ಮೈಸೂರು ದಸರಾ ಬಹುರೂಪಿ ಯುವ ಕವಿಗೋಷ್ಠಿಗೆ ಬಂಗಾರಪೇಟೆ ಕವಿ ಲಕ್ಷ್ಮಯ್ಯ ಆಯ್ಕೆ
ಮೈಸೂರು ದಸರಾ ಬಹುರೂಪಿ ಯುವ ಕವಿಗೋಷ್ಠಿಗೆ ಬಂಗಾರಪೇಟೆ ಕವಿ ಲಕ್ಷ್ಮಯ್ಯ ಆಯ್ಕೆ.
ಕವಿ ಲಕ್ಷö್ಮಯ್ಯ


ಕೋಲಾರ, 09 ಅಕ್ಟೋಬರ್ (ಹಿ.ಸ) : ಮೈಸೂರು ದಸರಾ ಬಹುರೂಪಿ ಯುವ ಕವಿಗೋಷ್ಠಿ ಬಿ ಎಂ ಶ್ರೀ ಸಭಾಂಗಣ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸ ಗಂಗೋತ್ರಿ ಮೈಸೂರಿನಲ್ಲಿ ನಡೆಯಲಿದೆ. ಯುವ ಕವಿ ಗೋಷ್ಠಿಗೆ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಸಾಹಿತಿ,ಸಂಶೋಧಕ, ಕವಿ ಲಕ್ಷ್ಮಯ್ಯ ವಿ ರವರು ಆಯ್ಕೆ ಯಾಗಿದ್ದಾರೆ.

ಈ ಮೈಸೂರು ದಸರಾ ಬಹುರೂಪಿ ಯುವ ಕವಿ ಗೋಷ್ಠಿಯ ಉದ್ಘಾಟನೆಯನ್ನು ಪ್ರಖ್ಯಾತ ಕವಯತ್ರಿ ಯಾದ ಡಾ ಕೆ ಷರೀಪಾ ರವರು ಉದ್ಘಾಟನೆ ಮಾಡಲಿದ್ದು, ಪ್ರಸಿದ್ಧ ಹಿರಿಯ ಕವಿಗಳು ಆದ ಎಚ್ ಗೋವಿಂದಯ್ಯ ರವರು ಕವಿಗೋಷ್ಠಿ ಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಲಕ್ಷ್ಮಯ್ಯ ವಿ ರವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಕೋಲಾರ ಜಿಲ್ಲೆಯ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕವಿ ಲಕ್ಷ್ಮಯ್ಯ ವಿ ರವರು ಬಂಗಾರಪೇಟೆಯ ಗೌತಮನಗರದ ನಿವಾಸಿಯಾಗಿದ್ದು, ಸುಮಾರು ೨೫ ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಾ ಸುಮಾರು ೬ ಕೃತಿಗಳನ್ನು ಹೊರತಂದಿದ್ದಾರೆ. ಬಂಗಾರಪೇಟೆಯ ಬಂಗಾರ ದರ್ಶನ, ಕೋಲಾರ ಜಿಲ್ಲೆಯ ಕೋಲಾರದ ದರ್ಶನ, (ಐತಿಹಾಸಿಕ ಸಂಶೋಧನಾ ಕೃತಿಗಳು) ಭಾವನೆಗಳಲ್ಲರಳಿದ ಬಂಗಾರದಕ್ಷರಗಳು, (ಕವನ ಸಂಕಲನ ) ಕನ್ನಡದಕ್ಷರಗಳಲ್ಲಿ ಕೆತ್ತಿದ ಕವಿತೆಯ ಶಿಲ್ಪಗಳು (ಕವನ ಸಂಕಲನ) ಡಾ ಬಿ ಆರ್ ಅಂಬೇಡ್ಕರ್ ರವರ ವ್ಯಕ್ತಿ ಚಿತ್ರಣ ಪುಸ್ತಕಗಳನ್ನು ರಚಿಸಿದ್ದಾರೆ.

ಲಕ್ಷ್ಮಯ್ಯ ವಿ ರವರ ಕನ್ನಡದಕ್ಷರಗಳಲ್ಲಿ ಕೆತ್ತಿದ ಕವಿತೆಯ ಶಿಲ್ಪಗಳು ಕವನ ಸಂಕಲನ ದಿಂದ ಕವಿತೆಯ ಶಿಲ್ಪಗಳು ಎಂಬ ಕವನ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪದವಿಯ ಪಠ್ಯವಾಗಿದೆ. ಅವರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿ,ವಿಚಾರ ಗೋಷ್ಠಿ ಹಾಗೂ ಜಿಲ್ಲೆ ತಾಲೂಕು ಮಟ್ಟದ ಕವಿಗೋಷ್ಠಿ ಗಳಲ್ಲಿ ಭಾಗವಹಿಸಿದ್ದಾರೆ.

ರಾಜ್ಯ ಅರಳು ಸಾಹಿತ್ಯ ಪ್ರಶಸ್ತಿ, ರಾಜ್ಯ ಟಿಪ್ಪು ಸದ್ಭಾವನಾ ಪ್ರಶಸ್ತಿ, ಪ್ರಜಾ ರತ್ನ ಪ್ರಶಸ್ತಿ, ಉತ್ತಮ ಗ್ರಂಥಾಲಯ ಓದುಗ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇರಳ-ಕಾಸರಗೋಡು ಅಂತರರಾಜ್ಯ ಕನ್ನಡ ಪಯಸ್ವಿನಿ ಪ್ರಶಸ್ತಿ,ಕನ್ನಡ ಕಟ್ಟಾಳು,ಭಾನಂದೂರು ಕೆಂಪಯ್ಯ ಪ್ರಶಸ್ತಿ ಇನ್ನಿತರ ಹಲವಾರು ಪ್ರಶಸ್ತಿಗಳು ಲಭಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande