
ಬೆಂಗಳೂರು, 30 ಅಕ್ಟೋಬರ್ (ಹಿ.ಸ.):
ನಗರದಲ್ಲಿ ಒಟ್ಟು ಒಂಬತ್ತು ಎಲಿವೇಟೆಡ್ ಕಾರಿಡಾರ್ ಹಾಗೂ ಫ್ಲೈಓವರ್ ಯೋಜನೆಗಳ ನಿರ್ಮಾಣಕ್ಕೆ ಆಹ್ವಾನಿಸಲಾಗಿದ್ದ ಟೆಂಡರ್ಗಳನ್ನು ಅಕ್ಟೋಬರ್ 19ರಂದು ತಾಂತ್ರಿಕ ಕಾರಣಗಳಿಂದ ರದ್ದುಗೊಳಿಸಲಾಗಿತ್ತು.
ಇದೀಗ ಅವುಗಳ ಪೈಕಿ ಆರು ಪ್ರಮುಖ ಕಾಮಗಾರಿಗಳಿಗೆ ಒಟ್ಟು 1,640.3 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮರು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.
ಅವುಗಳಲ್ಲಿ ಮಿನರ್ವ–ಹಡ್ಸನ್ ವೃತ್ತದ ಎಲಿವೇಟೆಡ್ ಕಾರಿಡಾರ್, ಶೂಲೇ ವೃತ್ತ–ಸೇಂಟ್ ಜಾನ್ಸ್ ಆಸ್ಪತ್ರೆ ರಸ್ತೆ ಕಾರಿಡಾರ್, ದೊಡ್ಡಬಳ್ಳಾಪುರ ರಸ್ತೆಯಿಂದ ಹಳೆ ಯಲಹಂಕ ಮಾರ್ಗವಾಗಿ ಕೋಗಿಲು ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಎಲಿವೇಟೆಡ್ ರಸ್ತೆ, ಮಹಾಲಕ್ಷ್ಮಿ ಲೇಔಟ್ನ ಪೈಪ್ಲೈನ್ ರಸ್ತೆಯ ಗ್ರೇಡ್ ಸೆಪರೇಟರ್ಗಳು,
ತುಮಕೂರು ರಸ್ತೆಯ ಎಂಇಐ ಜಂಕ್ಷನ್ನ ಸ್ಪ್ಲಿಟ್ ಫ್ಲೈಓವರ್ ಹಾಗೂ ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ನ ಎಲಿವೇಟೆಡ್ ಕಾರಿಡಾರ್ ಸೇರಿವೆ.ಇನ್ನುಳಿದ ಮೂರು ಯೋಜನೆಗಳಿಗೂ ಬಿ-ಸ್ಮೈಲ್ ಸಂಸ್ಥೆ ಈ ವಾರದ ಆರಂಭದಲ್ಲಿ ಮರು ಟೆಂಡರ್ ಆಹ್ವಾನಿಸಿದೆ.
ಪರಿಷ್ಕೃತ ಅಂದಾಜು ವೆಚ್ಚದೊಂದಿಗೆ ಕಾಮಗಾರಿಗಳನ್ನು ಮರು ಟೆಂಡರ್ ಮಾಡುವುದರಿಂದ ಸಾರ್ವಜನಿಕರ ತೆರಿಗೆ ಹಣದ ಉಳಿತಾಯವಾಗಲಿದೆ.
ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪಾರದರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನೆರವಾಗಲಿದೆ ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R