ಮನುಷ್ಯನನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಆಧ್ಯಾತ್ಮಿಕತೆ ಪರಿಹಾರ
ಮನುಷ್ಯನನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಆಧ್ಯಾತ್ಮಿಕತೆ ಪರಿಹಾರ
ಮುಳಬಾಗಿಲು ಪಣ್ಣದಲ್ಲಿ ಸಂತ ಕೈವಾರ ತಾತಯ್ಯನವರ ೩೦೦ನೇ ಜಯಂತೋತ್ಸವ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮಾತನಾಡಿದರು.


ಕೋಲಾರ, ೦೫ ಅಕ್ಟೋಬರ್(ಹಿ.ಸ.) : ಇಂದು ಜಗತ್ತಿನಲ್ಲಿ ಎಲ್ಲೆಡೆ ಐಹಿಕ ವ್ಯಾಮೋಹಗಳು ಹೆಚ್ಚಾಗಿ, ಜೀವನದಲ್ಲಿ ಯಾರಿಗೂ ಶಾಂತಿ ಸಮಾಧಾನಗಳು ಇಲ್ಲವಾಗಿವೆ. ಪರಸ್ಪರ ಸೌಹಾರ್ದತೆ, ವಿಶ್ವಾಸ, ನಂಬಿಕೆಗಳು ಮಾಯವಾಗಿ, ದ್ವೇಷಾಸೂಯೆಗಳು ಎಲ್ಲೆಡೆ ತಾಂಡವವಾಡುತ್ತಿದೆ. ಮಾನವರಲ್ಲಿ ಮೀತಿ ಮೀರಿದ ಸ್ವಾರ್ಥಪರತೆ ತುಂಬಿಕೊAಡು ತೃಪ್ತಿ ಎಂಬುದು ಮರೀಚಿಕೆಯಾಗಿದೆ. ಇದಕ್ಕೆ ಸರಿಯಾದ ದಾರಿ ಆಧ್ಯಾತ್ಮಿಕತೆಗೆ ಮೊರೆಹೋಗುವುದೊಂದೇ ಆಗಿದೆ. ಸಾಮಾನ್ಯರಿಗೆ ಅತಿ ಸುಲಭವಾದುದು ಭಕ್ತಿ ಮಾರ್ಗ. ಎಲ್ಲಾ ಸಂತರು ಭಕ್ತಿ ಮಾರ್ಗವನ್ನು ಸಾರಿ ಸಾರಿ ಹೇಳಿದ್ದಾರೆ ಎಂದುಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.

ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ಒಂದು ವರ್ಷಗಳ ಕಾಲ ಹಮ್ಮಿಕೊಳ್ಳಲಾಗಿರುವ ಕೈವಾರ ತಾತಯ್ಯನವರ ೩೦೦ ನೇ ಜಯಂತೋತ್ಸವದ ಕಾರ್ಯಕ್ರಮದ ಅಂಗವಾಗಿ ಪೋತನ ಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚನ ಸಪ್ತಾಹವನ್ನು ಮುಳಬಾಗಿಲು ಪಟ್ಟಣದ ಬಜಾರು ಬೀದಿಯಲ್ಲಿರುವ ಶ್ರೀವಾಸವಿ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಮಾನವರ ಮೋಕ್ಷ ಸಂಪಾದನೆಗೆ ಅಹಂಕಾರವು ಅಡ್ಡವಾಗಿದೆ. ಅಹಂಕಾರ ತೊರೆದು ಅಂತರAಗ ಶುದ್ಧಿಗಾಗಿ ಭಾಗವತ ಶ್ರವಣವನ್ನು ಮಾಡಬೇಕು. ಈ ಭಾಗವತದ ಕಥೆಗಳಲ್ಲಿ ಭಕ್ತಿಯ ಸಂದೇಶಗಳಿವೆ. ಮುಕ್ತಿಗೆ ಸೋಪಾನವಾಗಿರುವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾಗವತದ ಸಂದೇಶಗಳಿAದ ಆತ್ಮಪ್ರಕಾಶವಾಗುತ್ತದೆ. ಗುರುಗಳು ಹೇಳಿರುವ ಸಾಧನೆಯ ಮಾರ್ಗವನ್ನು ಅನುಸರಿಸಿದರೆ ಪರಮಾತ್ಮನ ದರ್ಶನವನ್ನು ಮಾಡಬಹುದು. ನಮ್ಮಲ್ಲಿರುವ ಶತ್ರುಗಳಾದ ಆಸೆ, ಕ್ರೋಧ, ದ್ವೇಷ, ಮಾತ್ಸರ್ಯಗಳನ್ನು ಹೊಡೆದೊಡಿಸಲು ಶ್ರೀ ಭಾಗವತವು ಸಹಕಾರಿಯಾಗಿದೆ ಎಂದರು.

ಕೈವಾರ ಕ್ಷೇತದ ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಮಾತನಾಡಿ ಕಾರ್ಯಕ್ರಮದಲ್ಲಿ ಖ್ಯಾತ ಭಾಗವತ ಪ್ರವಚನಕಾರರಾದ ಮಂಕಾಲ ಶ್ರೀಹರಿಶರ್ಮ ರವರು ಪೋತನ ಭಾಗವತದ ಪ್ರವಚನವನ್ನು ನೀಡಿದರು. ಪ್ರವಚನದಲ್ಲಿ ಪೋತನ ಭಾಗವತದ ಹಲವಾರು ಘಟ್ಟಗಳನ್ನು ವಿವರಿಸಿ ವ್ಯಾಖ್ಯಾನಿಸಿದರು.

ಮುಳಬಾಗಿಲು ಪಟ್ಟಣದಲ್ಲಿರುವ ಸದ್ಗುರು ಕೈವಾರ ತಾತಯ್ಯನವರ ದೇವಾಲಯ ಹಾಗೂ ಶ್ರೀಕನ್ಯಾಕಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮುಳಬಾಗಿಲು ಸದ್ಗುರು ಶ್ರೀ ಕೈವಾರ ತಾತಯ್ಯನವರ ಮಠದ ಕಾರ್ಯದರ್ಶಿ ಬ್ಯಾಂಕ್ ನಾರಾಯಣಸ್ವಾಮಿ ನಾಗರಾಜಾಚಾರಿ, ವೆಂಕಟಸ್ವಾಮಿ, ಅಶ್ವಥನಾರಾಯಣ ರವರಿಂದ ಭಕ್ತಿಗೀತೆಗಳ ಗಾಯನವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಡಾ.ಪ್ರಕಾಶ್, ಕಾರ್ಯದರ್ಶಿ ಸುಬ್ಬಯ್ಯಶೆಟ್ಟಿ, ಬ್ಯಾಂಕ್ ನಿವೃತ್ತ ಅಧಿಕಾರಿ ಕೊಂಡಪ್ಪ, ಕಂಪನ ವೇದಿಕೆಯ ಡಾ.ದೊಡ್ಡಭದ್ರೇಗೌಡ, ಪ್ರಭಾಕರ್, ಕೈವಾರ ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರಾದ ಕೆ.ವಿ.ಸುರೇಶ್, ಕೆ.ಎಂ.ತ್ಯಾಗರಾಜ್, ಕುರುಡುಮಲೆ ಮಂಜುನಾಥ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande