ವಿಯೆನ್ನಾ, ಜಿನೀವಾದಲ್ಲಿ ಸಿಂಧೂ ಜಲ ಒಪ್ಪಂದವನ್ನು ಮುಂದಿಟ್ಟ ಪಾಕಿಸ್ತಾನ
ವಿಯೆನ್ನಾ (ಆಸ್ಟ್ರಿಯಾ)/ಜಿನೀವಾ (ಸ್ವಿಟ್ಜರ್ಲೆಂಡ್)/, 07 ಅಕ್ಟೋಬರ್ (ಹಿ.ಸ.): ಪಾಕಿಸ್ತಾನ ಮತ್ತೊಮ್ಮೆ ಸಿಂಧೂ ಜಲ ಒಪ್ಪಂದದ ವಿಚಾರವನ್ನು ಮುಂದಿಟ್ಟುಕೊಂಡು ಭಾರತವನ್ನು ಪ್ರಶ್ನಿಸುವ ಪ್ರಯತ್ನ ನಡೆಸಿದೆ. ಉಪ ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ಅವರು ವಿಯೆನ್ನಾದಲ್ಲಿ ನಡೆದ
जिनेवा में संयुक्त राष्ट्र मानवाधिकार परिषद के 63वें सत्र में पाकिस्तान के सचिव (प्रथम) अदील मुमताज खोखर ने अपने देश का पक्ष रखा। स्क्रीन ग्रैब- द न्यूज/ @ पाकयूएन


ವಿಯೆನ್ನಾ (ಆಸ್ಟ್ರಿಯಾ)/ಜಿನೀವಾ (ಸ್ವಿಟ್ಜರ್ಲೆಂಡ್)/, 07 ಅಕ್ಟೋಬರ್ (ಹಿ.ಸ.):

ಪಾಕಿಸ್ತಾನ ಮತ್ತೊಮ್ಮೆ ಸಿಂಧೂ ಜಲ ಒಪ್ಪಂದದ ವಿಚಾರವನ್ನು ಮುಂದಿಟ್ಟುಕೊಂಡು ಭಾರತವನ್ನು ಪ್ರಶ್ನಿಸುವ ಪ್ರಯತ್ನ ನಡೆಸಿದೆ. ಉಪ ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ಅವರು ವಿಯೆನ್ನಾದಲ್ಲಿ ನಡೆದ ಅಂತಾರಾಷ್ಟ್ರೀಯ ಜಲ ವಿಚಾರ ಸಂಕಿರಣದಲ್ಲಿ ಭಾರತದ ವಿರುದ್ಧ ಗಂಭೀರ ಪರಿಣಾಮಗಳ ಎಚ್ಚರಿಕೆ ನೀಡಿದ್ದರೆ, ಜಿನೀವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಪಾಕಿಸ್ತಾನದ ಪ್ರಥಮ ಕಾರ್ಯದರ್ಶಿ ಆದಿಲ್ ಮುಮ್ತಾಜ್ ಖೋಖರ್ ಅವರು ನೀರನ್ನು ರಾಜಕೀಯ ಒತ್ತಡಕ್ಕೆ ಬಳಸುವ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

‘ದಿ ನ್ಯೂಸ್’ ವರದಿ ಪ್ರಕಾರ, ಮಂಗಳವಾರ ವಿಯೆನ್ನಾ ರಾಜತಾಂತ್ರಿಕ ಅಕಾಡೆಮಿ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಜಲ ವಿಚಾರ ಸಂಕಿರಣದಲ್ಲಿ ಮಾತನಾಡಿದ ಇಶಾಕ್ ದಾರ್, ಸಿಂಧೂ ನದಿಯ ನೀರಿನಲ್ಲಿ ಪಾಕಿಸ್ತಾನಕ್ಕೆ ದೊರೆಯಬೇಕಾದ ಪಾಲನ್ನು ನೀಡದ ಯಾವುದೇ ಪ್ರಯತ್ನವು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ. ಪಾಕಿಸ್ತಾನ ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತ ಈ ಕ್ರಮ ಕೈಗೊಂಡಿತ್ತು. ಬಳಿಕ ಮೇ 2025ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ನಡೆದಿತ್ತು.

ಸಿಂಧೂ ಜಲ ಒಪ್ಪಂದ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ತನ್ನ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಪಾಕಿಸ್ತಾನದ ಬದ್ಧತೆಯ ಬಗ್ಗೆ ಯಾವುದೇ ತಪ್ಪು ಕಲ್ಪನೆ ಇರಬಾರದು ಎಂದು ಇಶಾಕ್ ದಾರ್ ಹೇಳಿದ್ದಾರೆ. ಸಿಂಧೂ ನದಿಯ ನೀರು ಪಾಕಿಸ್ತಾನದ 25 ಕೋಟಿಗೂ ಹೆಚ್ಚು ಜನರ ಜೀವನ ಹಾಗೂ ಜೀವನೋಪಾಯಕ್ಕೆ ಆಧಾರವಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಪಾಕಿಸ್ತಾನದ ಪ್ರಥಮ ಕಾರ್ಯದರ್ಶಿ ಆದಿಲ್ ಮುಮ್ತಾಜ್ ಖೋಖರ್ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 63ನೇ ಅಧಿವೇಶನದಲ್ಲಿ ಪಾಕಿಸ್ತಾನದ ನಿಲುವನ್ನು ಮಂಡಿಸಿದ್ದಾರೆ. ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯದ ಮಾನವ ಹಕ್ಕುಗಳ ಕುರಿತ ಪ್ರಸ್ತಾವನೆಯನ್ನು ಮಂಡಳಿ ಪರಿಗಣಿಸುತ್ತಿದ್ದ ವೇಳೆ ಖೋಖರ್ ಮಾತನಾಡಿದ್ದಾರೆ. ಜರ್ಮನಿ ಮತ್ತು ಸ್ಪೇನ್ ಮಂಡಿಸಿದ ಪ್ರಸ್ತಾವನೆಯನ್ನು ಮತದಾನವಿಲ್ಲದೆ ಅಂಗೀಕರಿಸಲಾಯಿತು.

ನೀರು ಹಂಚಿಕೆಯಾಗುವ ಸ್ಥಳದಲ್ಲಿ ಜವಾಬ್ದಾರಿಗಳೂ ಹಂಚಿಕೆಯಾಗುತ್ತವೆ ಎಂದು ಖೋಖರ್ ಹೇಳಿದ್ದಾರೆ. ನೆರೆಯ ರಾಷ್ಟ್ರಗಳ ನಡುವೆ ಹಂಚಿಕೆಯಾಗಿರುವ ಜಲ ಸಂಪನ್ಮೂಲಗಳ ಕುರಿತು ಸಹಕಾರವು ಯಾವುದೇ ಉಪಕಾರ ಅಥವಾ ರಿಯಾಯಿತಿಯ ವಿಷಯವಲ್ಲ, ಬದಲಾಗಿ ಹಂಚಿಕೆಯ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ನದಿಯ ಮೇಲ್ಭಾಗದಲ್ಲಿರುವ ಯಾವುದೇ ದೇಶವು ನೀರನ್ನು ರಾಜಕೀಯ ಒತ್ತಡ ಅಥವಾ ಪ್ರಭಾವ ಬೀರುವ ಸಾಧನವಾಗಿ ಬಳಸಬಾರದು ಎಂದು ಖೋಖರ್ ಹೇಳಿದ್ದಾರೆ. ನೀರಿನ ನಿರ್ವಹಣೆಯು ರಾಜಕೀಯ ಒತ್ತಡದ ಸಾಧನವಾಗದೆ ಸಹಕಾರ ಮತ್ತು ಪರಸ್ಪರ ಜವಾಬ್ದಾರಿಯ ತತ್ವಗಳ ಆಧಾರದ ಮೇಲೆ ನಡೆಯಬೇಕು ಎಂದು ಅವರು ಒತ್ತಿಹೇಳಿದ್ದಾರೆ.

ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತದ ಏಕಪಕ್ಷೀಯ ಕ್ರಮವನ್ನು ‘ನೀರನ್ನು ಅಸ್ತ್ರವಾಗಿ ಬಳಸುವುದು’ ಎಂದು ಖೋಖರ್ ಬಣ್ಣಿಸಿದ್ದು, ನೀರನ್ನು ಎಂದಿಗೂ ಒತ್ತಡ ಹೇರುವ, ರಾಜಕೀಯ ಲಾಭ ಪಡೆಯುವ ಅಥವಾ ಯುದ್ಧದ ಸಾಧನವಾಗಿ ಬಳಸಬಾರದು ಎಂದು ಹೇಳಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande