ವಿದ್ಯಾರ್ಥಿಗಳು ಮನಸ್ಸಿನ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು
ಬಳ್ಳಾರಿ, 24 ನವೆಂಬರ್ (ಹಿ.ಸ.) ಮಾನವನ ಮನಸ್ಸು ಅತ್ಯಂತ ಶಕ್ತಿಶಾಲಿಯಾಗಿದ್ದು, ಈ ಶಕ್ತಿಯನ್ನು ಸರಿಯಾಗಿ ಬಳಕೆ ಮಾಡಿದಲ್ಲಿ ಜೀವನದಲ್ಲಿ ಸಂತೋಷ, ನೆಮ್ಮದಿ, ಸ್ಪಷ್ಟತೆ ಮತ್ತು ಸಾಧನೆಯ ದಾರಿಯನ್ನು ಕಂಡುಕೊಳ್ಳುವುದು ಸುಲಭ ಎಂದು ಸ್ವಾಮಿ ತವಿಸಾ ಅವರು ತಿಳಿಸಿದ್ದಾರೆ. ವೀರಶೈವ ವಿದ್ಯಾವರ್ಧಕ ಸಂಘದ ರಾವ
ವಿದ್ಯಾರ್ಥಿಗಳು ಮನಸ್ಸಿನ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು


ವಿದ್ಯಾರ್ಥಿಗಳು ಮನಸ್ಸಿನ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು


ಬಳ್ಳಾರಿ, 24 ನವೆಂಬರ್ (ಹಿ.ಸ.)

ಮಾನವನ ಮನಸ್ಸು ಅತ್ಯಂತ ಶಕ್ತಿಶಾಲಿಯಾಗಿದ್ದು, ಈ ಶಕ್ತಿಯನ್ನು ಸರಿಯಾಗಿ ಬಳಕೆ ಮಾಡಿದಲ್ಲಿ ಜೀವನದಲ್ಲಿ ಸಂತೋಷ, ನೆಮ್ಮದಿ, ಸ್ಪಷ್ಟತೆ ಮತ್ತು ಸಾಧನೆಯ ದಾರಿಯನ್ನು ಕಂಡುಕೊಳ್ಳುವುದು ಸುಲಭ ಎಂದು ಸ್ವಾಮಿ ತವಿಸಾ ಅವರು ತಿಳಿಸಿದ್ದಾರೆ.

ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ `30 ನಿಮಿಷಗಳ ಮನಸ್ಸಿನ ಅದ್ಭುತ - ಆಂತರಿಕ ಕ್ಷೇಮಕ್ಕಾಗಿ' ವಿಷಯದ ಕುರಿತು ವಿಶೇಷ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಉಪನ್ಯಾಸ ನೀಡಿದರು.

ಮಾನಸಿಕ ಒತ್ತಡ, ಆತಂಕ, ಅನಗತ್ಯ ಚಿಂತನೆಗಳು, ನಿರೀಕ್ಷೆಗಳು ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳು ಮನಸ್ಸಿನ ನೆಮ್ಮದಿಯನ್ನು ಕುಂಠಿತಗೊಳಿಸುತ್ತವೆ. ಆಂತರಿಕ ಕ್ಷೇಮ ಎಂದರೆ ಒತ್ತಡವಿಲ್ಲದ ಜೀವನ ಮಾತ್ರವಲ್ಲ; ಸವಾಲುಗಳು ಎದುರಾದಾಗಲೂ ಮನಸ್ಸಿನ ಸಮತೋಲನ, ಸ್ಪಷ್ಟತೆ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಎಂದರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಒತ್ತಡ, ಸ್ಪರ್ಧೆ, ಭವಿಷ್ಯದ ಅನಿಶ್ಚಿತತೆ ಮತ್ತು ವೈಯಕ್ತಿಕ ಸವಾಲುಗಳನ್ನು ಎದುರಿಸುವ ಸಂದರ್ಭದಲ್ಲಿ ಮನಸ್ಸಿನ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಮನಸ್ಸನ್ನು ನಿರಂತರವಾಗಿ ಅಲೆದಾಡುವ ಸ್ಥಿತಿಯಿಂದ ಜಾಗೃತ, ಶಾಂತ ಮತ್ತು ಸೃಜನಶೀಲ ಸ್ಥಿತಿಗೆ ತರಲು ಅಭ್ಯಾಸ ಹಾಗೂ ಅರಿವು ಮುಖ್ಯ ಎಂದರು.

ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೋರಿ ನಾಗರಾಜ್ ಅವರು, ಶಿಕ್ಷಣವು ಕೇವಲ ತಾಂತ್ರಿಕ ಜ್ಞಾನ ಮತ್ತು ಶೈಕ್ಷಣಿಕ ಸಾಧನೆಗೆ ಸೀಮಿತ ಆಗದೇ ವಿದ್ಯಾರ್ಥಿಗಳ ವ್ಯಕ್ತಿತ್ವ, ಮಾನಸಿಕ ಸದೃಢತೆ, ಮೌಲ್ಯಗಳು, ಭಾವನಾತ್ಮಕ ಪ್ರಬುದ್ಧತೆ ಹಾಗೂ ಸಮಗ್ರ ಬೆಳವಣಿಗೆಗೂ ಮಹತ್ವ ನೀಡುತ್ತದೆ ಎಂದರು.

ಉಪ ಪ್ರಾಂಶುಪಾಲರಾದ ಡಾ. ದೊಡ್ಡಬಸವನ ಗೌಡ ಮತ್ತು ಡಾ. ಸವಿತಾ ಸೋನೋಲಿ ಅವರು, `ಜೀವನದಲ್ಲಿ ಶಿಸ್ತು, ಆತ್ಮವಿಶ್ವಾಸ, ಸಕಾರಾತ್ಮಕ ಮನೋಭಾವ ಮತ್ತು ಮಾನಸಿಕ ಸಮತೋಲನ ಅತ್ಯಂತ ಅಗತ್ಯ ಎಂದರು.

ಡಾ. ಮಾನಸ ಕೆ.ಸಿ. ಮತ್ತು ಡಾ. ಶೀಲಾ ಬಿ.ಪಿ. ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande