ತೆಕ್ಕಲಕೋಟೆ ವ್ಯಕ್ತಿ ಕಾಣೆ
ತೆಕ್ಕಲಕೋಟೆ, 30 ಅಕ್ಟೋಬರ್ (ಹಿ.ಸ.) ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಕ್ಕಲಕೋಟೆ ಪಟ್ಟಣದ 13 ನೇ ವಾರ್ಡ್ ನಿವಾಸಿಯಾದ ಎಸ್.ಹನುಮಂತ ಎನ್ನುವ 37 ವರ್ಷದ ವ್ಯಕ್ತಿಯು ಅ.26 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್ಪೆಕ್ಟರ್ ಅವರು ಮನವಿ ಮಾಡಿ
ತೆಕ್ಕಲಕೋಟೆ ವ್ಯಕ್ತಿ ಕಾಣೆ


ತೆಕ್ಕಲಕೋಟೆ, 30 ಅಕ್ಟೋಬರ್ (ಹಿ.ಸ.)

ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಕ್ಕಲಕೋಟೆ ಪಟ್ಟಣದ 13 ನೇ ವಾರ್ಡ್ ನಿವಾಸಿಯಾದ ಎಸ್.ಹನುಮಂತ ಎನ್ನುವ 37 ವರ್ಷದ ವ್ಯಕ್ತಿಯು ಅ.26 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್ಪೆಕ್ಟರ್ ಅವರು ಮನವಿ ಮಾಡಿದ್ದಾರೆ.

ವ್ಯಕ್ತಿಯ ಚಹರೆ ಗುರುತು:

ಎತ್ತರ 5.2 ಅಡಿ, ಕೋಲು ಮುಖ, ಎಣ್ಣೆ ಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ವ್ಯಕ್ತಿಯ ಎರಡು ಕೈಗಳ ಮೇಲೆ ಹಚ್ಚೆ ಹಾಕಿಸಿಕೊಂಡಿರುತ್ತಾನೆ. ನೀಲಿ ಮತ್ತು ಬಿಳಿ ಮಿಶ್ರಿತ ಆಫ್ ಟಿ-ಶರ್ಟ್ ಧರಿಸಿರುತ್ತಾನೆ. ಕನ್ನಡ, ತೆಲುಗು, ಉರ್ದು ಭಾಷೆ ಮಾತನಾಡುತ್ತಾನೆ.

ಮೇಲ್ಕಂಡ ಚಹರೆ ಗುರುತುಗಳುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ತೆಕ್ಕಲಕೋಟೆ ಪೊಲೀಸ್ ಠಾಣೆ ಪಿ.ಎಸ್.ಐ ದೂ.08396-248013, ಮೊ.9480803055, ಸಿ.ಪಿ.ಐ ಮೊ.08396-248044, ಬಳ್ಳಾರಿ ಗ್ರಾಮೀಣ ಉಪ ವಿಭಾಗ ಡಿ.ಎಸ್.ಪಿ ದೂ.08392-276000, ಎಸ್.ಪಿ ದೂ.08392-258400 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande