ತೋರಣಗಲ್ಲು : ಅಕ್ಟೋಬರ್ 4 ರಂದು ವಿದ್ಯುತ್ ವ್ಯತ್ಯಯ
ತೋರಣಗಲ್ಲು, 03 ಅಕ್ಟೋಬರ್ (ಹಿ.ಸ.) ತೋರಣಗಲ್ಲು 110/33/11 ಕೆವಿ ವಿದ್ಯುತ್ ವಿತರಣ ಕೇಂದ್ರದಲ್ಲಿ ವಿದ್ಯುತ್ ಮಾರ್ಗಗಳ ಬದಲಾವಣೆ ಮತ್ತು ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಅಕ್ಟೋಬರ್ 4 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ತೋರಣಗಲ್ಲು ಹೋಬಳಿ ವ್ಯಾ
ತೋರಣಗಲ್ಲು : ಅಕ್ಟೋಬರ್ 4 ರಂದು ವಿದ್ಯುತ್ ವ್ಯತ್ಯಯ


ತೋರಣಗಲ್ಲು, 03 ಅಕ್ಟೋಬರ್ (ಹಿ.ಸ.)

ತೋರಣಗಲ್ಲು 110/33/11 ಕೆವಿ ವಿದ್ಯುತ್ ವಿತರಣ ಕೇಂದ್ರದಲ್ಲಿ ವಿದ್ಯುತ್ ಮಾರ್ಗಗಳ ಬದಲಾವಣೆ ಮತ್ತು ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಅಕ್ಟೋಬರ್ 4 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ತೋರಣಗಲ್ಲು ಹೋಬಳಿ ವ್ಯಾಪ್ತಿಗೆ ಒಳಪಡುವ ಪಂಚಾಯಿತಿಗಳಾದ ವಡ್ಡು, ತಾಳೂರು, ಬನ್ನಿಹಟ್ಟಿ, ತಾರನಗರ, ಕುರೆಕುಪ್ಪಾ ಟೌನ್ ಗ್ರಾಮಗಳ ಎನ್ಜೆ.ವೈ ಮತ್ತು ಐಪಿಸೆಟ್ ಗ್ರಾಹಕರು, ವಾಟರ್ ವರ್ಕ್ ಮತ್ತು ಟಿಎಫ್೨ ವಾಟರ್ ವರ್ಕ್ ಫಿಡರ್ನ ಮಾರ್ಗಕ್ಕೆ ಬರುವ ಎಲ್ಲಾ ಹೆಚ್ಟಿ ,ಮತ್ತು ಇಹೆಚ್ಟಿ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande