ಸಾಗರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಶಿವಮೊಗ್ಗ, 22 ನವೆಂಬರ್ (ಹಿ.ಸ.): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸಾಗರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಗರ ತಾಲೂ
ಸಾಗರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ


ಶಿವಮೊಗ್ಗ, 22 ನವೆಂಬರ್ (ಹಿ.ಸ.):

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸಾಗರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಾಗರ ತಾಲೂಕಿನ ಕಬ್ಬನಾಡಕೊಪ್ಪ, ಮಲಬಾರ ಕ್ಯಾಂಪ್, ದೊಡ್ಡಬ್ಯಾಣ ಹಾಗೂ ಆಶ್ರಯ ಬಡಾವಣೆ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇವೆ.

ಅದೇ ರೀತಿ ಹುಲಿದೇವರಬನ, ಅರಳಿಕೊಪ್ಪ, ತಾವರೆಹಳ್ಳಿ, ಕಾನ್ಸೆಪುರ ಪರಿಶಿಷ್ಟ ಜಾತಿ ಕಾಲೋನಿ, ಚೂಣಿಕೊಪ್ಪ, ಹೊಸಕೊಪ್ಪ, ಜನ್ನೆಹಕ್ಕಲು, ಗಾಳಿಪುರ, ಅಂಬಾಪುರ, ಮಂಜಿನಕಾನು, ಜೆ.ಪಿ.ಕಟ್ಟೆ, ಅರಳಿಕಟ್ಟೆ, ಶ್ರೀಧರನಗರ-1, ಅಳೂರು, ಬರುವೆ, ಸೂರನಗದ್ದೆ-2, ಹಂದಿಗೋಡು, ಕೆಳದಿಮೇಲಿನಕೇರಿ, ನೇರಲಿಗೆ, ಕೆ.ಹೊಸಕೊಪ್ಪ, ಹಿರಳೆಮರೂರು, ಶುಂಠಿಕೊಪ್ಪ, ಹಾಗಲಪುರ, ಬಚ್ಚೋಡಿ, ಕಂಚಿಗದ್ದೆ, ಸೌತ್ಕೇರಿ, ದೊಡ್ಡಬೈಲು, ಕಾರ್ಗಲ್-1, ಹೆನ್ನಿ, ಮಾಸೂರುಪೇಟೆ, ಚನ್ನಾಪುರ, ಅರಮನೆಕೇರಿ, ಹಿರೆಹರಕ, ಮಾದರಸನಕೊಪ್ಪ, ಮಣಕಂದೂರು, ಚಿಕ್ಕಮತ್ತೂರು, ಬ್ಯಾಡರಕೊಪ್ಪ ಹಾಗೂ ಕುಡಿಗೆರೆ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗಳು ಖಾಲಿ ಇವೆ.

ಆಸಕ್ತ ಅಭ್ಯರ್ಥಿಗಳು ಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಡಿಸೆಂಬರ್ 19ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ 08183-200245 ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande