ಕಾಣೆಯಾದ ಗಂಡ ಮತ್ತು ಹೆಂಡತಿ -ಪತ್ತೆಗಾಗಿ ಮನವಿ
ಬಳ್ಳಾರಿ, 30 ಅಕ್ಟೋಬರ್ (ಹಿ.ಸ.) ಬಳ್ಳಾರಿ ನಗರದ ಕೋಟೆ ಪ್ರದೇಶದ 1ನೇ ಕ್ರಾಸ್ ನ ಭದ್ರಕಾಳಿ ಗುಡಿ ಹತ್ತಿರದ ನಿವಾಸಿಗಳಾದ 28 ವರ್ಷದ ಯುವರಾಜ್ ಅಲಿಯಾಸ್ ಎರಿಸ್ವಾಮಿ ಹಾಗೂ 27 ವರ್ಷದ ಹೆಂಡತಿ ಮಂಜುಳಾ ಇಬ್ಬರು ಅ.21 ರಂದು ಮನೆಯಿಂದ ಹೊರಗಡೆ ಹೋದವರು ವಾಪಾಸ್ ಬಾರದೇ ಕಾಣೆಯಾಗಿರುವ ಕುರಿತು ಕೌಲ್ ಬಜಾರ್ ಪ
ಕಾಣೆಯಾದ ಗಂಡ ಮತ್ತು ಹೆಂಡತಿ -ಪತ್ತೆಗಾಗಿ ಮನವಿ


ಕಾಣೆಯಾದ ಗಂಡ ಮತ್ತು ಹೆಂಡತಿ -ಪತ್ತೆಗಾಗಿ ಮನವಿ


ಬಳ್ಳಾರಿ, 30 ಅಕ್ಟೋಬರ್ (ಹಿ.ಸ.)

ಬಳ್ಳಾರಿ ನಗರದ ಕೋಟೆ ಪ್ರದೇಶದ 1ನೇ ಕ್ರಾಸ್ ನ ಭದ್ರಕಾಳಿ ಗುಡಿ ಹತ್ತಿರದ ನಿವಾಸಿಗಳಾದ 28 ವರ್ಷದ ಯುವರಾಜ್ ಅಲಿಯಾಸ್ ಎರಿಸ್ವಾಮಿ ಹಾಗೂ 27 ವರ್ಷದ ಹೆಂಡತಿ ಮಂಜುಳಾ ಇಬ್ಬರು ಅ.21 ರಂದು ಮನೆಯಿಂದ ಹೊರಗಡೆ ಹೋದವರು ವಾಪಾಸ್ ಬಾರದೇ ಕಾಣೆಯಾಗಿರುವ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.

ಯುವರಾಜ್ ಅಲಿಯಾಸ್ ಎರಿಸ್ವಾಮಿ ಚಹರೆ ಗುರುತು: ಅಂದಾಜು 5.6 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈ ಮೇಲೆ ದುರ್ಗಾದೇವಿಯ ಹಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ತಿಳಿ ಹಸಿರು ಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿರುತ್ತಾನೆ.

ಮಂಜುಳಾ ಚಹರೆ ಗುರುತು: ಅಂದಾಜು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ತೇಳುವಾದ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಕೆಂಪು ಮತ್ತು ನೀಲಿ ಬಣ್ಣದ ಸೀರೆ ಹಾಗೂ ಕೆಂಪು ಬಣ್ಣದ ಕುಪ್ಪಸ ಧರಿಸಿರುತ್ತಾರೆ.

ಕಾಣೆಯಾದ ವ್ಯಕ್ತಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145 ಅಥವಾ ಪಿಐ ಮೊ.9480803047, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande