ಚುನಾವಣಾ ಆಯೋಗ ರಾಹುಲ್ ಗಾಂಧಿಯ ಪ್ರತಿಯೊಂದು ಸುಳ್ಳನ್ನೂ ಬಯಲಿಗೆಳೆದಿದೆ: ಅಮರ್ಪಾಲ್ ಮೌರ್ಯ
ನವದೆಹಲಿ, 07 ಅಕ್ಟೋಬರ್ (ಹಿ.ಸ.): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮಾಡಿರುವ ಆರೋಪಗಳನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಅಮರ್‌ಪಾಲ್ ಮೌರ್ಯ ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಒಂದರ ನಂತರ ಒಂದರಂತೆ ಆರೋಪಗಳನ
Amar pal file photo


ನವದೆಹಲಿ, 07 ಅಕ್ಟೋಬರ್ (ಹಿ.ಸ.):

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮಾಡಿರುವ ಆರೋಪಗಳನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಅಮರ್‌ಪಾಲ್ ಮೌರ್ಯ ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಒಂದರ ನಂತರ ಒಂದರಂತೆ ಆರೋಪಗಳನ್ನು ಮಾಡಿದ್ದರು. ಆದರೆ ಆಯೋಗವು ಅವರ ಹೇಳಿಕೆಗಳ ಸತ್ಯವನ್ನು ಜನರ ಮುಂದಿಟ್ಟಿದೆ ಎಂದು ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಮೊದಲ ಆರೋಪವೆಂದರೆ ಮುಖ್ಯ ಚುನಾವಣಾ ಆಯುಕ್ತರು ಏಕಾಂಗಿಯಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂಬುದಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಮೌರ್ಯ, ಚುನಾವಣಾ ಆಯೋಗದ ನಿಲುವನ್ನು ಉಲ್ಲೇಖಿಸಿ, ಮೂವರು ಚುನಾವಣಾ ಆಯುಕ್ತರು ಆಯೋಗದಲ್ಲಿ ನಿರ್ಧಾರಗಳನ್ನು ಸಾಮೂಹಿಕವಾಗಿ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.

ರಾಹುಲ್ ಗಾಂಧಿ ಅವರ ಎರಡನೇ ಆರೋಪವನ್ನೂ ಮೌರ್ಯ ಪ್ರಶ್ನಿಸಿದರು. ರಾಹುಲ್ ಗಾಂಧಿ ದಿನವಿಡೀ ಚುನಾವಣಾ ಆಯೋಗವನ್ನು ಭೇಟಿಯಾಗಲು ಅವಕಾಶ ನೀಡಲಾಗುತ್ತಿಲ್ಲ ಎಂದು ಹೇಳುತ್ತಿದ್ದರು. ಆದರೆ ಕಾಂಗ್ರೆಸ್ ಅಥವಾ ಪ್ರತಿಪಕ್ಷಗಳ ಮೈತ್ರಿಕೂಟದ ವತಿಯಿಂದ ಭೇಟಿಗಾಗಿ ಯಾವುದೇ ಔಪಚಾರಿಕ ಮನವಿ ಬಂದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.

ಮೂರನೇ ಆರೋಪವನ್ನು ಉಲ್ಲೇಖಿಸಿದ ಅಮರ್‌ಪಾಲ್ ಮೌರ್ಯ, ಸಂಜೆ ಸುಮಾರು 4 ಗಂಟೆಗೆ ಡಿಸಿಪಿ ಮೂಲಕ ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಭೇಟಿಯಾಗಲು ಬಯಸಿರುವ ಮಾಹಿತಿ ಆಯೋಗಕ್ಕೆ ದೊರೆತಿತ್ತು ಎಂದರು. ನಿಗದಿತ ಪ್ರಕ್ರಿಯೆಯಂತೆ ಪ್ರತಿನಿಧಿಗಳ ಮೂಲಕ ಭೇಟಿಯಾಗಲು ಆಯೋಗ ತಕ್ಷಣವೇ ಸಿದ್ಧವಾಗಿತ್ತು. ಆದರೆ ರಾಹುಲ್ ಗಾಂಧಿ ಈ ಪ್ರಕ್ರಿಯೆಯಂತೆ ಭೇಟಿಯಾಗಲು ಸಿದ್ಧರಾಗಲಿಲ್ಲ ಎಂದು ಹೇಳಿದರು.

ಚುನಾವಣಾ ಆಯೋಗವು ವಾಸ್ತವಾಂಶಗಳನ್ನು ಸ್ಪಷ್ಟಪಡಿಸಿರುವಾಗ, ಇದೀಗ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಯಾವ ಹೊಸ ಆರೋಪದೊಂದಿಗೆ ಮುಂದೆ ಬರಲಿದ್ದಾರೆ ಎಂದು ಮೌರ್ಯ ಪ್ರಶ್ನಿಸಿದರು. ವಾಸ್ತವಾಂಶಗಳು ಬಹಿರಂಗಗೊಂಡ ಬಳಿಕ ಕಾಂಗ್ರೆಸ್ ಜನರಿಗೆ ಉತ್ತರ ನೀಡಬೇಕು ಎಂದು ಅವರು ಹೇಳಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande