
ಬೆಂಗಳೂರು, 07 ಅಕ್ಟೋಬರ್ (ಹಿ.ಸ.):
ಸ್ಯಾಂಡಲ್ವುಡ್ ನಟ ಯುವರಾಜ್ಕುಮಾರ್ ಹಾಗೂ ಅವರ ಪತ್ನಿ ಶ್ರೀದೇವಿ ಭೈರಪ್ಪ ನಡುವಿನ ವೈಯಕ್ತಿಕ ವಿಚಾರಗಳು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಅಭಿಮಾನಿಯೊಬ್ಬರು ಮಾಡಿದ್ದ ಕಾಮೆಂಟ್ಗೆ ಶ್ರೀದೇವಿ ನೀಡಿರುವ ಪ್ರತಿಕ್ರಿಯೆ ಇದೀಗ ವೈರಲ್ ಆಗಿದ್ದು, ನೆಟ್ಟಿಗರ ನಡುವೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಶ್ರೀದೇವಿ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದ ಅಭಿಮಾನಿಯೊಬ್ಬರು, “ಬನ್ನಿ ಅತ್ತಿಗೆ, ಅಣ್ಣನ ಜೊತೆ ಇರಿ” ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀದೇವಿ, “ನಿಮ್ಮ ಅಣ್ಣನಿಗೆ ಇನ್ನೂ ಡಿವೋರ್ಸ್ ಆಗಿಲ್ಲ” ಎಂದು ಖಡಕ್ ಉತ್ತರ ನೀಡಿದ್ದಾರೆ.
ಇದೇ ವೇಳೆ ತಮ್ಮ ಪ್ರತಿಕ್ರಿಯೆಯಲ್ಲಿ ಯುವರಾಜ್ಕುಮಾರ್ ಹಾಗೂ ನಟಿ ಸಪ್ತಮಿ ಗೌಡ ಅವರ ವಿಚಾರವನ್ನೂ ಶ್ರೀದೇವಿ ಪ್ರಸ್ತಾಪಿಸಿದ್ದಾರೆ, ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಕುಟುಂಬದ ಬೆಂಬಲದ ಬಗ್ಗೆಯೂ ಮಾತುವೈಯಕ್ತಿಕ ವಿಚಾರಗಳ ನಡುವೆಯೂ ಕುಟುಂಬದ ಬೆಂಬಲ ಹಾಗೂ ಸಂಬಂಧಗಳ ಕುರಿತು ಶ್ರೀದೇವಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಭಿಮಾನಿಯೊಬ್ಬರ ಪ್ರಶ್ನೆಗೆ ನೀಡಿರುವ ಅವರ ನೇರ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.
ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಯುವರಾಜ್ಕುಮಾರ್ ಅವರಿಂದ ಯಾವುದೇ ಹೊಸ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R