ಬಾಗಲಕೋಟೆ: ಶಾಲೆಗಳಿಗೆ ಬಿಇಒ ದಿಢೀರ್ ಭೇಟಿ – ಸಮವಸ್ತ್ರ, ಶೂ ಹಾಗೂ ಮೂಲಸೌಕರ್ಯಗಳ ಗುಣಮಟ್ಟ ಪರಿಶೀಲನೆ
ಬಾಗಲಕೋಟೆ, 30 ಅಕ್ಟೋಬರ್ (ಹಿ.ಸ.) ಮುಧೋಳ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು (ಇಒ) ಮುಧೋಳ ನಗರ ವ್ಯಾಪ್ತಿಯ ‘ಪಿ ಎಂ ಶ್ರೀ’ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಮ್ಮ ನಗರ ಹಾಗೂ ಸರಕಾರಿ ಇಂಗ್ಲಿಷ್ ಮೀಡಿಯಂ ಉರ್ದು ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಸಮೀರ್ ಅಬ್ದುಲ್ ಮುಲ್ಲ
ಶಾಲೆಗೆ ಭೇಟಿ


ಬಾಗಲಕೋಟೆ, 30 ಅಕ್ಟೋಬರ್ (ಹಿ.ಸ.)

ಮುಧೋಳ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು (ಇಒ) ಮುಧೋಳ ನಗರ ವ್ಯಾಪ್ತಿಯ ‘ಪಿ ಎಂ ಶ್ರೀ’ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಮ್ಮ ನಗರ ಹಾಗೂ ಸರಕಾರಿ ಇಂಗ್ಲಿಷ್ ಮೀಡಿಯಂ ಉರ್ದು ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಸಮೀರ್ ಅಬ್ದುಲ್ ಮುಲ್ಲಾ ಅವರೊಂದಿಗೆ ಜಂಟಿಯಾಗಿ ಭೇಟಿ ನೀಡಿ ಶಾಲಾ ಚಟುವಟಿಕೆಗಳು ಮತ್ತು ಮೂಲಸೌಕರ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿದರು.

ಈ ಭೇಟಿಯ ಸಮಯದಲ್ಲಿ ಸರಕಾರದಿಂದ ಮಕ್ಕಳಿಗೆ ವಿತರಿಸಲಾಗಿರುವ ಸಮವಸ್ತ್ರ, ಶೂ ಹಾಗೂ ಕಾಲುಚೀಲಗಳ ಗುಣಮಟ್ಟವನ್ನು ಅಧಿಕಾರಿಗಳು ಖುದ್ದಾಗಿ ತಪಾಸಣೆ ಮಾಡಿದರು. ಯಾವುದೇ ರೀತಿಯ ಕಳಪೆ ಸಾಮಗ್ರಿಗಳು ಮಕ್ಕಳಿಗೆ ತಲುಪದಂತೆ ಜಾಗ್ರತೆ ವಹಿಸಬೇಕು ಹಾಗೂ ನಿಯಮಾನುಸಾರ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನೇ ವಿತರಿಸಬೇಕೆಂದು ಸಂಬಂಧಪಟ್ಟ ಸಿಬ್ಬಂದಿಗೆ ನಿರ್ದೇಶನ ನೀಡಿದರು.

ಬೆಳವಣಿಗೆಯ ಭಾಗವಾಗಿ ಇಒ ಅವರು ತರಗತಿ ಕೊಠಡಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದರು. ಶಾಲೆಯಲ್ಲಿ ದೊರೆಯುತ್ತಿರುವ ಶಿಕ್ಷಣದ ಗುಣಮಟ್ಟ, ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಹಾಗೂ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಮಕ್ಕಳಿಂದ ಮಾಹಿತಿ ಪಡೆದುಕೊಂಡರು.

ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿದ ಅಧಿಕಾರಿಗಳು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಇದೇ ಸಂದರ್ಭದಲ್ಲಿ ಶಾಲೆಯ ಆವರಣ, ನೈರ್ಮಲ್ಯ ಹಾಗೂ ತರಗತಿಗಳ ವಾತಾವರಣವನ್ನು ವೀಕ್ಷಿಸಿದ ಅಧಿಕಾರಿಗಳು, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಕಾಯ್ದುಕೊಳ್ಳುವುದು ಆದ್ಯತೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande