ಮಕ್ಕಳಾಗಲಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ
ಮಕ್ಕಳಾಗಲಿಲ್ಲ ಎಂದು ನಿತ್ಯವೂ ಹೀಯಾಳಿಸಿ ಜಗಳವಾಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ ನಡೆದಿದೆ.
Husband Killed By Wife


ಬೆಂಗಳೂರು, 12 ನವೆಂಬರ್ (ಹಿ.ಸ.):

ಮಕ್ಕಳಾಗಲಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಪತ್ನಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ನಗರದ ಲಕ್ಷ್ಮೀಪುರದಲ್ಲಿ ಈ ಘಟನೆ ನಡೆದಿದೆ.

ರಾಜಶೇಖರ್ (44) ಕೊಲೆಯಾದ ಪತಿ. ಮಾಲಾಶ್ರೀ ಕೊಲೆ ಮಾಡಿದ ಪತ್ನಿ.

ರಾಜಶೇಖರ್ ಬ್ಯಾಂಕ್ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮಕ್ಕಳಾಗದ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ರಾತ್ರಿಯಾದರೇ ಸಾಕು ಕುಡಿದು ಬರುತ್ತಿದ್ದ ರಾಜಶೇಖರ್, ಮಕ್ಕಳಾಗಲಿಲ್ಲ ಎಂದು ಹೀಯಾಳಿಸಿ ಪತ್ನಿ ಜತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ಗಲಾಟೆ ವಿಕೋಪಕ್ಕೆ ತಿರುಗಿದ್ದು ಪತ್ನಿ ಮಾಲಾಶ್ರೀ ಚಾಕುವಿನಿಂದ ಇರಿದು ಪತಿ ರಾಜಶೇಖರ್ನನ್ನು ಹತ್ಯೆಗೈದಿದ್ದಾಳೆ. ಈ ಕುರಿತು ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande