ಉ.ಪ್ರ. ಬಹರೈಚ್ ನಗರಪಾಲಿಕೆ ಮಾಜಿ ಅಧ್ಯಕ್ಷ ಹಾಜಿ ರೇಹಾನ್, ಮಥುರಾದ ರಾಮವೀರ್ ಚೌಧರಿ ಸೇರಿ ಹಲವು ನಾಯಕರು ಕಾಂಗ್ರೆಸ್ಗೆ ಸೇರ್ಪಡೆ
ನವದೆಹಲಿ, 03 ಅಕ್ಟೋಬರ್ (ಹಿ.ಸ.): ಉತ್ತರ ಪ್ರದೇಶದಲ್ಲಿ ಸಂಘಟನಾ ವಿಸ್ತರಣೆಯ ಭಾಗವಾಗಿ ಬಹರೈಚ್ ನಗರ ಪಾಲಿಕೆ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಜಿ ರೇಹಾನ್ ಖಾನ್ ಹಾಗೂ ಮಥುರಾದ ಹಿರಿಯ ನಾಯಕ ರಾಮವೀರ್ ಚೌಧರಿ (ಫಾಲೇನ್) ಸೇರಿದಂತೆ ಹಲವು ನಾಯಕರು ಮತ್ತು ಅವರ ಬೆಂಬಲಿಗರು ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇ
नई दिल्ली में कांग्रेस मुख्यालय में पार्टी में शामिल होने के बाद बहराइच के पूर्व चेयरमैन हाजी रेहान खान और मथुरा के रामवीर चौधरी।


ನವದೆಹಲಿ, 03 ಅಕ್ಟೋಬರ್ (ಹಿ.ಸ.):

ಉತ್ತರ ಪ್ರದೇಶದಲ್ಲಿ ಸಂಘಟನಾ ವಿಸ್ತರಣೆಯ ಭಾಗವಾಗಿ ಬಹರೈಚ್ ನಗರ ಪಾಲಿಕೆ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಜಿ ರೇಹಾನ್ ಖಾನ್ ಹಾಗೂ ಮಥುರಾದ ಹಿರಿಯ ನಾಯಕ ರಾಮವೀರ್ ಚೌಧರಿ (ಫಾಲೇನ್) ಸೇರಿದಂತೆ ಹಲವು ನಾಯಕರು ಮತ್ತು ಅವರ ಬೆಂಬಲಿಗರು ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಅವರ ಸಮ್ಮುಖದಲ್ಲಿ ಇಬ್ಬರೂ ನಾಯಕರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದರು.

ಬಹರೈಚ್‌ನಿಂದ ಹಾಜಿ ರೇಹಾನ್ ಖಾನ್ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆಗಳ ಹಲವು ಪ್ರತಿನಿಧಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಕಾಂಗ್ರೆಸ್ ಸೇರಿದರು. ಇರ್ಷಾದ್ ಅಹ್ಮದ್, ಸಜ್ಜನ್ ಅಹ್ಮದ್, ವಿಶಾಲ್ ಕುಮಾರ್, ಸುನಿಲ್ ಕುಮಾರ್ ಹಾಗೂ ಮಾಜಿ ನಗರಸಭಾ ಸದಸ್ಯ ಅನೀಸ್ ಖಾನ್ ಸೇರಿದಂತೆ ಹಲವರು ಪಕ್ಷದ ಸದಸ್ಯತ್ವ ಸ್ವೀಕರಿಸಿದರು.

ಮಥುರಾದ ಛಾತಾ ವಿಧಾನಸಭಾ ಕ್ಷೇತ್ರದಿಂದ ರಾಮವೀರ್ ಚೌಧರಿ (ಫಾಲೇನ್) ನೇತೃತ್ವದಲ್ಲಿಯೂ ಹಲವು ಬೆಂಬಲಿಗರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಧನರಾಜ್ ಅತ್ರಿ, ಯೋಗೇಂದ್ರ ಸಿಂಗ್, ತೇಜರಾಮ್, ಧರ್ಮವೀರ್ ಪ್ರಧಾನ್ ಹಾಗೂ ಮಹೇಂದ್ರ ಸಿಂಗ್ ಪ್ರಧಾನ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರಿದರು.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2027 ಹಾಗೂ ಮುಂಬರುವ ಸಂಘಟನಾ ಸವಾಲುಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಥಳೀಯ ಮಟ್ಟದ ನಾಯಕರು, ಮಾಜಿ ನಗರಸಭಾ ಅಧ್ಯಕ್ಷರು ಹಾಗೂ ಪಂಚಾಯಿತಿ ಪ್ರತಿನಿಧಿಗಳನ್ನು ಪಕ್ಷದೊಂದಿಗೆ ಸೇರಿಸಿಕೊಳ್ಳಲು ಒತ್ತು ನೀಡುತ್ತಿದೆ. ಇದರಿಂದ ಬೂತ್ ಮಟ್ಟದವರೆಗೆ ಪಕ್ಷದ ಸಂಘಟನೆ ಬಲಪಡಿಸಲು ನೆರವಾಗಲಿದೆ ಎಂದು ಕಾಂಗ್ರೆಸ್ ಹೇಳಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande