ನಾಳೆ ರೈಲ್ವೆಯ ಸುರಕ್ಷತಾ ಕಾರ್ಯಗಳ ಹೊರಗುತ್ತಿಗೆ ವಿರೋಧಿಸಿ ಎ.ಐ.ಆರ್.ಎಫ್ ರಾಷ್ಟ್ರೀಯ ಸಮಾವೇಶ
ನವದೆಹಲಿ, 07 ಅಕ್ಟೋಬರ್ (ಹಿ.ಸ.): ಭಾರತೀಯ ರೈಲ್ವೆಯ ಪ್ರಮುಖ, ತಾಂತ್ರಿಕ ಹಾಗೂ ಸುರಕ್ಷತೆಗೆ ಸಂಬಂಧಿಸಿದ ಕಾರ್ಯಗಳನ್ನು ಹೆಚ್ಚಾಗಿ ಹೊರಗುತ್ತಿಗೆ ನೀಡುತ್ತಿರುವುದನ್ನು ವಿರೋಧಿಸಿ ರೈಲ್ವೆ ನೌಕರರು ಹೋರಾಟಕ್ಕೆ ಮುಂದಾಗಿದ್ದಾರೆ. ಹೊರಗುತ್ತಿಗೆ ವಿರೋಧಿಸಿ ಅಖಿಲ ಭಾರತ ರೈಲ್ವೆ ನೌಕರರ ಒಕ್ಕೂಟದ ವತಿಯಿಂದ
एआईआरएफ के महामंत्री शिव गोपाल मिश्रा फेडरेशन के अधिकारियों के साथ पत्रकार वार्ता को संबोधित करते हुए।


ನವದೆಹಲಿ, 07 ಅಕ್ಟೋಬರ್ (ಹಿ.ಸ.):

ಭಾರತೀಯ ರೈಲ್ವೆಯ ಪ್ರಮುಖ, ತಾಂತ್ರಿಕ ಹಾಗೂ ಸುರಕ್ಷತೆಗೆ ಸಂಬಂಧಿಸಿದ ಕಾರ್ಯಗಳನ್ನು ಹೆಚ್ಚಾಗಿ ಹೊರಗುತ್ತಿಗೆ ನೀಡುತ್ತಿರುವುದನ್ನು ವಿರೋಧಿಸಿ ರೈಲ್ವೆ ನೌಕರರು ಹೋರಾಟಕ್ಕೆ ಮುಂದಾಗಿದ್ದಾರೆ. ಹೊರಗುತ್ತಿಗೆ ವಿರೋಧಿಸಿ ಅಖಿಲ ಭಾರತ ರೈಲ್ವೆ ನೌಕರರ ಒಕ್ಕೂಟದ ವತಿಯಿಂದ ಅ.8ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿದೆ.

ನವದೆಹಲಿಯ ಕರ್ನಲ್ ಸಿಂಗ್ ರೈಲ್ವೆ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹೊರಗುತ್ತಿಗೆ ವಿರೋಧಿಸಿ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಎಂದು ಅಖಿಲ ಭಾರತ ರೈಲ್ವೆ ನೌಕರರ ಒಕ್ಕೂಟ ತಿಳಿಸಿದೆ.

ಅಖಿಲ ಭಾರತ ರೈಲ್ವೆ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಅವರು ಬುಧವಾರ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರೈಲ್ವೆಯ ಆಧುನೀಕರಣ ಮತ್ತು ಹೊಸ ತಂತ್ರಜ್ಞಾನ ಬಳಕೆಯನ್ನು ತಾವು ವಿರೋಧಿಸುವುದಿಲ್ಲ. ಆದರೆ ಹಳಿ ಮತ್ತು ಸಂಕೇತ ವ್ಯವಸ್ಥೆ ನಿರ್ವಹಣೆ, ಲೋಕೋ ಶೆಡ್‌, ಕಾರ್ಯಾಗಾರ, ಬೋಗಿ ನಿರ್ವಹಣಾ ಕೇಂದ್ರ ಹಾಗೂ ರೈಲ್ವೆ ಸಂಚಾರಕ್ಕೆ ಬಳಸುವ ಬೋಗಿಗಳು ಸೇರಿದಂತೆ ಸುರಕ್ಷತೆಗೆ ಸಂಬಂಧಿಸಿದ ಕಾರ್ಯಗಳನ್ನು ನಿರಂತರವಾಗಿ ಗುತ್ತಿಗೆಗೆ ನೀಡುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಅವರು ಹೇಳಿದರು.

ರೈಲ್ವೆಯ ಯಾವುದೇ ಕಾರ್ಯವನ್ನು ಹೊರಗುತ್ತಿಗೆ ನೀಡುವ ಮೊದಲು ಐದು ಅಂಶಗಳ ಕುರಿತು ಸ್ಪಷ್ಟ ನೀತಿ ರೂಪಿಸುವಂತೆ ರೈಲ್ವೆ ಮಂಡಳಿಯನ್ನು ಒಕ್ಕೂಟ ಒತ್ತಾಯಿಸಿದೆ ಎಂದು ಮಿಶ್ರಾ ತಿಳಿಸಿದರು.

ಅಂಗೀಕೃತ ಖಾಲಿ ರೈಲ್ವೆ ಹುದ್ದೆಗಳನ್ನು ಭರ್ತಿ ಮಾಡುವುದು, ಲಭ್ಯವಿರುವ ನೌಕರರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದನ್ನು ಖಚಿತಪಡಿಸುವುದು, ಹೊರಗುತ್ತಿಗೆಯಿಂದ ಉಂಟಾಗಬಹುದಾದ ಸುರಕ್ಷತಾ ಪರಿಣಾಮಗಳ ಮೌಲ್ಯಮಾಪನ ಮಾಡುವುದು, ಇಲಾಖೆಯ ವ್ಯವಸ್ಥೆ ಮತ್ತು ಹೊರಗುತ್ತಿಗೆ ವ್ಯವಸ್ಥೆಯ ನೈಜ ವೆಚ್ಚವನ್ನು ಹೋಲಿಕೆ ಮಾಡುವುದು ಹಾಗೂ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಮಾನ್ಯತೆ ಪಡೆದ ರೈಲ್ವೆ ನೌಕರರ ಒಕ್ಕೂಟಗಳೊಂದಿಗೆ ಸಮಾಲೋಚನೆ ನಡೆಸುವುದು ಈ ಐದು ಅಂಶಗಳಲ್ಲಿ ಸೇರಿವೆ ಎಂದು ಅವರು ಹೇಳಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande