
ಬೆಂಗಳೂರು, 04 ಅಕ್ಟೋಬರ್ (ಹಿ.ಸ.):
ಆ್ಯಂಕರ್:ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡ ಚಿನ್ನದ ಪದಕ ಗೆದ್ದಿರುವ ಹೆಮ್ಮೆಯ ಸಂದರ್ಭದಲ್ಲಿ ತಂಡದ ಮೂವರು ಸದಸ್ಯರು ಕರ್ನಾಟಕದವರು ಎಂಬುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ವಿಜಯಶಾಲಿ ತಂಡದ ಗೋಲ್‌ಕೀಪರ್ ಮೊಹಿತ್ ಎಚ್.ಎಸ್., ವೀಡಿಯೊ ವಿಶ್ಲೇಷಕ ಹರ್ಷಿತ್ ಎಂ. ಲಕ್ಷ್ಮಣ್ ಹಾಗೂ ಮುಖ್ಯ ದೈಹಿಕ ಚಿಕಿತ್ಸಕರಾದ ರಂಗನಾಥನ್ ಎಂ. ಅವರು ತಂಡದ ಗೆಲುವಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
ಮೂವರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುವ ಡಿ.ಕೆ. ಶಿವಕುಮಾರ್, ಅವರ ಮುಂದಿನ ಯಶಸ್ಸಿಗೆ ಶುಭ ಹಾರೈಸಿದ್ದಾರೆ. ಕರ್ನಾಟಕವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.