ಗಾಂಜಾ ಮಾರಾಟ ಹಾಗೂ ಸೇವನೆ; ಆರು ಮಂದಿ ಆರೋಪಿಗಳ ಬಂಧನ
ಗಾಂಜಾ ಮಾರಾಟ ಹಾಗೂ ಸೇವನೆ; ಆರು ಮಂದಿ ಆರೋಪಿಗಳ ಬಂಧನ
ಗಾಂಜಾ ಮಾರಾಟ ಹಾಗೂ ಸೇವನೆ; ಆರು ಮಂದಿ ಆರೋಪಿಗಳ ಬಂಧನ


ಕೋಲಾರ, 07 ಅಕ್ಟೋಬರ್ (ಹಿ.ಸ) : ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಮತ್ತು ಕ್ಯಾಸಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ೨೮೯ ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಕ್ಯಾಸಂಬಳ್ಳಿ ಪೊಲೀಸರು ನಾಲ್ಕು ಜನರ ವಿರುದ್ದ ಪ್ರಕರಣಗಳು ದಾಖಲಿಸಿದ್ದಾರೆ.

ಅಕ್ಟೋಬರ್ ೦೬ ರಂದು ಎಂ ಕೊತ್ತೂರು ನಿಂದ ಕೊಡಿಗೆನಹಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿದ್ದ ಮರದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೆರೆಗೆ ಬೇತಮಂಗಲ ಪಿ.ಎಸ್.ಐ ತ್ಯಾಗರಾಜ್ ಕಾರ್ಯಾಚರಣೆ ನಡೆಸಿದರು. ಮುಳಬಾಗಿಲು ನಗರದ ಶಾಮೀರ್ ಎಂಬಾತ ಬೇತಮಂಗಲಕ್ಕೆ ಬಂದು ಬಿಲ್ಲೇರಹಳ್ಳಿಯ ಸುಧಾಕರ್ ಎಂಬುವನ ಜೊತೆ ಸೇರಿಕೊಂಡು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಇಬ್ಬರನ್ನು ಬಂಧಿಸಿದರು. ಆರೋಪಿಗಳಿಂದ ರೂ.೨೦,೦೦೦/- ಮೌಲ್ಯದ ೨೮೯ ಗ್ರಾಂ ಗಾಂಜಾ ವಶಪಡಿಸಿಕೊಂಡು ಕಾಯ್ದೆಯಡಿ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗಾಂಜಾ ಸೇವನೆ ಮಾಡುತ್ತಿದ್ದವರ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗಿದೆ. ಕ್ಯಾಸಂಬಳ್ಳಿ ಪೊಲೀಸರು ಕ್ಯಾಸಂಬಳ್ಳಿ ಪೊಲೀಸ್ ಠಾಣಾ ಸರಹದ್ದಿನ ವಿವಿಧ ಪ್ರದೇಶಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಅಜಾಮ್, ಸುರೇಂದ್ರ, ಶರತ್, ಯುವರಾಜ್ ಎಂಬ ನಾಲ್ವರನ್ನು ಪತ್ತೆಹಚ್ಚಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಗಾಂಜಾ ಸೇವನೆ ಮಾಡಿರುವುದು ಖಚಿತವಾಗಿದ್ದು ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

ಬೇತಮಂಗಲ ಪಿ.ಎಸ್.ಐ ತ್ಯಾಗರಾಜ್, ಕ್ಯಾಸಂಬಳ್ಳಿ ಪಿ.ಎಸ್.ಐ ಸಂಗಮೇಶ್ ಕೋಲ್ಹಾರ್ ಎ.ಎಸ್.ಐ ವಿಜಯ್ಕುಮಾರ್ ಹಾಗೂ ಸಿಬ್ಬಂದಿಯವರಾದ ಕೃಷ್ಣಮೂರ್ತಿ, ಶ್ರೀನಿವಾಸ್, ಕೇಶವ, ಸೋಮಶೇಖರ್ ಪುಠಾಣಿ, ನಾಗರಾಜ್, ನವೀನ್, ಧನಸಿಂಗ ಲಮಾಣಿ, ವಿನೋದ್ ಕುಮಾರ್ ರವರ ಉತ್ತಮ ಕಾರ್ಯನಿರ್ವಹಣೆಯನ್ನು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಎಸ್.ಪಿ ಶಿವಾಂಶು ರಾಜಪೂತ್ ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande