ಕಲಾಕೃತಿಯಲ್ಲಿ ಶಾಸಕ ಸುನಿಲ್ ಗೌಡ ಪಾಟೀಲ್ ಅವರ ಭಾವಚಿತ್ರ ಕೆತ್ತಿದ ಅಭಿಮಾನಿಗಳು
ವಿಜಯಪುರ, 24 ನವೆಂಬರ್ (ಹಿ.ಸ.) ಅಭಿಮಾನ ಎನ್ನುವುದು ಕೇವಲ ಮಾತುಗಳಿಗೆ ಸೀಮಿತವಾಗದೆ, ಕಲಾಕೃತಿಗಳ ಮೂಲಕವೂ ಅಭಿವ್ಯಕ್ತವಾಗಬಹುದು ಎಂಬುದಕ್ಕೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಯುವಕರು ಸಾಕ್ಷಿಯಾಗಿದ್ದಾರೆ. ಹೊನವಾಡ ಗ್ರಾಮದ ಸುರೇಶ ನರಳೆ ಹಾಗೂ ಅವರ ಸ್ನೇಹಿತರು ಶಾಸಕ ಸುನಿಲ್ ಗೌಡ
ಅಭಿಮಾನ


ವಿಜಯಪುರ, 24 ನವೆಂಬರ್ (ಹಿ.ಸ.)

ಅಭಿಮಾನ ಎನ್ನುವುದು ಕೇವಲ ಮಾತುಗಳಿಗೆ ಸೀಮಿತವಾಗದೆ, ಕಲಾಕೃತಿಗಳ ಮೂಲಕವೂ ಅಭಿವ್ಯಕ್ತವಾಗಬಹುದು ಎಂಬುದಕ್ಕೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಯುವಕರು ಸಾಕ್ಷಿಯಾಗಿದ್ದಾರೆ.

ಹೊನವಾಡ ಗ್ರಾಮದ ಸುರೇಶ ನರಳೆ ಹಾಗೂ ಅವರ ಸ್ನೇಹಿತರು ಶಾಸಕ ಸುನಿಲ್ ಗೌಡ ಪಾಟೀಲ್ ಅವರ ಮೇಲಿನ ಪ್ರೀತಿ, ಅಭಿಮಾನ ಮತ್ತು ಗೌರವವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಶಾಸಕರ ಸುಂದರ ಭಾವಚಿತ್ರವನ್ನು ಕಲಾತ್ಮಕವಾಗಿ ಕೆತ್ತಿಸುವ ಮೂಲಕ ತಮ್ಮ ಅಭಿಮಾನಕ್ಕೆ ವಿಶೇಷ ಮೆರುಗು ನೀಡಿದ್ದಾರೆ. ಯುವಕರ ಈ ಸೃಜನಶೀಲ ಪ್ರಯತ್ನ ಗಮನ ಸೆಳೆದಿದೆ.

ಯುವಕರು ತೋರಿದ ನಿಷ್ಕಲ್ಮಶ ಪ್ರೀತಿ ಮತ್ತು ಗೌರವಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿರುವ ಶಾಸಕ ಸುನಿಲ್ ಗೌಡ ಪಾಟೀಲ್, ಅಭಿಮಾನ ಎನ್ನುವುದು ಕೇವಲ ಮಾತುಗಳಲ್ಲಿ ವ್ಯಕ್ತವಾಗುವ ಭಾವನೆಯಲ್ಲ. ಅದು ಹೃದಯದಿಂದ ಮೂಡಿಬರುವಂತಹದ್ದು. ಯುವಕರು ತಮ್ಮ ಪ್ರೀತಿಯನ್ನು ಕಲಾಕೃತಿಯ ಮೂಲಕ ವ್ಯಕ್ತಪಡಿಸಿರುವುದು ಸಂತೋಷ ಮತ್ತು ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.

ಸೇವಕನಾಗುವುದು ಒಂದು ಜವಾಬ್ದಾರಿ; ಆದರೆ ಜನರ ಹೃದಯದಲ್ಲಿ ಸ್ಥಾನ ಪಡೆಯುವುದು ಅದಕ್ಕಿಂತಲೂ ದೊಡ್ಡ ಗೌರವ. ಯುವಕರು ತೋರಿದ ಪ್ರೀತಿ, ಅಭಿಮಾನ ಮತ್ತು ವಿಶ್ವಾಸವೇ ನನ್ನ ನಿಜವಾದ ಶಕ್ತಿ. ನಿಮ್ಮೆಲ್ಲರ ಪ್ರೀತಿಗೆ ಬೆಲೆ ಕಟ್ಟಲಾಗದು. ನೀವು ಇಟ್ಟಿರುವ ವಿಶ್ವಾಸಕ್ಕೆ ಸದಾ ಋಣಿಯಾಗಿರುತ್ತೇನೆ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಜನರ ಪ್ರೀತಿ, ವಿಶ್ವಾಸ ಮತ್ತು ಬೆಂಬಲವೇ ದೊಡ್ಡ ಶಕ್ತಿ ಎಂದು ಉಲ್ಲೇಖಿಸಿರುವ ಅವರು, ಯುವ ಸಮುದಾಯದೊಂದಿಗಿನ ಆತ್ಮೀಯ ಸಂಬಂಧವನ್ನು ಸ್ಮರಿಸಿದ್ದಾರೆ.

ನೀವೆಲ್ಲ ಯುವಕರು ತೋರುವ ಪ್ರೀತಿಯೇ ನನ್ನ ಶಕ್ತಿ, ನಿಮ್ಮೆಲ್ಲರ ವಿಶ್ವಾಸವೇ ನನ್ನ ಜವಾಬ್ದಾರಿ ಎಂಬ ಸಂದೇಶದೊಂದಿಗೆ ಅಭಿಮಾನ ವ್ಯಕ್ತಪಡಿಸಿದ ಹೊನವಾಡದ ಸುರೇಶ ನರಳೆ ಹಾಗೂ ಅವರ ಸ್ನೇಹಿತರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಯುವಕರ ಈ ವಿಶಿಷ್ಟ ಅಭಿಮಾನ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande