ಉಕ್ರೇನ್ ಸಂಘರ್ಷದ ನಡುವೆಯೂ ರಷ್ಯಾ ಜತೆಗಿನ ಸಂಬಂಧಗಳ ಮೂಲ ಸ್ವರೂಪ ಬದಲಾಗಿಲ್ಲ: ಇಸ್ರೇಲ್ ರಾಯಭಾರಿ
ಮಾಸ್ಕೋ, 02 ನವೆಂಬರ್ (ಹಿ.ಸ.): ಉಕ್ರೇನ್ ಸಂಘರ್ಷದ ಪರಿಣಾಮ ರಷ್ಯಾ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಬೀರಿದ್ದರೂ, ಉಭಯ ದೇಶಗಳ ನಡುವಿನ ಸಂಬಂಧಗಳ ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ರಷ್ಯಾದಲ್ಲಿನ ಇಸ್ರೇಲ್ ರಾಯಭಾರಿ ಓಡೆಡ್ ಜೋಸೆಫ್ ತಿಳಿಸಿದ್ದಾರೆ. ರಷ್ಯಾದ ಅಂತ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನಾಹು ಫೈಲ್ ಪೋಟೋ


ಮಾಸ್ಕೋ, 02 ನವೆಂಬರ್ (ಹಿ.ಸ.):

ಉಕ್ರೇನ್ ಸಂಘರ್ಷದ ಪರಿಣಾಮ ರಷ್ಯಾ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಬೀರಿದ್ದರೂ, ಉಭಯ ದೇಶಗಳ ನಡುವಿನ ಸಂಬಂಧಗಳ ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ರಷ್ಯಾದಲ್ಲಿನ ಇಸ್ರೇಲ್ ರಾಯಭಾರಿ ಓಡೆಡ್ ಜೋಸೆಫ್ ತಿಳಿಸಿದ್ದಾರೆ.

ರಷ್ಯಾದ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಿಯಾ ನೊವೊಸ್ತಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಉಭಯ ದೇಶಗಳ ನಡುವೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಗೌರವ ಮತ್ತು ಸಂವಾದದ ಪರಂಪರೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ಉಕ್ರೇನ್ ಸಂಘರ್ಷವು ಎರಡೂ ದೇಶಗಳ ಸಂಬಂಧಗಳ ಮೇಲೆ ಪರಿಣಾಮ ಬೀರಿದೆ. ಆದರೆ, ಸಂಬಂಧಗಳ ಮೂಲ ಆಶಯಕ್ಕೆ ಧಕ್ಕೆಯಾಗಿಲ್ಲ. ಪರಸ್ಪರ ಗೌರವವೇ ಈ ಸಂಬಂಧಗಳ ಬುನಾದಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಷ್ಯಾದ ನೀತಿಗಳ ಎಲ್ಲ ಅಂಶಗಳನ್ನು ಇಸ್ರೇಲ್ ಒಪ್ಪುವುದಿಲ್ಲ. ಆದಾಗ್ಯೂ, ಮಾಸ್ಕೋದೊಂದಿಗೆ ಮಾತುಕತೆಯ ಮಾರ್ಗಗಳನ್ನು ಮುಚ್ಚಿಲ್ಲ. ಉಭಯ ದೇಶಗಳ ನಡುವೆ ಉನ್ನತ ಮಟ್ಟದ ರಾಜತಾಂತ್ರಿಕ ಸಂವಾದವೂ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಇಸ್ರೇಲ್ ಸ್ಥಾಪನೆಯಾದ ಸಮಯದಿಂದಲೂ ರಷ್ಯಾದೊಂದಿಗಿನ ಸಂಬಂಧಗಳು ಮಹತ್ವದ್ದಾಗಿದ್ದು, ಇಂದಿಗೂ ಆ ಮಹತ್ವ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ಉಕ್ರೇನ್ ಸಂಘರ್ಷದ ನಡುವೆಯೂ ರಷ್ಯಾ ಮತ್ತು ಇಸ್ರೇಲ್ ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಬದ್ಧವಾಗಿವೆ ಎಂಬುದಕ್ಕೆ ರಾಯಭಾರಿಯ ಈ ಹೇಳಿಕೆ ಸೂಚನೆಯಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande