
ಬಳ್ಳಾರಿ, 30 ಅಕ್ಟೋಬರ್ (ಹಿ.ಸ.)
ಬಳ್ಳಾರಿಗೆ ಸಮೀಪದ ಸಂಗನಕಲ್ಲು ಗ್ರಾಮದ ಮೂಲದವರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 800 ಪ್ರತಿಭೆಗಳಿಗೆ ನವೆಂಬರ್ 1ರ ಭಾನುವಾರ `ಶತಮಾನಂ ಭವತಿ', `ಸೇವಾ ರತ್ನ', `ಫ್ಯಾಮಿಲಿ ಹೀರೋ' ಮತ್ತು `ರೈಸಿಂಗ್ ಸ್ಟಾರ್' ಪ್ರಶಸ್ತಿಯನ್ನು ನೀಡಿ ಗೌರವಿಸಿ, ಅಭಿನಂದಿಸಿ 'ಸಾಧಕರ ಸಂಭ್ರಮಾಚರಣೆ'ಯನ್ನು ನಡೆಸಲಾಗುತ್ತದೆ ಎಂದು ನಿವೃತ್ತ ಇಂಜಿನಿಯರ್ ಡಿ. ವೆಂಕಟರಮಣ ಅವರು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1ರಂದು ಭಾನುವಾರ ಸಂಜೆ 3ಕ್ಕೆ ಸಂಗನಕಲ್ಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಂಗನಕಲ್ಲು ಗ್ರಾಮ ಮೂಲ ನಿವಾಸಿಗಳ ಪೈಕಿ ಐಪಿಎಸ್, ಐಎಎಸ್, ಕ್ರೀಡೆ, ವೈದ್ಯಕೀಯ, ಸೇವಾ ಕ್ಷೇತ್ರ ಹೀಗೇ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಲ್ಲಾ ಜಾತಿ, ವರ್ಗ ಮತ್ತು ಪಂಗಡಗಳ 800 ಪ್ರತಿಭೆಗಳನ್ನು ಗುರುತಿಸಿ, ಈ ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಿ, 'ಸಾಧಕರ ಸಂಭ್ರಮಾಚರಣೆ'ಯನ್ನು ನಡೆಸಲಾಗುತ್ತದೆ ಎಂದರು.
ಸಂಗನಕಲ್ಲು ಹಿಮಂತರಾಜ್, ಕೃಷ್ಣಪ್ಪ, ಕಟ್ಟೇಗೌಡ, ಮೇಟಿ ಮಸವರಾಜಗೌಡ, ವಕೀಲ ದಾಸರಿ ಗೋವಿಂದ, ಕೃಷ್ಣ, ಪ್ರಸಾದ್, ಯುಧಿಷ್ಠಿರ, ಗಣೇಶ್, ನಾಗರಾಜ್, ಭಾಷಾ, ಮಲ್ಲಿಕಾರ್ಜುನ, ಅಂಧ್ರಾಳ್ ಚಂದ್ರ, ನಾಗನಗೌಡ, ಜಡೆಯಪ್ಪ, ಜಡೆಗೌಡ, ಬುಗ್ಗಯ್ಯ ಸೇರಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್