸ್ವೀಕರಿಸಿದೆ ಎಂಬುದನ್ನು ಕೃತಜ್ಞತೆಯಿಂದ ಸ್ಮರಿಸಿರುವ ಸೋನಿಯಾ ಗಾಂಧಿ, ಭಾರತದ ಜನರು ನನ್ನನ್ನು ಒಪ್ಪಿಕೊಂಡರು, ಅಪ್ಪಿಕೊಂಡರು ಎಂದು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande