ಬಳ್ಳಾರಿ ಯುವಕ ಕಾಣೆ ಪತ್ತೆಗೆ ಮನವಿ
ಬಳ್ಳಾರಿ, 24 ನವೆಂಬರ್ (ಹಿ.ಸ.) ಬಳ್ಳಾರಿ ನಗರದ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಗೌತಮ್ ನಗರದ ಸರ್ಕಾರಿ ಶಾಲೆಯ ಹಿಂದುಗಡೆ ನಿವಾಸಿಯಾದ ಸಮೀರ್ ಬಾಷ ಎನ್ನುವ 26 ವರ್ಷದ ಯುವಕ, ನ.23 ರಂದು ಕಾಣೆಯಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಬ್ಇನ್ಸ
missing youth from Ballari


ಬಳ್ಳಾರಿ, 24 ನವೆಂಬರ್ (ಹಿ.ಸ.)

ಬಳ್ಳಾರಿ ನಗರದ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಗೌತಮ್ ನಗರದ ಸರ್ಕಾರಿ ಶಾಲೆಯ ಹಿಂದುಗಡೆ ನಿವಾಸಿಯಾದ ಸಮೀರ್ ಬಾಷ ಎನ್ನುವ 26 ವರ್ಷದ ಯುವಕ, ನ.23 ರಂದು ಕಾಣೆಯಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಬ್ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.

ಯುವಕನ ಚಹರೆ:

ಎತ್ತರ ಸುಮಾರು 5.5 ಅಡಿ, ಎಣ್ಣೆಗೆಂಪು ಮೈಬಣ್ಣ, ತೆಳುವಾದ ಮೈಕಟ್ಟು, ಕೋಲು ಮುಖ ಹೊಂದಿದ್ದಾನೆ. ಕಾಣೆಯಾದ ಸಂದರ್ಭದಲ್ಲಿ ಬೂದಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ.

ಯುವಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, 08392-244145, ಬಳ್ಳಾರಿ ಕಂಟ್ರೋಲ್ ರೂಂ ಸಂ.08392-258100, ಕೌಲ್ಬಜಾರ್ ಠಾಣೆ ಪಿಐ ಮೊ.9480803047, ಪಿಎಸ್ಐ ಮೊ.94808203084, 9480803085 ಗೆ ಕರೆಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande