ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೊಟೇಲಗಳ ಮೇಲ್ದರ್ಜೆಗೇರಿಸಲು ನಿರ್ಧಾರ: ಸಚಿವ ಜಾರ್ಜ್
ಬೆಂಗಳೂರು, 05 ಅಕ್ಟೋಬರ್ (ಹಿ.ಸ.): ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ 24 ಹೋಟೆಲ್ಗಳು ಹಾಗೂ ಎರಡು ರೆಸ್ಟೋರೆಂಟ್ಗಳನ್ನು ₹100 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಸಮಗ್ರವಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಹಾಗೂ ಪ್ರವಾಸೋ
kstdc-24-hotels-2-restaurants-to-get-rs-100-crore-facelift-kj-george


ಬೆಂಗಳೂರು, 05 ಅಕ್ಟೋಬರ್ (ಹಿ.ಸ.):

ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ 24 ಹೋಟೆಲ್ಗಳು ಹಾಗೂ ಎರಡು ರೆಸ್ಟೋರೆಂಟ್ಗಳನ್ನು ₹100 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಸಮಗ್ರವಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಪ್ರವಾಸಿಗರಿಗೆ ಕೇವಲ ವಸತಿ ಸೌಲಭ್ಯ ಕಲ್ಪಿಸುವುದಷ್ಟೇ ಅಲ್ಲದೆ, ಉತ್ತಮ ಕೊಠಡಿಗಳು, ಗುಣಮಟ್ಟದ ಆಹಾರ, ಸ್ವಚ್ಛತೆ, ವೃತ್ತಿಪರ ಆತಿಥ್ಯ, ಸುಗಮ ಆನ್ಲೈನ್ ಕಾಯ್ದಿರಿಸುವಿಕೆ ಹಾಗೂ ಒಟ್ಟಾರೆ ಅತಿಥಿ ಅನುಭವವನ್ನು ಸುಧಾರಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.

KSTDCಯ ಮಯೂರ ಹೋಟೆಲ್ಗಳು ಹಂಪಿ, ಜೋಗ್ ಫಾಲ್ಸ್, ನಂದಿ ಹಿಲ್ಸ್, ಮಡಿಕೇರಿ, ಕೆಆರ್ಎಸ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಸಮೀಪದಲ್ಲಿವೆ.

ಖಾಸಗಿ ಆತಿಥ್ಯ ಸಂಸ್ಥೆಗಳಿಗೆ ಸುಲಭವಾಗಿ ಲಭ್ಯವಾಗದ ವಿಶಿಷ್ಟ ಸ್ಥಳಗಳಲ್ಲಿ ಈ ಆಸ್ತಿಗಳಿರುವುದು KSTDCಯ ಪ್ರಮುಖ ಬಲವಾಗಿದೆ ಎಂದು ಅವರು ವಿವರಿಸಿದರು.

ಯೋಜನೆಯಡಿ ಹೋಟೆಲ್ ಕೊಠಡಿಗಳು, ಸ್ನಾನಗೃಹಗಳು, ರೆಸ್ಟೋರೆಂಟ್ಗಳು, ಅಡುಗೆಮನೆಗಳು, ಸ್ವಾಗತ ಕೇಂದ್ರಗಳು, ಸಾಮಾನ್ಯ ಪ್ರದೇಶಗಳು, ಪೀಠೋಪಕರಣ, ಬೆಳಕಿನ ವ್ಯವಸ್ಥೆ, ಉದ್ಯಾನ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸುಧಾರಿಸಲಾಗುವುದು.

ಜತೆಗೆ ಆಹಾರದ ಗುಣಮಟ್ಟ, ಕೊಠಡಿ ನಿರ್ವಹಣೆ, ಸಿಬ್ಬಂದಿಯ ಆತಿಥ್ಯ ಕೌಶಲ್ಯ ಮತ್ತು ಅತಿಥಿಗಳ ಪ್ರತಿಕ್ರಿಯೆ ವ್ಯವಸ್ಥೆಯನ್ನೂ ಬಲಪಡಿಸಲಾಗುವುದು.

ಕೆಲವು ಹೋಟೆಲ್ಗಳನ್ನು 3-ಸ್ಟಾರ್ ಮಟ್ಟ ಅಥವಾ ಅದಕ್ಕಿಂತ ಉತ್ತಮ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಪ್ರತ್ಯೇಕ ಕಾರ್ಯಯೋಜನೆ ರೂಪಿಸಲಾಗುತ್ತದೆ.

“KSTDCಯ ಮಯೂರ ಹೋಟೆಲ್ಗಳ ದೊಡ್ಡ ಶಕ್ತಿ ಅವುಗಳ ಸ್ಥಳ. ಈ ಸ್ಥಳದ ಅನುಕೂಲಕ್ಕೆ ಉತ್ತಮ ಕೊಠಡಿ, ಗುಣಮಟ್ಟದ ಆಹಾರ ಮತ್ತು ವೃತ್ತಿಪರ ಆತಿಥ್ಯವನ್ನು ಸೇರಿಸಬೇಕಾಗಿದೆ.

₹100 ಕೋಟಿ ಹೂಡಿಕೆಯ ಮೂಲಕ ಪ್ರವಾಸಿಗರ ಒಟ್ಟಾರೆ ಅನುಭವವನ್ನು ಮೇಲ್ದರ್ಜೆಗೇರಿಸಿ, KSTDC ಆಸ್ತಿಗಳನ್ನು ಹೆಚ್ಚು ಸ್ಪರ್ಧಾತ್ಮಕ ಹಾಗೂ ಆದಾಯದಾಯಕವಾಗಿಸುವುದು ನಮ್ಮ ಗುರಿ,” ಎಂದು ಕೆ.ಜೆ. ಜಾರ್ಜ್ ಹೇಳಿದರು.

“ಸರ್ಕಾರಿ ಹೋಟೆಲ್ ಎನ್ನುವ ಕಾರಣಕ್ಕೆ ಪ್ರವಾಸಿಗರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ಇರಬಾರದು.

ಸ್ಥಳ, ಸೌಲಭ್ಯ ಮತ್ತು ಸೇವೆ—ಈ ಮೂರರಲ್ಲೂ ಮಯೂರ ಹೋಟೆಲ್ಗಳು ಉತ್ತಮ ಮಾನದಂಡ ನಿರ್ಮಿಸಬೇಕು,” ಎಂದು ಸಚಿವರು ತಿಳಿಸಿದರು.

KSTDC ಅಧ್ಯಕ್ಷ ಎಂ. ಶ್ರೀನಿವಾಸ್ ಮಾತನಾಡಿ, ಆಧುನಿಕ ಸೌಲಭ್ಯಗಳು ಮತ್ತು ಉತ್ತಮ ಸೇವೆಯೊಂದಿಗೆ ಮಯೂರ ಹೋಟೆಲ್ಗಳನ್ನು ಮೇಲ್ದರ್ಜೆಗೇರಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದರ ಜತೆಗೆ ಕೊಠಡಿಗಳ ಬಳಕೆ ಮತ್ತು ಆದಾಯವನ್ನು ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಹೇಳಿದರು. ಯೋಜನೆಯನ್ನು ಆದ್ಯತೆ ಆಧಾರದಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಪ್ರತಿಯೊಂದು ಆಸ್ತಿಯ ಸ್ಥಳ, ಪ್ರವಾಸಿಗರ ಬೇಡಿಕೆ, ಪ್ರಸ್ತುತ ಬಳಕೆ ಹಾಗೂ ಆದಾಯದ ಸಾಮರ್ಥ್ಯವನ್ನು ಪ್ರತ್ಯೇಕವಾಗಿ ವಿಶ್ಲೇಷಿಸಿ ಅಭಿವೃದ್ಧಿ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande