ಬಳ್ಳಾರಿ: ಶ್ರೀ ಕನಕದುರ್ಗಮ್ಮ ಗುಡಿ ಹುಂಡಿಯಲ್ಲಿ ರೂ. 1,17,87,950 ಕಾಣಿಕೆ ಸಂಗ್ರಹ
ಬಳ್ಳಾರಿ, 24 ನವೆಂಬರ್ (ಹಿ.ಸ.) ಬಳ್ಳಾರಿ ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಹುಂಡಿ ಎಣಿಕೆಯು ಭಕ್ತಾಧಿಗಳು, ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳ ಸಮಕ್ಷಮದಲ್ಲಿ ನಡೆದಿದ್ದು ಒಟ್ಟು ರೂ. 1,17,87,950 ಕಾಣಿಕೆ ಸಂಗ್ರಹವಾಗಿದೆ. ಹಿಂದೂ ಧಾರ್ಮಿಕ ದ
Rs 1,17,87,950 in offerings found


ಬಳ್ಳಾರಿ, 24 ನವೆಂಬರ್ (ಹಿ.ಸ.)

ಬಳ್ಳಾರಿ ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಹುಂಡಿ ಎಣಿಕೆಯು ಭಕ್ತಾಧಿಗಳು, ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳ ಸಮಕ್ಷಮದಲ್ಲಿ ನಡೆದಿದ್ದು ಒಟ್ಟು ರೂ. 1,17,87,950 ಕಾಣಿಕೆ ಸಂಗ್ರಹವಾಗಿದೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಶ್ರೀಮತಿ ಹೆಚ್. ಸವಿತಾ, ಉಪ ತಹಶೀಲ್ದಾರ್ ಮಂಜುನಾಥ ಕೆ.ಎಸ್.

ಅಧಿಕಾರಿಗಳಾದ ಗೌಡರ ಯುವರಾಜಗೌಡ, ಪೆÇಲೀಸ್ ಇಲಾಖೆ, ಬ್ಯಾಂಕ್ ಸಿಬ್ಬಂದಿ, ಗೃಹರಕ್ಷಕ ಸಿಬ್ಬಂದಿ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದವರ ಸಮಕ್ಷಮದಲ್ಲಿ ದೇವಸ್ಥಾನದ ಹುಂಡಿಯನ್ನು ತೆರೆದು, ಎಣಿಕೆ ನಡೆಸಲಾಯಿತು.

ಹುಂಡಿ ಎಣಿಕೆಯು ಪೂರ್ಣಗೊಂಡಾಗ ಒಟ್ಟು ರೂ. 1,17,87,950/- (ಒಂದು ಕೋಟಿ ಹದಿನೇಳು ಲಕ್ಷದ ಎಂಭತ್ತೇಳು ಸಾವಿರದ ಒಂಬೈನೂರ ಐವತ್ತು ರೂಪಾಯಿಗಳು) ಸಂಗ್ರಹವಾಗಿದ್ದು, ಈ ಮೊತ್ತವನ್ನು ಬ್ಯಾಂಕ್ಗೆ ಜಮಾ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande