ನ.೦೧ರಂದು ಬಳ್ಳಾರಿಯಲ್ಲಿ ಪ್ರಥಮ ಬಾರಿಗೆ ಗಾಂಧಾರಿ ವಿದ್ಯೆ ಸ್ಪರ್ಧೆ ಆಯೋಜನೆ
ಬಳ್ಳಾರಿ, 30 ಅಕ್ಟೋಬರ್ (ಹಿ.ಸ.) ಶ್ರೀ ಮಹಾದೇವ ಶಿಕ್ಷಣ, ಕಲೆ ಹಾಗೂ ಸಾಂಸ್ಕøತಿಕ ಸಂಸ್ಥೆಯು ‘ಗಾಂಧಾರಿ ವಿದ್ಯೆ ಸ್ಪರ್ಧೆ-2026’ ಅನ್ನು ನವೆಂಬರ್ 1 ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಬಳ್ಳಾರಿಯ ಕನ್ನಡ ಭವನದಲ್ಲಿ ನಡೆಯಲಿದೆ. ಶ್ರೀ ಮಹಾದೇವ ಶಿಕ್ಷಣ, ಕಲೆ ಹಾಗೂ ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷೆ
‘Gandhari Vidyaya Competition-2026’


ಬಳ್ಳಾರಿ, 30 ಅಕ್ಟೋಬರ್ (ಹಿ.ಸ.)

ಶ್ರೀ ಮಹಾದೇವ ಶಿಕ್ಷಣ, ಕಲೆ ಹಾಗೂ ಸಾಂಸ್ಕøತಿಕ ಸಂಸ್ಥೆಯು ‘ಗಾಂಧಾರಿ ವಿದ್ಯೆ ಸ್ಪರ್ಧೆ-2026’ ಅನ್ನು ನವೆಂಬರ್ 1 ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಬಳ್ಳಾರಿಯ ಕನ್ನಡ ಭವನದಲ್ಲಿ ನಡೆಯಲಿದೆ.

ಶ್ರೀ ಮಹಾದೇವ ಶಿಕ್ಷಣ, ಕಲೆ ಹಾಗೂ ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಮಂಗಳಾ ಬಸವರಾಜ್ ಅವರು ಮಾಹಿತಿ ನೀಡಿದ್ದಾರೆ.

`ಗಾಂಧಾರಿ ವಿದ್ಯೆ ಸ್ಪರ್ಧೆ-2026' ಸ್ಪರ್ಧೆಗೆ ಬಳ್ಳಾರಿ, ಕುರೇಕುಪ್ಪ, ಸಂಡೂರು, ಕೊಪ್ಪಳ, ಧಾರವಾಡ, ಹಾವೇರಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸ್ಪರ್ಧಾಳುಗಳು ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ಅವಕಾಶವಿದೆ.

ಸ್ಪರ್ಧೆಯಲ್ಲಿ 5 ರಿಂದ 10 ವರ್ಷ ವಯಸ್ಸಿನ ಮಕ್ಕಳಿಗೆ ಕಿರಿಯರ ವಿಭಾಗ ಹಾಗೂ 11ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಹಿರಿಯರ ವಿಭಾಗ ಎಂದು ವಿಂಗಡಿಸಲಾಗಿದೆ. ಬಣ್ಣಗಳ ಗುರುತಿಸುವಿಕೆ, ವಸ್ತುಗಳ ಗುರುತಿಸುವಿಕೆ, ಅಕ್ಷರ ಮತ್ತು ಸಂಖ್ಯೆಗಳ ಗುರುತಿಸುವಿಕೆ, ಸ್ಪರ್ಶದ ಮೂಲಕ ಗುರುತಿಸುವಿಕೆ, ಸ್ಮರಣಶಕ್ತಿ ಹಾಗೂ ಏಕಾಗ್ರತೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆಯೋಜಿಸುವ ಉದ್ದೇಶವಿದೆ. ಎಲ್ಲಾ ಪರೀಕ್ಷೆಗಳನ್ನು ನಿಗದಿತ ನಿಯಮಗಳು, ಮಕ್ಕಳ ಸುರಕ್ಷತೆ ಮತ್ತು ಮೇಲ್ವಿಚಾರಣೆಗೆ ಆದ್ಯತೆ ನೀಡಿ ನಡೆಸಲಾಗುವುದು.

ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಜಾಗತಿಕ ವೇದಿಕೆಯ ರಾಜ್ಯಾಧ್ಯಕ್ಷರಾದ ಆರ್. ಪ್ರಭುಶೇಖರಗೌಡ ಅವರು ಉದ್ಘಾಟಿಸಲಿದ್ದು, ಸಂಸ್ಥೆಯ ಗೌರವಾಧ್ಯಕ್ಷರಾದ ಬಸವರಾಜ್ ಬಿಸಲಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಎಸ್. ಎಂ. ಭದ್ರಯ್ಯ, ಗಾಂಧಾರಿ ವಿದ್ಯೆ ತರಬೇತುದಾರರಾದ ಸಂಡೂರಿನ ಶ್ರೀಮತಿ ಉಮಾ ಗಡಿಗಿ, ಯೋಗ ಮತ್ತು ಗಾಂಧಾರಿ ವಿದ್ಯೆ ತರಬೇತುದಾರರಾದ ಕೆ. ಚಿದಂಬರರಾವ್ ಹಾಗೂ ಎ. ರಾಘವೇಂದ್ರ ಅವರು ಉಪಸ್ಥಿತರಿರಲಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande