ಬಳ್ಳಾರಿಯಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆ: 11 ಮಂದಿ ಬಂಧನ, ಐವರು ಪರಾರಿ
ಅಪ್ರಾಪ್ತ ಬಾಲಕಿಯರ ಅಶ್ಲೀಲ ಚಿತ್ರ, ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಆರೋಪ; 45 ದಿನಗಳ ಕಾರ್ಯಾಚರಣೆಯಲ್ಲಿ ಅಕ್ಕ ಪಡೆ ಯಶಸ್ಸು
ಅಕ್ಕಪಡೆಯ 45 ದಿನಗಳ ಶ್ರಮ, ವೇಶ್ಯಾವಾಟಿಕೆ ಜಾಲದ 11 ಜನರ ಬಂಧನ


ಅಕ್ಕಪಡೆಯ 45 ದಿನಗಳ ಶ್ರಮ, ವೇಶ್ಯಾವಾಟಿಕೆ ಜಾಲದ 11 ಜನರ ಬಂಧನ


ಅಕ್ಕಪಡೆಯ 45 ದಿನಗಳ ಶ್ರಮ, ವೇಶ್ಯಾವಾಟಿಕೆ ಜಾಲದ 11 ಜನರ ಬಂಧನ


ಅಕ್ಕಪಡೆಯ 45 ದಿನಗಳ ಶ್ರಮ, ವೇಶ್ಯಾವಾಟಿಕೆ ಜಾಲದ 11 ಜನರ ಬಂಧನ


ಅಕ್ಕಪಡೆಯ 45 ದಿನಗಳ ಶ್ರಮ, ವೇಶ್ಯಾವಾಟಿಕೆ ಜಾಲದ 11 ಜನರ ಬಂಧನ


ಅಕ್ಕಪಡೆಯ 45 ದಿನಗಳ ಶ್ರಮ, ವೇಶ್ಯಾವಾಟಿಕೆ ಜಾಲದ 11 ಜನರ ಬಂಧನ


ಅಕ್ಕಪಡೆಯ 45 ದಿನಗಳ ಶ್ರಮ, ವೇಶ್ಯಾವಾಟಿಕೆ ಜಾಲದ 11 ಜನರ ಬಂಧನ


ಅಕ್ಕಪಡೆಯ 45 ದಿನಗಳ ಶ್ರಮ, ವೇಶ್ಯಾವಾಟಿಕೆ ಜಾಲದ 11 ಜನರ ಬಂಧನ


ಅಕ್ಕಪಡೆಯ 45 ದಿನಗಳ ಶ್ರಮ, ವೇಶ್ಯಾವಾಟಿಕೆ ಜಾಲದ 11 ಜನರ ಬಂಧನ


छठपूजेचा प्रकाश आणि नागरिक जबाबदारीचा नवा विचार


ಬಳ್ಳಾರಿ, 12 ನವೆಂಬರ್ (ಹಿ.ಸ.)

ಬಳ್ಳಾರಿ ನಗರದ ಮಿಲ್ಲರ್‌ಪೇಟೆಯಲ್ಲಿ ಅಪ್ರಾಪ್ತ ಬಾಲಕಿಯರು ಹಾಗೂ ಮಹಿಳೆಯರನ್ನು ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಜಾಲವನ್ನು ಪೊಲೀಸರ ಅಕ್ಕ ಪಡೆ ಪತ್ತೆಹಚ್ಚಿದೆ. ಸುಮಾರು 45 ದಿನಗಳ ಕಾಲ ನಿರಂತರ ನಿಗಾ ವಹಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರಕರಣದಲ್ಲಿ 16 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, 11 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಐವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಗುರುವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದು,

ಪ್ರಕರಣದಲ್ಲಿ ಗೋವಿಂದಮ್ಮ, ನಾಗರಾಜ, ರಾಜು, ಎರ್ರಸ್ವಾಮಿ, ಈರಮ್ಮ, ಮಹಮ್ಮದ್, ವಿನೂತಬಾಯಿ, ರಾಬಿಯಾ, ಗೌಸಿಯಾ, ಗಂಗಾಧರ, ಅನ್ವರ್, ಉಸ್ಮಾನ್, ರಾಹುಲ್, ಅಲಿಬಾಯಿ, ಅಶ್ರಫ್ ಹಾಗೂ ಬಾಬುರಾವ್ ಸೇರಿದಂತೆ 16 ಮಂದಿ ಆರೋಪಿಗಳಾಗಿದ್ದಾರೆ. ಇವರಲ್ಲಿ 11 ಮಂದಿಯನ್ನು ಬಂಧಿಸಲಾಗಿದ್ದು, ಐವರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದರು.

ಗೋವಿಂದಮ್ಮ ಹಾಗೂ ಇತರ ಆರೋಪಿಗಳು ಹಣ ಸಂಪಾದಿಸುವ ಉದ್ದೇಶದಿಂದ ಅಪ್ರಾಪ್ತ ಬಾಲಕಿಯರಿಗೆ ಹಣದ ಆಮಿಷವೊಡ್ಡಿ ಅವರ ಬೆತ್ತಲೆ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರು. ಅಲ್ಲದೆ, ವೇಶ್ಯಾವಾಟಿಕೆಗಾಗಿ ಬೆಂಗಳೂರು, ಅನಂತಪುರ, ವಿಜಯಪುರ ಸೇರಿದಂತೆ ವಿವಿಧ ಸ್ಥಳಗಳಿಗೆ ಬಾಲಕಿಯರನ್ನು ಕಳುಹಿಸುತ್ತಿದ್ದರು. ಲಕ್ಷ್ಮಿ ಪೂಜೆಯ ಹೆಸರಿನಲ್ಲಿ ಅಪ್ರಾಪ್ತ ಬಾಲಕಿಯರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಮುಂದಿಟ್ಟುಕೊಂಡು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪಗಳಿವೆ.

ಈ ಸಂಬಂಧ ದೂರುಗಳು ಬಂದ ಹಿನ್ನೆಲೆಯಲ್ಲಿ ಅಕ್ಕ ಪಡೆಯ ಸಿಬ್ಬಂದಿ ಕಳೆದ ಒಂದೂವರೆ ತಿಂಗಳಿಂದ ಮಿಲ್ಲರ್‌ಪೇಟೆಯಲ್ಲಿ ನಿರಂತರ ಗಸ್ತು ನಡೆಸಿ, ಆರೋಪಿಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದರು. ಸಾಕ್ಷ್ಯಗಳನ್ನು ಸಂಗ್ರಹಿಸಿದ ಬಳಿಕ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವರಿಸಿದರು.

ತನಿಖೆಯಲ್ಲಿ ಆರೋಪಿಗಳು ಅಮಾಯಕ ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಮಹಿಳೆಯರು ಹಾಗೂ ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ದಂಧೆಯಿಂದ ಬಂದ ಹಣವನ್ನು ಮೂರು ಭಾಗಗಳಾಗಿ ಹಂಚಿಕೊಳ್ಳಲಾಗುತ್ತಿತ್ತು. ಒಂದು ಭಾಗವನ್ನು ಸ್ವಾಮಿಗೆ, ಮತ್ತೊಂದು ಭಾಗವನ್ನು ಸಂತ್ರಸ್ತರಿಗೆ ಹಾಗೂ ಉಳಿದ ಭಾಗವನ್ನು ಆರೋಪಿಗಳು ಹಂಚಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಸಂತ್ರಸ್ತ ಮಹಿಳೆಯರ ವಿವಿಧ ಭಂಗಿಗಳ ಚಿತ್ರಗಳು ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಯಾರಿಗೆ ಕಳುಹಿಸಲಾಗುತ್ತಿತ್ತು ಹಾಗೂ ಅವುಗಳನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳು ದಂಧೆ ನಡೆಸಲು ಸಂಕೇತ ಪದಗಳನ್ನು ಬಳಸುತ್ತಿದ್ದರು. ಸಂತ್ರಸ್ತ ಮಹಿಳೆಯರನ್ನು 'ಪೇಪರ್' ಎಂದೂ, ಸ್ವಾಮಿಯನ್ನು 'ಡಿಆರ್' ಎಂದೂ ಕರೆಯುತ್ತಿದ್ದರು ಎಂದು ತಿಳಿಸಿದರು.

ಈ ಕಾರ್ಯಾಚರಣೆಯಲ್ಲಿ ಅಕ್ಕ ಪಡೆಯ ಸಿಬ್ಬಂದಿಗಳಾದ ಶಾಹೀದಾ, ಅನಿತಾ, ರುಕಿಯಾ ಭಾನು, ಅಂಬರಿನ್, ಲಲಿತಮ್ಮ, ಗಿರಿಜಾ ಹಾಗೂ ಎಪಿಎಂಸಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಆನಂದರೆಡ್ಡಿ, ಮಾರೇಶ, ಗೋರೆಂಟಿ, ಕೋನಪ್ಪ, ದೀಪೇಂದ್ರ ಪಾಟೀಲ್, ಬಸವರಾಜ, ವಸೂರಪ್ಪ, ಗೋವಿಂದ, ರಾಧ ಮತ್ತು ಅನಂತಲಕ್ಷ್ಮೀ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ 45 ದಿನಗಳ ಕಾಲ ಶ್ರಮಿಸಿದ್ದಾರೆ. ಸಾಕ್ಷ್ಯಗಳನ್ನು ಸಂಗ್ರಹಿಸಿ ಜಾಲವನ್ನು ಪತ್ತೆಹಚ್ಚುವಲ್ಲಿ ಸಿಬ್ಬಂದಿ ತೋರಿದ ಬದ್ಧತೆ ಮತ್ತು ಕರ್ತವ್ಯನಿಷ್ಠೆ ಶ್ಲಾಘನೀಯ ಎಂದು ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 243/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ವಿವಿಧ ಕಲಂಗಳು, ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆಯ ಕಲಂ 4 ಮತ್ತು 5, ಪೋಕ್ಸೊ ಕಾಯ್ದೆಯ ಕಲಂ 13, 14 ಮತ್ತು 15 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(ಇ), 67(ಎ) ಮತ್ತು 67(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಪರಾರಿಯಾಗಿರುವ ಐವರು ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande