ಕಡಗಟ್ಟೂರಿನಲ್ಲಿ ಎಲ್.ಜಿ. ಫೌಂಡೇಷನ್ನಿಂದ ಹೈಮಾಸ್ಟ್ ದೀಪ ಉದ್ಘಾಟನೆ
ಕಡಗಟ್ಟೂರಿನಲ್ಲಿ ಎಲ್ಜಿ ಫೌಂಡೇಷನ್ನಿ0ದ ಹೈಮಾಸ್ಟ್ ದೀಪ ಉದ್ಘಾಟನೆ
ಎಲ್.ಜಿ. ಫೌಂಡೇಷನ್ನಿ0ದ ಅಳವಡಿಸಲಾಗಿರುವ ಹೈಮಾಸ್ಟ್ ದೀಪವನ್ನು ಸಮಾಜ ಸೇವಕ ದೊಡ್ಡವಲ್ಲಭಿ ಲಕ್ಷಿö್ಮಗೌಡರ ಪತ್ನಿ ಲತಾ ಉದ್ಘಾಟಿಸಿದರು.


ಕೋಲಾರ, ೦೫ ಅಕ್ಟೋಬರ್ (ಹಿ.ಸ.) : ತಾಲೂಕಿನ ವೇಮಗಲ್ ಹೋಬಳಿ ಚನ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಗಟ್ಟೂರು ಗ್ರಾಮದಲ್ಲಿ ಎಲ್ಜಿ ಫೌಂಡೇಷನ್ ವತಿಯಿಂದ ೫ ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪವನ್ನು ಸಮಾಜ ಸೇವಕ ದೊಡ್ಡವಲ್ಲಬ್ಬಿ ಲಕ್ಷ್ಮಣಗೌಡ ಅವರ ಪತ್ನಿ ಲತಾ ಲಕ್ಷ್ಮಣಗೌಡ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಲತಾ ಲಕ್ಷ್ಮಣಗೌಡ, ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಬೆಳಕಿನ ವ್ಯವಸ್ಥೆ ಪ್ರಮುಖವಾಗಿದೆ. ತಮ್ಮ ಪತಿ ಲಕ್ಷ್ಮಣಗೌಡ ಅವರು ಸ್ವಂತ ಸಂಪಾದನೆಯ ಹಣದಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಅವರ ಪ್ರತಿಯೊಂದು ರೂಪಾಯಿಯಲ್ಲೂ ಅವರ ಪರಿಶ್ರಮವಿದೆ. ಯಾರೇ ಏನೇ ಹೇಳಿದರೂ ಸಮಾಜ ಸೇವೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಬರಗಾಲದ ಸಂದರ್ಭದಲ್ಲಿ ರೈತರು ಸಂಕಷ್ಟದಲ್ಲಿರುವಾಗ ಲಕ್ಷ್ಮಣಗೌಡ ಅವರು ಸ್ವಂತ ಹಣದಲ್ಲಿ ೫ ಲಕ್ಷ ವೆಚ್ಚ ಮಾಡಿ ಹೈಮಾಸ್ಟ್ ದೀಪ ಅಳವಡಿಸಿರುವುದು ಶ್ಲಾಘನೀಯ. ಅವರ ಸೇವೆಗೆ ವೈಯಕ್ತಿಕವಾಗಿ ಹಾಗೂ ಕಾರ್ಯಕರ್ತರ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಜೆಡಿಎಸ್ ಮುಖಂಡ ಸಿಎಂಆರ್. ಶ್ರೀನಾಥ್ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಹೊಂದಿರುವ ಲಕ್ಷ್ಮಣಗೌಡ ಅವರು ಎಲ್ಜಿ ಫೌಂಡೇಷನ್ ಮೂಲಕ ರೈತರು ಹಾಗೂ ಗ್ರಾಮೀಣ ಜನರಿಗೆ ನೆರವಾಗುತ್ತಿರುವುದು ಇತರರಿಗೆ ಪ್ರೇರಣೆಯಾಗಿದೆ ಎಂದರು. ಆರ್ಥಿಕ ಅಭಿವೃದ್ಧಿಯ ಜತೆಗೆ ಸಾಮಾಜಿಕ ಅಭಿವೃದ್ಧಿಯೂ ಆಗಬೇಕು. ರೈತರ ಮಕ್ಕಳಿಗೆ ಉನ್ನತ ಶಿಕ್ಷಣ, ಉತ್ತಮ ಆರೋಗ್ಯ ಹಾಗೂ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ದೊರೆಯಬೇಕು ಎಂದು ಹೇಳಿದರು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರಳವಾಗಿ ಕಾರ್ಯಕ್ರಮ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡರು ತಿಳಿಸಿದರು.

ಕಡಗಟ್ಟೂರು ಸೊಸೈಟಿ ಅಧ್ಯಕ್ಷ ದಯಾನಂದ್, ಮುಖಂಡರಾದ ಚಂದ್ರಣ್ಣ, ರಾಮಚಂದ್ರಗೌಡ ಸೇರಿದಂತೆ ಗ್ರಾಮ ಮುಖಂಡರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande