ಕಾರ್ತಿಕ ಪೂರ್ಣಿಮೆ, ದೇವ ದೀಪಾವಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ
ನವದೆಹಲಿ, 24 ನವೆಂಬರ್ (ಹಿ.ಸ.): ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ತಿಕ ಪೂರ್ಣಿಮೆ ಮತ್ತು ದೇವ ದೀಪಾವಳಿ ಹಬ್ಬದ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಆದಿ ಶಂಕರಾಚಾರ್ಯರು ರಚಿಸಿರುವ ಗಂಗಾ ಸ್ತೋತ್ರದ ಮೊದಲ ಶ್ಲೋಕವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗಂಗಾ ಮಾತೆ
प्रधानमंत्री नरेन्द्र मोदी की एक्स पोस्ट।


ನವದೆಹಲಿ, 24 ನವೆಂಬರ್ (ಹಿ.ಸ.):

ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ತಿಕ ಪೂರ್ಣಿಮೆ ಮತ್ತು ದೇವ ದೀಪಾವಳಿ ಹಬ್ಬದ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಆದಿ ಶಂಕರಾಚಾರ್ಯರು ರಚಿಸಿರುವ ಗಂಗಾ ಸ್ತೋತ್ರದ ಮೊದಲ ಶ್ಲೋಕವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗಂಗಾ ಮಾತೆಯನ್ನು ಸ್ಮರಿಸಿದ್ದಾರೆ.

ಪ್ರತಿದಿನದಂತೆ ಮಂಗಳವಾರ ಬೆಳಿಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಿ, ಈ ಪವಿತ್ರ ಹಬ್ಬವು ಎಲ್ಲರ ಜೀವನದಲ್ಲಿ ಶ್ರದ್ಧೆ, ಭಕ್ತಿ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸಲಿ ಎಂದು ಹಾರೈಸಿದ್ದಾರೆ.

ಕಾರ್ತಿಕ ಪೂರ್ಣಿಮೆ ಮತ್ತು ದೇವ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಸೇವೆಯ ಮೂಲಕ ಪರೋಪಕಾರದ ಸಂದೇಶ ಸಾರುವ ಈ ಪವಿತ್ರ ಹಬ್ಬದಲ್ಲಿ ಪುಣ್ಯಸ್ನಾನ, ದಾನಧರ್ಮ ಮತ್ತು ದೀಪದಾನಕ್ಕೆ ವಿಶೇಷ ಮಹತ್ವವಿದೆ. ಈ ಸಂಪ್ರದಾಯಗಳು ಎಲ್ಲರ ಜೀವನದಲ್ಲಿ ಶ್ರದ್ಧೆ, ನಂಬಿಕೆ ಮತ್ತು ಸಕಾರಾತ್ಮಕತೆಯನ್ನು ಮೂಡಿಸಲಿ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಅವರು ಹಂಚಿಕೊಂಡಿರುವ ಶ್ಲೋಕ ಆದಿ ಶಂಕರಾಚಾರ್ಯರು ರಚಿಸಿದ ಗಂಗಾ ಸ್ತೋತ್ರದ ಮೊದಲ ಶ್ಲೋಕವಾಗಿದೆ.

ಶ್ಲೋಕ:

ದೇವಿ ಸುರೇಶ್ವರಿ ಭಗವತಿ ಗಂಗೆ ತ್ರಿಭುವನತಾರಿಣಿ ತರಳತರಂಗೇ। ಶಂಕರಮೌಲಿವಿಹಾರಿಣಿ ವಿಮಲೇ ಮಮ ಮತಿರಾಸ್ತಾಂ ತವ ಪಾದಕಮಲೇ॥

ಈ ಶ್ಲೋಕದಲ್ಲಿ ಗಂಗಾ ಮಾತೆಯನ್ನು ದೇವತೆಗಳ ಅಧಿಷ್ಠಾತೃ ದೇವತೆ, ಮೂರು ಲೋಕಗಳನ್ನು ಉದ್ಧರಿಸುವ ಪವಿತ್ರ ನದಿ ಹಾಗೂ ಭಗವಾನ್ ಶಿವನ ಜಟೆಯಲ್ಲಿ ನೆಲೆಸಿರುವ ನಿರ್ಮಲ ದೇವಿಯಾಗಿ ಸ್ತುತಿಸಲಾಗಿದೆ.

ತಮ್ಮ ಬುದ್ಧಿ, ಶ್ರದ್ಧೆ ಮತ್ತು ಶಕ್ತಿ ಸದಾ ಗಂಗಾ ಮಾತೆಯ ಪಾದಕಮಲಗಳಲ್ಲಿ ನೆಲೆಸಿರಲಿ ಎಂಬ ಪ್ರಾರ್ಥನೆಯನ್ನು ಈ ಶ್ಲೋಕ ಒಳಗೊಂಡಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande