ಸಿರುಗುಪ್ಪ : ಆರ್ಯವೈಶ್ಯ ಸಮಾಜದ `ಗ್ಲೋಬಲ್'ಗಾಗಿ ಬೈಕ್ ರ್ಯಾಲಿ
ಸಿರುಗುಪ್ಪ, 08 ಅಕ್ಟೋಬರ್ (ಹಿ.ಸ.) 2026ರ ಡಿಸೆಂಬರ್ 25 ರಿಂದ 27ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಮಟ್ಟದ ಆರ್ಯವೈಶ್ಯ ಸಮಾಜದ ಗ್ಲೋಬಲ್ ಕಾರ್ಯಕ್ರಮದ ಪ್ರಯುಕ್ತ ಕಲ್ಯಾಣ ಕರ್ನಾಟಕದ ಜವಾಬ್ದಾರಿ ವಹಿಸಿಕೊಂಡಿರುವ ಸಿರುಗುಪ್ಪದ ಹನುಮಂತಯ್ಯ ಶೆಟ್ಟಿ ಅವರು ಹಮ್ಮಿಕೊಂಡಿಡಿರುವ `ಬೀದರ್
ಸಿರುಗುಪ್ಪ : ಆರ್ಯವೈಶ್ಯ ಸಮಾಜದ `ಗ್ಲೋಬಲ್'ಗಾಗಿ ಬೈಕ್ ರ್ಯಾಲಿ


ಸಿರುಗುಪ್ಪ : ಆರ್ಯವೈಶ್ಯ ಸಮಾಜದ `ಗ್ಲೋಬಲ್'ಗಾಗಿ ಬೈಕ್ ರ್ಯಾಲಿ


ಸಿರುಗುಪ್ಪ : ಆರ್ಯವೈಶ್ಯ ಸಮಾಜದ `ಗ್ಲೋಬಲ್'ಗಾಗಿ ಬೈಕ್ ರ್ಯಾಲಿ


ಸಿರುಗುಪ್ಪ : ಆರ್ಯವೈಶ್ಯ ಸಮಾಜದ `ಗ್ಲೋಬಲ್'ಗಾಗಿ ಬೈಕ್ ರ್ಯಾಲಿ


ಸಿರುಗುಪ್ಪ, 08 ಅಕ್ಟೋಬರ್ (ಹಿ.ಸ.)

2026ರ ಡಿಸೆಂಬರ್ 25 ರಿಂದ 27ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಮಟ್ಟದ ಆರ್ಯವೈಶ್ಯ ಸಮಾಜದ ಗ್ಲೋಬಲ್ ಕಾರ್ಯಕ್ರಮದ ಪ್ರಯುಕ್ತ ಕಲ್ಯಾಣ ಕರ್ನಾಟಕದ ಜವಾಬ್ದಾರಿ ವಹಿಸಿಕೊಂಡಿರುವ ಸಿರುಗುಪ್ಪದ ಹನುಮಂತಯ್ಯ ಶೆಟ್ಟಿ ಅವರು ಹಮ್ಮಿಕೊಂಡಿಡಿರುವ `ಬೀದರ್ ನಿಂದ ಬಳ್ಳಾರಿ'ವರೆಗೆ ಬೈಕ್ ರ್ಯಾಲಿಯು ಸಿರುಗುಪ್ಪ ತಾಲೂಕಿನ ದರೂರು ಗ್ರಾಮವನ್ನು ತಲುಪಿತ್ತು.

ದರೂರು ಗ್ರಾಮದ ಶ್ರೀ ವೀರಭದ್ರ ಸ್ವಾಮಿ ಪುಣ್ಯ ಕ್ಷೇತ್ರವನ್ನು ತಲುಪಿದ್ದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿರುವ ಸಮಾಜದ ಮುಖಂಡರು, ವೀರಭದ್ರ ದೇವರ ದರ್ಶನವನ್ನು ಪಡೆದು, ಸಮಾಜದ ಸಂಘಟನೆ, ಸಮಾಜದ ಯುವಶಕ್ತಿಯಲ್ಲಿ ಸಂಘಟನೆಯ ಜಾಗೃತಿ ಮೂಡಿಸುವಿಕೆ ಮತ್ತು ಪರಸ್ಪರ ಸೌಹಾರ್ದತೆ - ಸಹಬಾಳ್ವೆಯನ್ನು ನಡೆಸುವ ಅವಶ್ಯಕತೆಗಳ ಕುರಿತು ಸಮಾಜದವರ ಜೊತೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಚರ್ಚೆಯನ್ನು ನಡೆಸಿದರು.

ಸಿರುಗುಪ್ಪದ ಹನುಮಂತಯ್ಯ ಶೆಟ್ಟಿ ಅವರು ಸಭೆಯ ನೇತೃತ್ವವಹಿಸಿದ್ದರು. ಕರೂರು ಹೋಬಳಿಯ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ವೆಂಕಬಯ್ಯ ಶೆಟ್ಟಿ,

ಮುಖಂಡರಾದ ಸುರೇಶೆಟ್ಟಿ ಹಾಗೂ ಸುತ್ತಲಿನ ವಿವಿಧ ಹಳ್ಳಿಗಳ ಆರ್ಯವೈಶ್ಯ ಸಮಾಜದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ವೀರಶೈವ ಲಿಂಗಾಯಿತ ಸಮಾಜದ ಮುಖಂಡರು, ಶ್ರೀವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಮುಖ್ಯಸ್ಥರು ಆಗಿರುವ ಡಾ. ಪುರಷೋತ್ತಮಗೌಡ ದರೂರು ಅವರು ವಿಶೇಷ ಆಹ್ವಾನಿತರಾಗಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande