
ಬಳ್ಳಾರಿ, 30 ಅಕ್ಟೋಬರ್ (ಹಿ.ಸ.)
ಮಕ್ಕಳು ಹಾಗೂ ಯುವಜನರಲ್ಲಿರುವ ಸುಪ್ತ ಕಲಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ‘ಕಲಾ ಪ್ರತಿಭೋತ್ಸವ'ವನ್ನು ಆಯೋಜಿಸಲಾಗಿದ್ದು, ಆಸಕ್ತ ಪ್ರತಿಭೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಉತ್ಸವದಲ್ಲಿ ಬಾಲಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಬಾಲಪ್ರತಿಭೆ (8 ರಿಂದ 14 ವರ್ಷ): ಶಾಸ್ತಿಯ ನೃತ್ಯ, ಸುಗಮ ಸಂಗೀತ, ಚಿತ್ರಕಲೆ, ಜನಪದ ಗೀತೆ, ಕರ್ನಾಟಕ/ಹಿಂದೂಸ್ತಾನಿ ವಾದ್ಯ ಸಂಗೀತ ಹಾಗೂ ಹಿಂದೂಸ್ತಾನಿ/ಶಾಸ್ತಿಯ ಸಂಗೀತ ಗಾಯನ (ಏಕ ವ್ಯಕ್ತಿ ಸ್ಪರ್ಧೆ).
ಕಿಶೋರ ಪ್ರತಿಭೆ (14 ರಿಂದ 18 ವರ್ಷ): ಶಾಸ್ತಿಯ ನೃತ್ಯ, ಸುಗಮ ಸಂಗೀತ, ಚಿತ್ರಕಲೆ, ಜನಪದ ಗೀತೆ, ಕರ್ನಾಟಕ/ಹಿಂದೂಸ್ತಾನಿ ವಾದ್ಯ ಸಂಗೀತ ಹಾಗೂ ಹಿಂದೂಸ್ತಾನಿ/ಶಾಸ್ತಿಯ ಸಂಗೀತ ಗಾಯನ (ಏಕ ವ್ಯಕ್ತಿ ಸ್ಪರ್ಧೆ).
ಯುವ ಪ್ರತಿಭೆ (18 ರಿಂದ 30 ವರ್ಷ): ನನ್ನ ಮೆಚ್ಚಿನ ಸಾಹಿತಿ (ಆಶುಭಾಷಣ), ಶಾಸ್ತಿಯ ನೃತ್ಯ, ಸುಗಮ ಸಂಗೀತ, ಚಿತ್ರಕಲೆ, ಕರ್ನಾಟಕ/ಹಿಂದೂಸ್ತಾನಿ ಶಾಸ್ತಿಯ ಸಂಗೀತ ಹಾಗೂ ವಾದ್ಯ ಸಂಗೀತ (ಏಕ ವ್ಯಕ್ತಿ ಸ್ಪರ್ಧೆ).
ಸಮೂಹ ಸ್ಪರ್ಧೆ: ನಾಟಕ ಹಾಗೂ ಜಾನಪದ ನೃತ್ಯ ಸ್ಪರ್ಧೆಗಳು ನಡೆಯಲಿದ್ದು, ತಂಡದಲ್ಲಿ ಕನಿಷ್ಠ 10 ಹಾಗೂ ಗರಿಷ್ಠ 15 ಸದಸ್ಯರಿಗೆ ಅವಕಾಶವಿರುತ್ತದೆ.
*ನಿಯಮಗಳು ಹಾಗೂ ಷರತ್ತುಗಳು:*
ಒಬ್ಬ ಸ್ಪರ್ಧಿಗೆ ಕೇವಲ ಒಂದು ಕಲಾ ಪ್ರಕಾರದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ. ವಯಸ್ಸಿನ ದೃಢೀಕರಣಕ್ಕಾಗಿ ವಿದ್ಯಾಸಂಸ್ಥೆಯಿAದ ಪಡೆದ ದಾಖಲೆ ಅಥವಾ ಸ್ಥಳೀಯ ಸಂಸ್ಥೆಗಳು (ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ) ನೀಡಿದ ಜನನ ಪ್ರಮಾಣಪತ್ರವನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು. ಶಾಲಾ-ಕಾಲೇಜುಗಳ ಮೂಲಕ ಅರ್ಜಿ ಸಲ್ಲಿಸುವಾಗ ಮುಖ್ಯಸ್ಥರು ವಿದ್ಯಾರ್ಥಿಗಳ ಜನ್ಮ ದಿನಾಂಕ ದೃಢೀಕರಿಸಿದ ಪಟ್ಟಿಯನ್ನು ಪ್ರತ್ಯೇಕವಾಗಿ ಕಳುಹಿಸಬೇಕು.
ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ನವೆಂಬರ್ 16 ರಂದು ಸಂಜೆ 5 ಗಂಟೆಯೊಳಗೆ ನೇರವಾಗಿ ಅಥವಾ ಅಂಚೆ ಮೂಲಕ ‘ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಂಸ್ಕೃತಿಕ ಸಮುಚ್ಚಯ, ಡಾ. ರಾಜ್ ಕುಮಾರ್ ರಸ್ತೆ, ಬಳ್ಳಾರಿ-583101’ ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರ ಹಾಗೂ ನಿಬಂಧನೆಗಳಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08392-275182 ಅಥವಾ ಕಚೇರಿಗೆ ನೇರವಾಗಿ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್