ಹಿರೇಸಂಶಿ ಕ್ರಾಸ್–ದೇವನಾಳ ಕೂಡು ರಸ್ತೆ ಅಭಿವೃದ್ಧಿಗೆ: ಶಾಸಕ ಜಿ.ಟಿ. ಪಾಟೀಲ ಭೂಮಿಪೂಜೆ
ಬಾಗಲಕೋಟೆ, 01 ನವೆಂಬರ್ (ಹಿ.ಸ.) ಬೀಳಗಿ ಮತಕ್ಷೇತ್ರದ ಬಾಗಲಕೋಟ ತಾಲೂಕಿನ ಹಿರೇಸಂಶಿ ಕ್ರಾಸ್ನಿಂದ ದೇವನಾಳ ಕೂಡು ರಸ್ತೆಯವರೆಗೆ ರಸ್ತೆ ಅಭಿವೃದ್ಧಿಪಡಿಸುವ ಮಹತ್ವದ ಕಾಮಗಾರಿಗೆ ಶಾಸಕ ಜಿ.ಟಿ. ಪಾಟೀಲ ಅವರು ಭೂಮಿಪೂಜೆ ನೆರವೇರಿಸಿದರು. ₹950 ಲಕ್ಷ (₹9.50 ಕೋಟಿ) ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿ
ರಸ್ತೆ ಅಭಿವೃದ್ಧಿ


ಬಾಗಲಕೋಟೆ, 01 ನವೆಂಬರ್ (ಹಿ.ಸ.)

ಬೀಳಗಿ ಮತಕ್ಷೇತ್ರದ ಬಾಗಲಕೋಟ ತಾಲೂಕಿನ ಹಿರೇಸಂಶಿ ಕ್ರಾಸ್ನಿಂದ ದೇವನಾಳ ಕೂಡು ರಸ್ತೆಯವರೆಗೆ ರಸ್ತೆ ಅಭಿವೃದ್ಧಿಪಡಿಸುವ ಮಹತ್ವದ ಕಾಮಗಾರಿಗೆ ಶಾಸಕ ಜಿ.ಟಿ. ಪಾಟೀಲ ಅವರು ಭೂಮಿಪೂಜೆ ನೆರವೇರಿಸಿದರು.

₹950 ಲಕ್ಷ (₹9.50 ಕೋಟಿ) ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಈ ರಸ್ತೆ ಡಾಂಬರೀಕರಣ ಕಾಮಗಾರಿಯಿಂದ ಹಿರೇಸಂಶಿ ಕ್ರಾಸ್ನಿಂದ ದೇವನಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ವ್ಯವಸ್ಥೆ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ. ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಎದುರಿಸುತ್ತಿದ್ದ ತೊಂದರೆಗಳಿಗೆ ಕಾಮಗಾರಿ ಪೂರ್ಣಗೊಂಡ ಬಳಿಕ ಪರಿಹಾರ ದೊರೆಯಲಿದೆ.

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಜಿ.ಟಿ. ಪಾಟೀಲ, ಮತಕ್ಷೇತ್ರದ ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕವನ್ನು ಸುಧಾರಿಸುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣದಿಂದ ಗ್ರಾಮೀಣ ಪ್ರದೇಶಗಳ ಜನರ ಸಂಚಾರಕ್ಕೆ ಅನುಕೂಲವಾಗುವುದರ ಜೊತೆಗೆ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ರೈತರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಹಿರೇಸಂಶಿ ಕ್ರಾಸ್ನಿಂದ ದೇವನಾಳ ಕೂಡು ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ನಿಗದಿತ ಗುಣಮಟ್ಟದಲ್ಲಿ ಹಾಗೂ ಸಮಯಮಿತಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಜಯಕುಮಾರ ಸರನಾಯಕ, ವಿವಿಧ ಮುಖಂಡರು, ಸಾರ್ವಜನಿಕರು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande