ಹಿರಿಯ ಪತ್ರಿಕಾ ಛಾಯಾಗ್ರಾಹಕ ಲೋಕನಾಥ್ ನಿಧನ
ಬಳ್ಳಾರಿ, 03 ಅಕ್ಟೋಬರ್ (ಹಿ.ಸ.) ಬಳ್ಳಾರಿ ಜಿಲ್ಲೆಯ ಹಿರಿಯ ಪತ್ರಿಕಾ ಛಾಯಾ ಗ್ರಾಹಕರಾಗಿದ್ದ ವೇಣಿ ಲೋಕನಾಥ್ (76) ಅವರು ಶುಕ್ರವಾರ ನಿಧನರಾಗಿದ್ದು ಹರಿಶ್ಚಂದ್ರ ಘಾಟ್ನಲ್ಲಿ ಅವರ ಅಂತ್ಯಕ್ರಿಯೆಯನ್ನು ಶನಿವಾರ ನೆರವೇರಿಸಲಾಯಿತು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರರು - ಅ
Photojournalist Loknath passes away


ಬಳ್ಳಾರಿ, 03 ಅಕ್ಟೋಬರ್ (ಹಿ.ಸ.)

ಬಳ್ಳಾರಿ ಜಿಲ್ಲೆಯ ಹಿರಿಯ ಪತ್ರಿಕಾ ಛಾಯಾ ಗ್ರಾಹಕರಾಗಿದ್ದ ವೇಣಿ ಲೋಕನಾಥ್ (76) ಅವರು ಶುಕ್ರವಾರ ನಿಧನರಾಗಿದ್ದು ಹರಿಶ್ಚಂದ್ರ ಘಾಟ್ನಲ್ಲಿ ಅವರ ಅಂತ್ಯಕ್ರಿಯೆಯನ್ನು ಶನಿವಾರ ನೆರವೇರಿಸಲಾಯಿತು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರರು - ಅಳಿಯ ಹಾಗೂ ಅಪಾರ ಸಂಖ್ಯೆಯ ಬಂಧುವರ್ಗ ಹಾಗೂ ಆಪ್ತರನ್ನು ಅಗಲಿದ್ದಾರೆ.

ವೇಣಿ ಲೋಕನಾಥ್ ಅವರು ತಮ್ಮ ಹದಿನೇಳನೇ ವಯಸ್ಸಿನಿಂದಲೇ ಪತ್ರಿಕೆಗಳಿಗೆ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುವುದನ್ನು ಪ್ರಾರಂಭಿಸಿ, ಐದು ದಶಕಗಳಿಗೂ ಹೆಚ್ಚುಕಾಲ ಫೋಟೋಗ್ರಫಿಯಲ್ಲಿಯೇ ಬದುಕನ್ನು ಸವೆಸಿದ್ದರು.

ಐದು ದಶಕಗಳ ಕಾಲ ರಾಜ್ಯ ಕಂಡ ಮುಖ್ಯಮಂತ್ರಿಗಳು, ಗಣ್ಯರು, ಕೇಂದ್ರ ಸರ್ಕಾರದ ಗಣ್ಯಾತಿ ಗಣ್ಯರುಗಳ ಬಳ್ಳಾರಿ ಜಿಲ್ಲೆಗೆ ಭೇಟಿ ಮಾಡಿದಾಗ ಅವರ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಖ್ಯಾತರಾಗಿದ್ದರು.

ಅಲ್ಲದೇ, ಅಖಂಡ ಬಳ್ಳಾರಿ ಜಿಲ್ಲೆಯ ಅನೇಕ ಘಟನೆಗಳ ಸಾಕ್ಷಿಯಾಗಿ ಫೋಟೋಗಳನ್ನು ಸೆರೆ ಹಿಡಿದಿದ್ದ ಲೋಕನಾಥ್ ಅವರು, ಅನೇಕ ರಾಜಕಾರಣಿಗಳ ಏಳುಬೀಳುಗಳನ್ನು ಅತೀ ಹತ್ತಿರದಿಂದ ಕಂಡ ಅಪಾರ ಅನುಭವಿ ಆಗಿದ್ದರು.

ಮೃತರ ಆತ್ಮಕ್ಕೆ ಶಾಂತಿ ಕೋರಿ ಜಿಲ್ಲೆಯ ಪತ್ರಕರ್ತರು, ವಾರ್ತಾ ಇಲಾಖೆಯ ಹಾಲಿ ಮತ್ತು ನಿವೃತ್ತ ಅಧಿಕಾರಿಗಳು, ಬ್ರಾಹ್ಮಣ ಸಮಾಜದ ಗಣ್ಯರು ಹಾಗೂ ವಿವಿಧ ರಾಜಕಾರಣಿಗಳು ಸಂತಾಪಗಳನ್ನು ಸೂಚಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande