ಸಿಇಸಿ ರಾಜೀನಾಮೆ, ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ಸಂಸತ್ತಿನಿಂದ ಚುನಾವಣಾ ಆಯೋಗದವರೆಗೆ ಇಂಡಿಯಾ ಮೈತ್ರಿ ಕೂಟದ ಮೆರವಣಿಗೆ
ನವದೆಹಲಿ, 06 ಅಕ್ಟೋಬರ್ (ಹಿ.ಸ.): ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ಇಂಡಿಯಾ ಕೂಟದ ವಿವಿಧ ಪಕ್ಷಗಳ ನಾಯಕರು ಮಂಗಳವಾರ ಸಂಸತ್ತಿನಿಂದ ಭಾರತ ಚುನಾವಣಾ ಆಯೋಗದ ಕೇಂದ್ರ ಕಚೇರಿವರೆಗೆ ಮೆರವಣಿ
सीईसी ज्ञानेश कुमार के खिलाफ विरोध मार्च में सपा कार्यकर्ता शामिल हुए।


ನವದೆಹಲಿ, 06 ಅಕ್ಟೋಬರ್ (ಹಿ.ಸ.):

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ಇಂಡಿಯಾ ಕೂಟದ ವಿವಿಧ ಪಕ್ಷಗಳ ನಾಯಕರು ಮಂಗಳವಾರ ಸಂಸತ್ತಿನಿಂದ ಭಾರತ ಚುನಾವಣಾ ಆಯೋಗದ ಕೇಂದ್ರ ಕಚೇರಿವರೆಗೆ ಮೆರವಣಿಗೆ ಆರಂಭಿಸಿದರು. ಈ ವೇಳೆ ಆಕಾಶವಾಣಿ ಸಮೀಪ ದೆಹಲಿ ಪೊಲೀಸರು ಹಲವು ನಾಯಕರನ್ನು ವಶಕ್ಕೆ ಪಡೆದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕಾಶವಾಣಿ ಭವನದ ಒಳಗಿದ್ದರು.

ಸಂಸತ್ ಭವನದ ಮಕರ ದ್ವಾರದಿಂದ ಆರಂಭವಾದ ಮೆರವಣಿಗೆಯನ್ನು ಭದ್ರತಾ ಸಿಬ್ಬಂದಿ ನೀತಿ ಆಯೋಗದ ಕಚೇರಿ ಸಮೀಪ ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು. ಮುಂದೆ ಸಾಗಲು ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಸಂಸದರು ರಸ್ತೆಯಲ್ಲೇ ಕುಳಿತು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಮೆರವಣಿಗೆಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಎಡಪಕ್ಷಗಳ ಸಂಸದರೊಂದಿಗೆ ಬಿಜು ಜನತಾ ದಳದ ಸಂಸದರೂ ಭಾಗವಹಿಸಿದ್ದರು.

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ದೆಹಲಿಯ ಬಿಜೆಪಿ ಕಚೇರಿಗಳನ್ನು ಉಲ್ಲೇಖಿಸಿ ವ್ಯಂಗ್ಯವಾಡಿದರು. ದೆಹಲಿಯಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಕಚೇರಿಗಳನ್ನು ನಿರ್ಮಿಸುವ ಅಗತ್ಯವೇನಿತ್ತು. ಚುನಾವಣಾ ಆಯೋಗದ ಕಚೇರಿಯಲ್ಲೇ ಒಂದು ಮಹಡಿಯನ್ನು ಪಡೆದು ಅಲ್ಲಿಂದಲೇ ಕೆಲಸ ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅವರು ಹೇಳಿದರು.

ಚುನಾವಣಾ ಆಯೋಗದ ದೃಷ್ಟಿಯಲ್ಲಿ ಬಿಜೆಪಿ ಕಾರ್ಯಕರ್ತರು ಮಾತ್ರ ದೇಶದ ನಾಗರಿಕರು ಮತ್ತು ಮತದಾರರು ಎಂಬಂತೆ ಕಾಣುತ್ತಿದೆ ಎಂದು ಅಖಿಲೇಶ್ ಆರೋಪಿಸಿದರು. ಉತ್ತರ ಪ್ರದೇಶದ ಕುಂದರ್ಕಿ, ಮೀರಾಪುರ, ಅಯೋಧ್ಯೆ ಹಾಗೂ ಅಂಬೇಡ್ಕರ್ ನಗರ ಉಪಚುನಾವಣೆಗಳ ಜತೆಗೆ ಪಶ್ಚಿಮ ಬಂಗಾಳದಲ್ಲಿಯೂ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಜನಾದೇಶವನ್ನು ಕಸಿದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.

ನಂದಲಾಲ್ ನಿಷಾದ್ ಅವರ ಹೆಸರಿನಲ್ಲಿ ನಕಲಿ ಸಹಿ ಮಾಡಿಸಿ ನಮೂನೆ-7 ಭರ್ತಿ ಮಾಡಿಸಿದ ಹಾಗೂ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಿದ ಕುರಿತು ಅಧಿಕೃತ ದೂರು ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಖಿಲೇಶ್ ಆರೋಪಿಸಿದರು.

‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವವನ್ನೂ ಅವರು ವಿರೋಧಿಸಿದರು. ಒಂದೇ ಬಾರಿಗೆ ಚುನಾವಣಾ ಅಕ್ರಮ ನಡೆಸಿ ಐದು ವರ್ಷಗಳ ಕಾಲ ಯಾವುದೇ ಅಡ್ಡಿಯಿಲ್ಲದೆ ಅಧಿಕಾರದಲ್ಲಿ ಮುಂದುವರಿಯುವ ಸಂಚು ಇದು ಎಂದು ಅವರು ಆರೋಪಿಸಿದರು. ಇಂತಹ ವ್ಯವಸ್ಥೆಯನ್ನು ಜನರು ಒಪ್ಪಿಕೊಳ್ಳುವುದಿಲ್ಲ ಎಂದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande