ಸತ್ತ ಮರಿಯನ್ನೂ ಕಂಕುಳಲ್ಲಿ ಬಿಟ್ಟುಕೊಡದ ತಾಯಿ ಕೋತಿ: ಮನಕಲಕಿದ ತಾಯಿಯ ಮಮತೆ
ಗದಗ, 24 ನವೆಂಬರ್ (ಹಿ.ಸ.) ತಾಯಿಯ ಮಮತೆ ಎಂಬುದು ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಮೂಕ ಪ್ರಾಣಿಗಳಲ್ಲಿಯೂ ತಾಯಿಯ ಪ್ರೀತಿ ಎಷ್ಟು ಗಾಢವಾಗಿರುತ್ತದೆ ಎಂಬುದಕ್ಕೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಕಂಡು ಬಂದಿದೆ. ಮುಂಡರಗಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ಮರಿ ಮೃತಪಟ್ಟಿದ್ದರೂ ತಾಯಿ ಕೋತಿ
ಫೋಟೋ


ಫೋಟೋ


ಗದಗ, 24 ನವೆಂಬರ್ (ಹಿ.ಸ.)

ತಾಯಿಯ ಮಮತೆ ಎಂಬುದು ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಮೂಕ ಪ್ರಾಣಿಗಳಲ್ಲಿಯೂ ತಾಯಿಯ ಪ್ರೀತಿ ಎಷ್ಟು ಗಾಢವಾಗಿರುತ್ತದೆ ಎಂಬುದಕ್ಕೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಕಂಡು ಬಂದಿದೆ.

ಮುಂಡರಗಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ಮರಿ ಮೃತಪಟ್ಟಿದ್ದರೂ ತಾಯಿ ಕೋತಿಯು ಅದನ್ನು ತನ್ನ ಕಂಕುಳಲ್ಲಿಯೇ ಹೊತ್ತುಕೊಂಡು ಸುತ್ತಾಡುತ್ತಿರುವ ಮನಕಲಕುವ ದೃಶ್ಯ ಕಂಡುಬಂದಿದೆ. ಮರಿ ಮೃತಪಟ್ಟಿರುವುದು ಅರಿವಾಗಿದೆಯೋ ಇಲ್ಲವೋ ಎಂಬಂತೆ, ಅದನ್ನು ಕೆಳಗಿಳಿಸದೆ ಇತರ ಕೋತಿಗಳ ಗುಂಪಿನೊಂದಿಗೇ ತಾಯಿ ಕೋತಿ ಸುತ್ತಾಡುತ್ತಿದೆ.

ತನ್ನ ಕರುಳ ಕುಡಿಯಂತಿರುವ ಮರಿಯನ್ನು ಕಳೆದುಕೊಂಡರೂ ಅದನ್ನು ಬಿಟ್ಟು ಇರಲಾರದ ತಾಯಿ ಕೋತಿಯ ವರ್ತನೆ ನೋಡುಗರ ಮನಕಲಕುವಂತಿದೆ. ತಾಯಿ ಕೋತಿಯ ಈ ಮಮತೆಯ ದೃಶ್ಯ ಕಂಡ ಸ್ಥಳೀಯರು ಭಾವುಕರಾಗಿದ್ದು, ಹಲವರ ಕಣ್ಣಂಚಿನಲ್ಲಿ ನೀರು ತರಿಸಿದೆ.

ಮಾತನಾಡಲು ಬಾರದ ಮೂಕ ಪ್ರಾಣಿಗಳಲ್ಲಿಯೂ ತಾಯಿಯ ಪ್ರೀತಿ, ವಾತ್ಸಲ್ಯ ಮತ್ತು ಬಾಂಧವ್ಯ ಎಷ್ಟೊಂದು ಆಳವಾಗಿ ಬೇರೂರಿದೆ ಎಂಬುದನ್ನು ಈ ದೃಶ್ಯ ಮತ್ತೊಮ್ಮೆ ಸಾರಿ ಹೇಳಿದೆ. ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ ಸಂಕುಲದಲ್ಲಿಯೂ ತಾಯಿಯ ಮಮತೆ ಅಮೂಲ್ಯ ಎಂಬುದಕ್ಕೆ ಮುಂಡರಗಿಯಲ್ಲಿ ಕಂಡುಬಂದ ಈ ದೃಶ್ಯ ಮನಕಲಕುವ ನಿದರ್ಶನವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande