ಜಪಾನ್ ನಲ್ಲಿ ಕನ್ನಡಿಗರೊಂದಿಗೆ ಬೆರೆತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು, 24 ನವೆಂಬರ್ (ಹಿ.ಸ.): ಜಪಾನ್‌ನ ನಾಗೋಯಾದಿಂದ ಒಸಾಕಾಗೆ ಶಿಂಕಾನ್‌ಸೆನ್ ವೇಗದ ರೈಲಿನಲ್ಲಿ ಪ್ರಯಾಣಿಸುವ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈಲು ನಿಲ್ದಾಣದಲ್ಲಿ ಕನ್ನಡಿಗರು ಮತ್ತು ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಆತ್ಮೀಯವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಪಾನ್‌ನಲ್
ಜಪಾನ್ ನಲ್ಲಿ ಕನ್ನಡಿಗರೊಂದಿಗೆ ಮುಖ್ಯಮಂತ್ರಿ


ಬೆಂಗಳೂರು, 24 ನವೆಂಬರ್ (ಹಿ.ಸ.):

ಜಪಾನ್‌ನ ನಾಗೋಯಾದಿಂದ ಒಸಾಕಾಗೆ ಶಿಂಕಾನ್‌ಸೆನ್ ವೇಗದ ರೈಲಿನಲ್ಲಿ ಪ್ರಯಾಣಿಸುವ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈಲು ನಿಲ್ದಾಣದಲ್ಲಿ ಕನ್ನಡಿಗರು ಮತ್ತು ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಆತ್ಮೀಯವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಪಾನ್‌ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಕುಶಲೋಪರಿ ವಿಚಾರಿಸಿದ ಅವರು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಜಪಾನ್‌ನಲ್ಲಿ ಕನ್ನಡಿಗರು ನಡೆಸುತ್ತಿರುವ ಜೀವನ ಹಾಗೂ ಅಲ್ಲಿನ ಅನುಭವಗಳ ಕುರಿತು ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಜಪಾನ್‌ನ ಸುಸಂಘಟಿತ ಶಿಂಕಾನ್‌ಸೆನ್ ರೈಲು ಜಾಲ, ಉತ್ತಮ ಸಂಪರ್ಕ ವ್ಯವಸ್ಥೆ ಮತ್ತು ದಕ್ಷ ಸಾರಿಗೆ ಮೂಲಸೌಕರ್ಯವನ್ನು ಹತ್ತಿರದಿಂದ ತಿಳಿದುಕೊಳ್ಳಲು ಮುಖ್ಯಮಂತ್ರಿಗೆ ಅವಕಾಶ ದೊರೆಯಿತು.

ಕರ್ನಾಟಕದಲ್ಲಿ ನಗರ ಸಾರಿಗೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಜಪಾನ್‌ನ ಸಾರಿಗೆ ವ್ಯವಸ್ಥೆಯ ಅಧ್ಯಯನ ಉಪಯುಕ್ತವಾಗಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande