






ಬಳ್ಳಾರಿ, 04 ಅಕ್ಟೋಬರ್ (ಹಿ.ಸ.)
ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಶಿಕ್ಷಣ ಮತ್ತು ಶಿಸ್ತು - ಸಂಯಮಗಳ ಸಾಮಥ್ರ್ಯಗಳನ್ನು ಅರ್ಥ ಮಾಡಿಸಿಕೊಟ್ಟಲ್ಲಿ ಅವರು ಸಮಾಜಕ್ಕೆ ಬೆಳಕನ್ನು ಕೊಡುವ ಅದ್ಭುತ ಶಕ್ತಿಯಾಗಿ ರೂಪುಗೊಳ್ಳುತ್ತಾರೆ ಎಂದು ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭೆ, ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಗಳ ಸಂಸ್ಥಾಪಕ ಮಹಾಗರು ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 159ನೇ ಹಾಗೂ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ 88ನೇ ಜಯಂತ್ಯೋತ್ಸವು, ಶ್ರೀಜಗದ್ಗುರು ಕೊಟ್ಟೂರೇಶ್ವರ ರಥೋತ್ಸವ `ಜೀವನ ದರ್ಶನ' ಪ್ರವಚನದ ಸಮಾರೋಪದ ಸಾನಿಧ್ಯವಹಿಸಿ ಅವರು ಆಶೀರ್ವಚನ ಮಾಡಿದರು.
ಪ್ರತಿಯೊಬ್ಬ ತಂದೆ - ತಾಯಿ ಮಕ್ಕಳನ್ನು ಸಾಮಥ್ರ್ಯವಂತರನ್ನಾಗಿ, ಸಮಾಜಮುಖಿಯನ್ನಾಗಿ ಬೆಳೆಸುವ ಮಹಾನ್ ಚಿಂತನೆಯನ್ನು ಹೊಂದಿರುತ್ತಾರೆ. ಆದರೆ, ಪೋಷಕರು ಮಕ್ಕಳಲ್ಲಿ ಸಂಸ್ಕಾರ, ಶಿಕ್ಷಣ ಮತ್ತು ಶಿಸ್ತು - ಸಂಯಮಗಳ ಸಾಮಥ್ರ್ಯಗಳ ಅರ್ಥವನ್ನು ತಿಳಿಸಿದಲ್ಲಿ ಆ ಮಕ್ಕಳು ಖಂಡಿತವಾಗಿಯೂ ದೇಶಕ್ಕೆ, ಸಮಾಜಕ್ಕೆ, ನಾಡಿಗೆ ಬೆಳಕನ್ನು ನೀಡುವ ಚೇತನರಾಗುತ್ತಾರೆ ಎಂದರು.
ನಿರಂಜನ ಜಗದ್ಗುರು ಕೊಟ್ಟೂರು ಸ್ವಾಮಿ ಮಠವು ಸಮಾಜಮುಖಿಯಾಗಿ ಅನೇಕ ಕೆಲಸಗಳನ್ನು ಮಾಡುತ್ತಿದೆ. ಸಮಾಜ ಮತ್ತು ಭಕ್ತ ಸಮೂಹವು ಮಠದ ಏಳ್ಗೆಗಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುತ್ತಿದೆ. ಶಿಕ್ಷಣ, ಅನ್ನದಾನ ಮತ್ತು ಆಶ್ರಯ ನೀಡುವಲ್ಲಿ ಶ್ರೀಮಠವು ನಿರಂತರ ಶ್ರಮಿಸುತ್ತಿದೆ. ಶಿಕ್ಷಣದ ಮೂಲಕ ಪ್ರತಿಯೊಬ್ಬರಲ್ಲೂ ಬದಲಾವಣೆ ಮೂಡಿಸುವುದು ತಮ್ಮ ಗುರಿ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಅಧ್ಯಕ್ಷರಾದ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಮಹಾದೇವ ಬಿದರಿ ಅವರು `ಸತ್ಯದ ಜಯಭೇರಿ, ಶಂಕರ ಬಿದರಿ' ಗೌರವವನ್ನು ಸ್ವೀಕರಿಸಿ, ಕೊಟ್ಟೂರು ಸ್ವಾಮಿಠ ಮತ್ತು ಶ್ರೀಗಳು ನಾಡಿನಾದ್ಯಂತ ಸಂಚರಿಸಿ ಶಿಕ್ಷಣ, ಆಧ್ಯಾತ್ಮ ಮತ್ತು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುವ ಮೂಲಕ ಜಾತ್ಯಾತೀತ ಹಾಗೂ ಸರ್ವ ಸಮಾಜದ ಸಮಾನತೆಯ ಚಿಂತನೆಯ ಮೂಲಕ ಸಮಾಜಮುಖಿ ಕೆಲಸಗಳನ್ನು ನಿರಂತರ ನಿರ್ವಹಿಸುತ್ತಿದ್ದಾರೆ. ಕೊಟ್ಟೂರುಸ್ವಾಮಿ ಮಠವು ಮಾತೃತ್ವದ ಪ್ರೀತಿಯನ್ನು, ಶ್ರೀಗಳು ಮಾತೃ ಪ್ರೇಮವನ್ನು ತೋರುತ್ತಾರೆ ಎಂದರು.
ವೀರಶೈವ - ಲಿಂಗಾಯತ ಸಮಾಜದ ಪ್ರತಿಯೊಬ್ಬರೂ ವ್ಯಕ್ತಿಗತ ದ್ವೇಷ, ಅಸೂಯೆ, ಪ್ರತಿಕಾರ ಹಾಗೂ ಹಗೆಯ ಮನಸ್ಥಿತಿಯನ್ನು ಬಿಟ್ಟು ಪರಸ್ಪರ ಸಹಕಾರ - ಸಹಬಾಳ್ವೆ ಮತ್ತು ಸಹಕಾರ ತತ್ವದಲ್ಲಿ ಒಗ್ಗೂಡಿ ಸಮಾಜದಲ್ಲಿ ಒಗ್ಗಟ್ಟನ್ನು - ಬಲವನ್ನು ಪುನಃ ಮೂಡಿಸಿ ಬಲಾಢ್ಯವಾಗಿ ಬೆಳೆಯಬೇಕಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರೂ ಶಾಶ್ವತವಾದುದ್ದನ್ನು ಮಾಡಿ ಶಾಶ್ವತವಾಗಿ ಉಳಿಯಬೇಕಾಗಿದೆ ಎಂದರು.
ಬಳ್ಳಾರಿ ನಗರ ಶಾಸಕ ನಾಋಆ ಭರತರೆಡ್ಡಿ ಅವರು ಅತಿಥಿಗಳಾಗಿ, ಬಳ್ಳಾರಿ ನಗರದಲ್ಲಿ ಒಂದು ವೃತ್ತದಲ್ಲಿ ಅಶ್ವಾರೂಢ ಬಸವೇಶ್ವರರ ಪುತ್ಥಳಿಯನ್ನು ಪ್ರತಿಷ್ಠಾಪಿಸಿ ಆ ವೃತ್ತಕ್ಕೆ `ಬಸವೇಶ್ವರ ವೃತ್ತ' ಎಂದು ನಾಮಕರಣ ಮಾಡಲಾಗುತ್ತದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ದೆಹಲಿ ಘಟಕದ ಅಧ್ಯಕ್ಷರಾಗಿರುವ ಶ್ರೀಕಂಠ ಚೌಕಿಮಠ ಅವರು `ಹಾನಗಲ್ಲು ಶ್ರೀಕುಮಾರೇಶ್ವರರ ಜೀವನ ಮತ್ತು ಸಾಧನೆ' ಕುರಿತು ವಿಶೇಷ ಉಪನ್ಯಾಸ ನೀಡಿದರು.
ಬೂದುಗುಂಪದ ವಿರುಕ್ತಮಠದ ಸಿದ್ದೇಶ್ವರ ಸ್ವಾಮಿಗಳು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಅಮಾತಿ ಬಸವರಾಜ್ ಮತ್ತು ಕೆ. ಮರೇಗೌಡ ಅವರು ಕಾರ್ಯಕ್ರಮ ನಿರೂಪಿಸಿದರು. ದರೂರಿನ ಶ್ರೀಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮಿಗಳು, ಕುರುಗೋಡು ಮತ್ತು ಗರಗ ನಾಗಲಾಪುರದ ವಿರಕ್ತಮಠದ ನಿರಂಜನಪ್ರಭು ಸ್ವಾಮಿಗಳು, ಸೋಮಸಮುದ್ರ ವಿರಕ್ತಮಠದ ಸಿದ್ದಲಿಂಗಸ್ವಾಮಿಗಳು ಮತ್ತು ಶ್ರೀಧರಗಡ್ಡೆಯ ವಿರಕ್ತಮಠದ ಮರಿಕೊಟ್ಟೂರು ದೇಶೀಕರು ವೇದಿಕೆಯಲ್ಲಿದ್ದರು.
ಗಣ್ಯರಾದ ಅಲ್ಲಂ ಪ್ರಕಾಶ್, ಉಡೇದ ಬಸವರಾಜ್, ಡಾ. ಕೆ. ಮಹಾಂತೇಶ್, ಡಾ. ಅರವಿಂದ ಪಾಟೀಲ್, ಕೋಳೂರು ತಿಮ್ಮನಗೌಡ ಪಾಟೀಲ್, ಸಿರಿಗೇರಿ ಪನ್ನರಾಜ್, ಎಚ್.ಎಂ. ಅಂಕಲಯ್ಯ, ಎನ್. ಅಯ್ಯಪ್ಪ ವಕೀಲರು, ಮಹಾಲಿಂಗಯ್ಯ (ಟೆಂಗಿನಕಾಯಿ ರಾಜಣ್ಣ), ಕೋರಿ ವಿರೂಪಾಕ್ಷಿ, ಚಾನಾಳ್ ಶೇಖರ್, ಪತ್ರಕರ್ತ ಎನ್. ವೀರಭದ್ರಗೌಡ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಖ್ಯಾತ ಪ್ರವಚನಕಾರಾದ ಹರ್ಲಾಪುರದ ಹರ್ತಿಮಠ ಸಂಸ್ಥಾನದ ವೇದಮೂರ್ತಿ ಸದಾನಂದ ಶಾಸ್ತ್ರಿಗಳು `ಜೀವನ ದರ್ಶನ' ಪ್ರವಚನ ನಡೆಸಿದ್ದು,
ಬಿಳೇಬಾಳದ ಶಿವಲಿಂಗಯ್ಯ ಗವಾಯಿಗಳು ಸಂಗೀತ ಮತ್ತು ಹೊಳಲು ಗ್ರಾಮದ ಸಿದ್ದಲಿಂಗೇಶ ಅವರು ತಬಲಾ ಸಾಥ್ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್