
ಬೆಂಗಳೂರು, 05 ಅಕ್ಟೋಬರ್ (ಹಿ.ಸ.):
ಬೆಂಗಳೂರಿನಲ್ಲಿ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ಶಿಪ್–2026ರ 2ನೇ ದಿನವಾದ ಸೋಮವಾರ 200 ಮೀಟರ್ ಬಟರ್ಫ್ಲೈ ವಿಭಾಗದಲ್ಲಿ ಭಾರತ ಸೇರಿದಂತೆ ಏಷ್ಯಾದ ವಿವಿಧ ದೇಶಗಳ ಮಾಸ್ಟರ್ಸ್ ಈಜುಗಾರರು ಉತ್ತಮ ಪ್ರದರ್ಶನ ನೀಡಿದರು.
ಮಹಿಳೆಯರ 25–29 ವಯೋಮಾನದ ವಿಭಾಗದಲ್ಲಿ ಭಾರತದ ತನುಜಾ ಎಸ್ 3:27.37 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಸುಷ್ಮಾ ಎಸ್. ಭಾರದ್ವಾಜ್ 3:41.40 ನಿಮಿಷಗಳೊಂದಿಗೆ ಬೆಳ್ಳಿ ಹಾಗೂ ತಮಿಳಳಗಿ ಕೆ. 5:09.57 ನಿಮಿಷಗಳೊಂದಿಗೆ ಕಂಚಿನ ಪದಕ ಪಡೆದರು.
35–39 ವಯೋಮಾನದ ವಿಭಾಗದಲ್ಲಿ ಬೀನಾ ಎಸ್. 3:32.28 ನಿಮಿಷಗಳಲ್ಲಿ ಮೊದಲ ಸ್ಥಾನ ಪಡೆದು ಚಿನ್ನ ಗೆದ್ದರು.ಶ್ರೀಲಂಕಾದ ತನುಜಾ ಫರ್ನಾಂಡೊ 4:14.49 ನಿಮಿಷಗಳಲ್ಲಿ ಬೆಳ್ಳಿ ಹಾಗೂ ಭಾರತದ ಪ್ರಾಚಿ ಕೌಶಲ್ ಶಾ 4:18.31 ನಿಮಿಷಗಳಲ್ಲಿ ಕಂಚು ಗೆದ್ದರು.
65–69 ವಿಭಾಗದಲ್ಲಿ ಲಕ್ಕ ರಾಜಿನಿ 7:33.14 ನಿಮಿಷಗಳಲ್ಲಿ ಚಿನ್ನ ಗೆದ್ದರೆ, ಸೆಲಿನ್ ಎಂ.ಸಿ. 7:34.31 ನಿಮಿಷಗಳಲ್ಲಿ ಬೆಳ್ಳಿ ಮತ್ತು ಸಿಯಾಮಲಾ ಪಾರಂಬು ವೇಡು 8:20.18 ನಿಮಿಷಗಳಲ್ಲಿ ಕಂಚು ಪಡೆದರು.
ಪುರುಷರ 25–29 ವಯೋಮಾನದ ವಿಭಾಗದಲ್ಲಿ ಭಾರತದ ಯೋಗೇಶ್ ಕುಮಾರ್ 2:48.00 ನಿಮಿಷಗಳ ಸಮಯದೊಂದಿಗೆ ಚಿನ್ನದ ಪದಕ ಗೆದ್ದರು.
ಇರಾನ್ನ ಮೊಹಮ್ಮದ್ಐದಿನ್ಬಯಾತ್ 2:59.66 ನಿಮಿಷಗಳಲ್ಲಿ ಬೆಳ್ಳಿ ಹಾಗೂ ಭಾರತದ ರುಬನ್ ಕುಮಾರ್ ಸಿ. 3:09.66 ನಿಮಿಷಗಳಲ್ಲಿ ಕಂಚಿನ ಪದಕ ಪಡೆದರು.
35–39 ವಿಭಾಗದಲ್ಲಿ ತರುಣ್ ಟೋಕಾಸ್ 2:51.39 ನಿಮಿಷಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನ ಗೆದ್ದರು. ಸತ್ಯ ಪ್ರಕಾಶ್ ಯಾದವ್ 3:05.68 ನಿಮಿಷಗಳಲ್ಲಿ ಬೆಳ್ಳಿ ಹಾಗೂ ಸಾಗರ್ ಬಾಡ್ವೆ 3:28.50 ನಿಮಿಷಗಳಲ್ಲಿ ಕಂಚಿನ ಪದಕ ಪಡೆದರು.
60–64 ವಿಭಾಗದಲ್ಲಿ ಮಣಿಕಂದನ್ ಕಂಡೇತ್ 3:43.39 ನಿಮಿಷಗಳಲ್ಲಿ ಮೊದಲ ಸ್ಥಾನ ಪಡೆದು ಚಿನ್ನ ಗೆದ್ದರೆ, ಸಮರ್ ಬಸುದೇಬ್ ಮನ್ 3:59.57 ನಿಮಿಷಗಳಲ್ಲಿ ಬೆಳ್ಳಿ ಮತ್ತು ರಮೇಶ್ ಚಂದರ್ 4:00.58 ನಿಮಿಷಗಳಲ್ಲಿ ಕಂಚು ಗೆದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R