
ಬಳ್ಳಾರಿ, 03 ಅಕ್ಟೋಬರ್ (ಹಿ.ಸ.)
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11 ಕೆ.ವಿ ದಕ್ಷಿಣ ಉಪ-ಕೇಂದ್ರದಿAದ ವಿದ್ಯುತ್ ಸರಬರಾಜಾಗುವ 11 ಕೆ.ವಿ ಎಫ್-27 ಆಂಧ್ರಾಳ್ ನಗರ ಫೀಡರ್ ಹಾಗೂ ಎಫ್-47 ಮಿಲ್ಲರಪೇಟೆ ಫೀಡರ್ ಮಾರ್ಗಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ತುರ್ತಾಗಿ ಕೈಗೊಂಡಿರುವುದರಿ0ದ, ಅಕ್ಟೋಬರ್ 04 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಎಫ್-27 ಆಂಧ್ರಾಳ್ ಮಾರ್ಗ: ಆಂಧ್ರಾಳ್, ಕಣೇಕಲ್ಲು ರಸ್ತೆ, ಮಂಡಾಳು ಬಟ್ಟೆ ಏರಿಯಾ. ಎಫ್-47 ಮಿಲ್ಲರಪೇಟೆ ಮಾರ್ಗ: ಆಂಧ್ರಾಳ್ ರಸ್ತೆ, ಕೊಲಿಮಿ ಚೌಕ್, ಮಿಲ್ಲರ ಪೇಟೆ. ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕಾಗಿ ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ಅವರು ವಿನಂತಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್