ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಲ್ಲ ; ಕಾಂಗ್ರೆಸ್ ನಾಯಕ ಶೇಷಾಪುರ ಗೋಪಾಲ್ ಸ್ಪಷ್ಟನೆ
ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಲ್ಲ ; ಕಾಂಗ್ರೆಸ್ ನಾಯಕ ಶೇಷಾಪುರ ಗೋಪಾಲ್ ಸ್ಪಷ್ಟನೆ
ಶೇಷಾಪುರ ಗೋಪಾಲ್


ಕೋಲಾರ, 09 ಅಕ್ಟೋಬರ್ (ಹಿ.ಸ): ಸಾಮಾಜಿಕ ಜಾಲತಾಣಗಳಲ್ಲಿ ಕೋಲಾರ ಜಿಲ್ಲಾಧಿಕಾರಿಗಳು ಶ್ರೀನಿವಾಸಪುರ ತಹಸಿಲ್ದಾರರಿಗೆ ಬರೆದ ಪತ್ರವೊಂದು ಹರಿದಾಡುತ್ತಿತ್ತು. ಅದರಲ್ಲಿ ಕೋಲಾರದ ಎನ್ ಅಂಬರೀಶ್ ಎನ್ನುವವರು ನನ್ನ ಬಗ್ಗೆ ಅಂದರೆ ಶೇಷಾಪುರ ಗೋಪಾಲ್ ಎನ್ನುವರು ಸರ್ಕಾರಕ್ಕೆ ದೂರು ಕೊಟ್ಟು ಶೇಷಾಪುರ ಗ್ರಾಮದಲ್ಲಿ ಸರ್ವೇ ನಂಬರ್ ೨೪/೧, ೨೯, ೩೦, ೩೧ ಮತ್ತು ೭೩ ರಲ್ಲಿ ೧೦ ಎಕರೆಗೂ ಮೇಲ್ಪಟ್ಟು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವುದಾಗಿ ಆರೋಪಿಸಲಾಗಿದೆ. ಆರೋಪಿಸಲಾದ ಜಮೀನುಗಳು ನಮ್ಮ ಪಿತ್ರಾರ್ಜಿತ ಆಸ್ತಿಯಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಶ್ರೀನಿವಾಸಪುರ ತಾಲ್ಲೂಕಿನ ಶೇಷಾಪುರ ಗೋಪಾಲ್ ಸ್ಪಷ್ಟಪಡಿಸಿದ್ದಾರೆ.

ಶೇಷಾಪುರದ ಗ್ರಾಮದಲ್ಲಿ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿ ಕೋಳಿ ಫಾರಂ ಮತ್ತು ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದನ್ನು ಪರಿಶೀಲಿಸಿ ಕಾನೂನು ರೀತಿಯ ಕ್ರಮ ಜರುಗಿಸಿ ಅಕ್ರಮ ವ್ಯಸಗಿರುವ ನನ್ನ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ ಸರ್ಕಾರಕ್ಕೆ ವರದಿ ಕೊಡಬೇಕು ಎಂದು ಕೋಲಾರದ ಅಂಬರೀಶ್ ಕಂದಾಯ ಸಚಿವರಿಗೆ ಹಾಗೂ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ನಮ್ಮ ಗಮನಕ್ಕೆ ಬಂದಾಗ ನಾವು ಪ್ರಸ್ತಾಪಿತ ಸರ್ವೆ ನಂಬರುಗಳನ್ನು ಪರಿಶೀಲಿಸಿದಾಗ ಅವೆಲ್ಲವೂ ನಮ್ಮ ಪೂರ್ವಜರ ಆಸ್ತಿಗಳಾಗಿರುತ್ತವೆ. ಸುಮಾರು ೫ ತಲೆಮಾರಿನ ನಮ್ಮ ವಂಶಸ್ಥರು ಈ ಜಮೀನಿನಲ್ಲಿ ಅನುಭವದಲ್ಲಿ ಇರುವ ದಾಖಲೆಗಳು ಸಹ ನಮ್ಮತ್ರ ಇರುತ್ತದೆ. ಕೊಟ್ಟಿರುವ ದೂರಿಗೆ ಯಾವುದೇ ತಲೆ ಬುಡ ಇಲ್ಲದ ಒಂದು ರಾಜಕೀಯ ದುರುದ್ದೇಶದ ಸುಳ್ಳು ದೂರು ಆಗಿರುತ್ತದೆ ಎಂದು ತಿಳಿಸಿದ್ದಾರೆ.

ನಮ್ಮ ತಂದೆಯಿಂದ ನಮಗೆ ಬಂದ ಪಿತ್ರಾರ್ಜಿತ ಸ್ವತ್ತು ಮತ್ತು ನಾವು ಅಣ್ಣ-ತಮ್ಮಂದಿರು ಒಟ್ಟು ಕುಟುಂಬದಲ್ಲಿ ಸಂಪಾದಿಸಿದ ಜಮೀನುಗಳು ಸೇರಿ ಸುಮಾರು ೧೦೦ ಎಕರೆ ಜಮೀನನ್ನು ಮೂರು ವರ್ಷಗಳ ಹಿಂದೆ ನಾನು ನನ್ನ ಇಬ್ಬರು ತಮ್ಮಂದಿರಿಗೆ ಬಿಟ್ಟು ಕೊಟ್ಟಿರುತ್ತೇನೆ. ಇದಕ್ಕೆ ಸಂಬAಧಿಸಿದ ಕಾನೂನು ರೀತಿಯ ವಿಭಾಗ ಪತ್ರಗಳನ್ನು ಸಹ ತಯಾರು ಮಾಡಿಕೊಂಡಿರುತ್ತೇವೆ. ಯಾವುದೇ ಒಂದು ಗುಂಟೆ ಜಮೀನು ಸಹ ನಾನು ಇಟ್ಟುಕೊಂಡಿರುವುದಿಲ್ಲ ಎಂದು ತಿಳಿಸಿದ್ದಾರೆ.

ಸರಳ ಜೀವನವನ್ನು ಆರಿಸಿಕೊಂಡಿರುವ ನಾನು ಯಾವುದೇ ಹಣ, ಆಸ್ತಿ ಮತ್ತು ಅಧಿಕಾರದ ವ್ಯಾಮೋಹಕ್ಕೆ ಒಳಪಡದೆ ಅಧಿಕಾರದ ಅಂಗಳಗಳಿAದ ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಂಡಿರುತ್ತೇನೆ. ಶೈಕ್ಷಣಿಕವಾಗಿ ಪ್ರತಿಭಾವಂತನಾದರೂ ಬಡತನದ ಬೇಗೆಯಿಂದಾಗಿ ಹಲವಾರು ಅವಕಾಶಗಳಿಂದ ವಂಚಿತನಾದ ನಾನು ನಮ್ಮ ಸಮಾಜದಲ್ಲಿ ಯಾರೊಬ್ಬರಿಗೂ ನನ್ನ ಪರಿಸ್ಥಿತಿ ಬರುವುದು ಬೇಡ ಎನ್ನುವ ಕಾರಣಕ್ಕೆ ಜಿಲ್ಲೆಯ ಮೇಧಾವಿ ನಾಯಕನಾದ ರಮೇಶ್ ಕುಮಾರ್ ಅವರ ಒಟ್ಟಿಗೆ ಸೇರಿ ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ, ತರಬೇಕೆಂದು ಪ್ರಯತ್ನಪಟ್ಟಿದ್ದು ನಿಜ ಎಂದಿದ್ದರೆ.

ಆದರೆ ಅಧಿಕಾರ ಬಂದ ನಂತರ ಅವರು ನಾವು ಅಂದುಕೊAಡAತಹ ನಾಯಕರಲ್ಲ ಎನ್ನುವುದು ಮನವರಿಕೆಯಾದ ನಂತರ ಅವರಿಂದ ದೂರ ಆಗಿ ಜಿಲ್ಲೆಯಲ್ಲಿನ ದುರಾಡಳಿತ ಮತ್ತು ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತಿದ್ದೇನೆ ಮತ್ತು ಮುಂದುವರಿಸುತ್ತೇನೆ ಕೂಡ.

ಅಂಬರೀಶ್ ರವರು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಅವರ ಮುಖ ಪರಿಚಯ ಕೂಡ ನನಗೆ ಇದ್ದಹಾಗೆ ಕಾಣುತ್ತಿಲ್ಲ. ನನ್ನ ಊರು, ನನ್ನ ಜಮೀನು ಮತ್ತು ನನ್ನ ಕುಟುಂಬದ ಪರಿಚಯ ಕೂಡ ಅವರಿಗೆ ಇಲ್ಲ. ಏಕೆಂದರೆ ನನ್ನ ಬಗ್ಗೆ ಅಥವಾ ನನ್ನ ಕುಟುಂಬದ ಬಗ್ಗೆ ಅವರಿಗೆ ಯಾವ್ದು ದ್ವೇಷ ಇಲ್ಲ. ದೂರನ್ನು ಕೊಡುವುದಕ್ಕೆ ಮೊದಲು ದಾಖಲೆಗಳನ್ನು ಪರಿಶೀಲಿಸುವುದು ಬಹಳಷ್ಟು ಮುಖ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಅವರು ಯಾವೊಬ್ಬ ನಾಯಕನಿಗಾಗಿ ಈ ಪ್ರಯತ್ನಗಳನ್ನು ಮಾಡುತ್ತಿದ್ದೀಯೋ ಅವೆಲ್ಲವನ್ನು ನಾವು ಬಹಳಷ್ಟು ದಿನಗಳ ಹಿಂದೆ ಮಾಡಿ ಸುಸ್ತಾಗಿ ಅನುಭವಪಟ್ಟಿದ್ದೇವೆ ಮತ್ತು ಪಶ್ಚಾತಾಪ ಪಡುತ್ತಿದ್ದೇವೆ ಕೂಡ. ಜಿಲ್ಲೆಯ ಇತಿಹಾಸದಲ್ಲಿ ಎಂದೂ ಕಾಣದಷ್ಟು ಭ್ರಷ್ಟ ರಾಜಕೀಯ ನಾಯಕರುಗಳು ಆಡಳಿತ ಚುಕ್ಕಾಣೆಯನ್ನು ಹಿಡಿದಿದ್ದಾರೆ. ಅವರೆಲ್ಲರ ಭ್ರಷ್ಟ ಚಟುವಟಿಕೆಗಳು ದಿನನಿತ್ಯ ಜನರ ಮುಂದೆ ರಾರಾಜಿಸುತ್ತಿದ್ದಾವೆ. ತಾಕತ್ತಿರುವವರು ಈ ಭ್ರಷ್ಟ ನಾಟಕಗಳ ವಿರುದ್ಧ ಹೋರಾಡಿದರೆ ಜಿಲ್ಲೆಗೆ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ. ಅದು ಬಿಟ್ಟು ಒಬ್ಬ ನಾಯಕನನ್ನು ಬಚಾವ್ ಮಾಡಲಿಕ್ಕಾಗಿ ಇನ್ನೊಬ್ಬ ಹೋರಾಟಗಾರನ ಚಾರಿತ್ರೆವಧೆ ಮಾಡುವ ನಿರಾಧಾರ ಪ್ರಯತ್ನಗಳನ್ನು ಕೈಬಿಡುವುದು ಒಳ್ಳೆಯದು ಗೋಪಾಲ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande