ದಿವಂಗತ ಎಚ್.ವೈ. ಮೇಟಿ ಜನ್ಮದಿನ ಸ್ಮರಣೆ: ತಂದೆಯ ಮಾರ್ಗದರ್ಶನದಲ್ಲಿ ಜನಸೇವೆ ಮುಂದುವರಿಸುವೆ–ಶಾಸಕ ಉಮೇಶ್ ಮೇಟಿ
ಬಾಗಲಕೋಟೆ , 09 ಅಕ್ಟೋಬರ್ (ಹಿ.ಸ.) ಮಾಜಿ ಸಚಿವ ದಿವಂಗತ ಎಚ್.ವೈ. ಮೇಟಿ ಹುಟ್ಟುಹಬ್ಬದ ಅಂಗವಾಗಿ ಮೇಟಿ ಕುಟುಂಬದ ಸದಸ್ಯರು ಅವರನ್ನು ಸ್ಮರಿಸಿ ಭಾವಪೂರ್ಣ ಗೌರವ ಸಲ್ಲಿಸಿದರು. ಹುಟ್ಟುಹಬ್ಬದ ಅಂಗವಾಗಿ ನಡೆದ ಸ್ಮರಣಾ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ದಿವಂಗತ ಎಚ್.ವೈ. ಮೇಟಿ ಅವರ ಭಾವಚಿತ್ರಕ್ಕೆ ಪ
ಮೇಟಿ ಸ್ಮರಣೆ


ಬಾಗಲಕೋಟೆ , 09 ಅಕ್ಟೋಬರ್ (ಹಿ.ಸ.)

ಮಾಜಿ ಸಚಿವ ದಿವಂಗತ ಎಚ್.ವೈ. ಮೇಟಿ ಹುಟ್ಟುಹಬ್ಬದ ಅಂಗವಾಗಿ ಮೇಟಿ ಕುಟುಂಬದ ಸದಸ್ಯರು ಅವರನ್ನು ಸ್ಮರಿಸಿ ಭಾವಪೂರ್ಣ ಗೌರವ ಸಲ್ಲಿಸಿದರು.

ಹುಟ್ಟುಹಬ್ಬದ ಅಂಗವಾಗಿ ನಡೆದ ಸ್ಮರಣಾ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ದಿವಂಗತ ಎಚ್.ವೈ. ಮೇಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಸರಳತೆ, ಜನಪರ ಕಾಳಜಿ ಹಾಗೂ ಸಾರ್ವಜನಿಕ ಜೀವನದಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಕುಟುಂಬದ ಹಿರಿಯರು ಹಾಗೂ ಬಂಧುಗಳು ಮೇಟಿ ಅವರೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡು, ಅವರ ವ್ಯಕ್ತಿತ್ವ ಹಾಗೂ ಜನರೊಂದಿಗೆ ಹೊಂದಿದ್ದ ಆತ್ಮೀಯ ಬಾಂಧವ್ಯವನ್ನು ಮೆಲುಕು ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮೇಶ್ ಮೇಟಿ, ತಮ್ಮ ತಂದೆ ದಿವಂಗತ ಎಚ್.ವೈ. ಮೇಟಿ ಅವರು ಸಾರ್ವಜನಿಕ ಜೀವನದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದು ಹೇಗೆ ಎಂಬುದಕ್ಕೆ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.

“ತಂದೆಯವರ ಆದರ್ಶ, ಮಾರ್ಗದರ್ಶನ ಮತ್ತು ಜನಪರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರ ಆಶಯದಂತೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ” ಎಂದು ಉಮೇಶ್ ಮೇಟಿ ಭರವಸೆ ನೀಡಿದರು.

ತಂದೆಯವರೊಂದಿಗೆ ತಮ್ಮ ಕುಟುಂಬಕ್ಕಷ್ಟೇ ಅಲ್ಲದೆ, ಕ್ಷೇತ್ರದ ಜನರಿಗೂ ಭಾವನಾತ್ಮಕ ನಂಟಿತ್ತು. ಅವರ ಸಾರ್ವಜನಿಕ ಸೇವೆಯ ಪರಂಪರೆಯನ್ನು ಮುಂದುವರಿಸುವುದು ತಮ್ಮ ಜವಾಬ್ದಾರಿಯಾಗಿದೆ. ಜನರ ವಿಶ್ವಾಸವನ್ನು ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ತಿಳಿಸಿದರು.

ಮೇಟಿ ಕುಟುಂಬದ ಸದಸ್ಯರು ಮಾತನಾಡಿ, ದಿವಂಗತ ಎಚ್.ವೈ. ಮೇಟಿ ಅವರ ಜೀವನ ಮತ್ತು ಸೇವಾ ಮನೋಭಾವ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದು, ಅವರ ಸ್ಮರಣೆ ಸದಾ ಜೀವಂತವಾಗಿರಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೇಟಿ ಕುಟುಂಬದ ಸದಸ್ಯರು, ಆಪ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ದಿವಂಗತ ಎಚ್.ವೈ. ಮೇಟಿ ಅವರಿಗೆ ಗೌರವ ನಮನ ಸಲ್ಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande