
ತೋರಣಗಲ್ಲು , 12 ನವೆಂಬರ್ (ಹಿ.ಸ.)
ತೋರಣಗಲ್ಲು ಅಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ಭರತ್ ಕುಮಾರ್ ಜಿ.ಎಸ್ (30) ನವೆಂಬರ್ 08 ರಂದು ನಾಪತ್ತೆಯಾಗಿದ್ದು, ಈ ಕುರಿತು ತೋರಣಗಲ್ಲುಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ವ್ಯಕ್ತಿಯು 5.4 ಅಡಿ ಎತ್ತರ, ದುಂಡು ಮುಖ, ಬಿಳಿ ಮೈಬಣ್ಣ, ಬಲಭಾಗದ ಎದೆಯ ಹತ್ತಿರ ಮಚ್ಚೆ ಇರುತ್ತದೆ. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್ ಹಾಗೂ ಗ್ರೇ ಕಲರ್ ಪ್ಯಾಂಟ್ ಧರಿಸಿದ್ದರು.
ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯು ಎಲ್ಲಾದರೂ ಕಂಡುಬಂದಲ್ಲಿ ಅಥವಾ ಮಾಹಿತಿ ದೊರೆತರೆ, ತೋರಣಗಲ್ಲು ಪೊಲೀಸ್ ಠಾಣೆ: 08395-250100, 9480803062, ಸಂಡೂರು ವೃತ್ತದ ಸಿ.ಪಿ.ಐ: 08395-260100, 9480803036, ತೋರಣಗಲ್ಲು ಪಿ.ಎಸ್.ಐ: 9480803010, ಬಳ್ಳಾರಿ ಎಸ್.ಪಿ.: 08392-258300, ಬಳ್ಳಾರಿ ಕಂಟ್ರೋಲ್ ರೂಮ್: 08392-279100 ಗೆ ಕರೆ ಮಾಡಿ ಮಾಹಿತಿ ನೀಡಲು ಪೊಲೀಸರು ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್