ಟಿಬೆಟ್ನಲ್ಲಿ ಒಂದು ಗಂಟೆಯೊಳಗೆ 3.6 ಮತ್ತು 3.1 ತೀವ್ರತೆಯ ಎರಡು ಭೂಕಂಪ
ನವದೆಹಲಿ, 03 ಅಕ್ಟೋಬರ್ (ಹಿ.ಸ.): ನೇಪಾಳದ ಸಮೀಪದ ಟಿಬೆಟ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಸುಮಾರು ಒಂದು ಗಂಟೆಯ ಅವಧಿಯಲ್ಲಿ ಎರಡು ಭೂಕಂಪಗಳು ಸಂಭವಿಸಿವೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪಗಳ ತೀವ್ರತೆ ಕ್ರಮವಾಗಿ 3.6 ಮತ್ತು 3.1ರಷ್ಟಿತ್ತು. ಹಿಮಾಲಯದ ಸೂಕ್ಷ್ಮ ಭೂಕಂಪನ ವಲಯದಲ
सांकेतिक


ನವದೆಹಲಿ, 03 ಅಕ್ಟೋಬರ್ (ಹಿ.ಸ.):

ನೇಪಾಳದ ಸಮೀಪದ ಟಿಬೆಟ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಸುಮಾರು ಒಂದು ಗಂಟೆಯ ಅವಧಿಯಲ್ಲಿ ಎರಡು ಭೂಕಂಪಗಳು ಸಂಭವಿಸಿವೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪಗಳ ತೀವ್ರತೆ ಕ್ರಮವಾಗಿ 3.6 ಮತ್ತು 3.1ರಷ್ಟಿತ್ತು. ಹಿಮಾಲಯದ ಸೂಕ್ಷ್ಮ ಭೂಕಂಪನ ವಲಯದಲ್ಲಿ ಈ ಭೂಕಂಪನ ಚಟುವಟಿಕೆ ದಾಖಲಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಮೊದಲ ಭೂಕಂಪ ಬೆಳಗ್ಗೆ 6 ಗಂಟೆಗೆ ಸಂಭವಿಸಿದೆ. ಇದರ ತೀವ್ರತೆ 3.6ರಷ್ಟಿದ್ದು, ಭೂಕಂಪದ ಕೇಂದ್ರವು ಭೂಮಿಯ ಮೇಲ್ಮೈಯಿಂದ ಸುಮಾರು 15 ಕಿಲೋಮೀಟರ್ ಆಳದಲ್ಲಿತ್ತು. 29.623 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 92.503 ಡಿಗ್ರಿ ಪೂರ್ವ ರೇಖಾಂಶದಲ್ಲಿ ಇದರ ಕೇಂದ್ರ ದಾಖಲಾಗಿದೆ.

ಇದಾದ ಸುಮಾರು 55 ನಿಮಿಷಗಳ ಬಳಿಕ ಬೆಳಗ್ಗೆ 6.55ಕ್ಕೆ 3.1 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ. ಇದರ ಕೇಂದ್ರವು ಸುಮಾರು 14 ಕಿಲೋಮೀಟರ್ ಆಳದಲ್ಲಿದ್ದು, 28.459 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 92.196 ಡಿಗ್ರಿ ಪೂರ್ವ ರೇಖಾಂಶದಲ್ಲಿ ದಾಖಲಾಗಿದೆ.

ಎರಡೂ ಭೂಕಂಪಗಳು ಹಿಮಾಲಯದ ಭೂಕಂಪನ ವಲಯದ ಭಾಗವಾಗಿರುವ ಟಿಬೆಟ್ ಪ್ರದೇಶದಲ್ಲಿ ಸಂಭವಿಸಿವೆ. ಸದ್ಯ ಈ ಭೂಕಂಪನಗಳಿಂದ ಯಾವುದೇ ದೊಡ್ಡ ಪ್ರಮಾಣದ ಹಾನಿ ಅಥವಾ ಸಾವು-ನೋವು ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ನೇಪಾಳವು ಇತ್ತೀಚಿನ ದಿನಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಸೇರಿದಂತೆ ಹಲವು ನೈಸರ್ಗಿಕ ವಿಕೋಪಗಳಿಂದ ತತ್ತರಿಸಿರುವ ಸಂದರ್ಭದಲ್ಲೇ ಈ ಎರಡು ಭೂಕಂಪಗಳು ಸಂಭವಿಸಿವೆ. ಆಗಸ್ಟ್‌ನಲ್ಲಿ ನೇಪಾಳ-ಚೀನಾ ಗಡಿಯ ಸಮೀಪ ಹಿಮಪಾತ ಮತ್ತು ಬಂಡೆಗಳು ಕುಸಿದ ಬಳಿಕ ಹಠಾತ್ ಪ್ರವಾಹ ಉಂಟಾಗಿ ಭೋಟೆ ಕೋಶಿ ನದಿಯ ನೀರಿನ ಮಟ್ಟ ಏರಿಕೆಯಾಗಿತ್ತು. ಇದರಿಂದ ಮನೆಗಳು, ರಸ್ತೆಗಳು, ಸೇತುವೆಗಳು ಮತ್ತು ಜಲವಿದ್ಯುತ್ ಯೋಜನೆಗಳಿಗೆ ಹಾನಿಯಾಗಿತ್ತು.

ನೇಪಾಳ ರೆಡ್ ಕ್ರಾಸ್ ಸೊಸೈಟಿಯ ಅಕ್ಟೋಬರ್ 1ರ ಪರಿಸ್ಥಿತಿ ವರದಿ ಪ್ರಕಾರ, ಸೆಪ್ಟೆಂಬರ್ 24ರಿಂದ 27ರವರೆಗೆ ನಿರಂತರ ಮಳೆಯ ಪರಿಣಾಮ ಹಲವು ಪ್ರಾಂತ್ಯಗಳಲ್ಲಿ ಪ್ರವಾಹ, ಭೂಕುಸಿತ ಮತ್ತು ನೀರು ನಿಲ್ಲುವ ಪರಿಸ್ಥಿತಿ ಉಂಟಾಗಿತ್ತು. ಈ ಘಟನೆಗಳಲ್ಲಿ 30 ಮಂದಿ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ ಹಾಗೂ ಮೂವರು ನಾಪತ್ತೆಯಾಗಿದ್ದಾರೆ. ಸುಮಾರು 2,000 ಕುಟುಂಬಗಳು ಬಾಧಿತವಾಗಿವೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande