
ಸಂಡೂರು, 28 ಅಕ್ಟೋಬರ್ (ಹಿ.ಸ.)
ಸಂಡೂರು ತಾಲೂಕಿನಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಒಟ್ಟು 264.50 ಕ್ವಿಂಟಾಲ್ ಅಕ್ಕಿಯನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
2022 ರಿಂದ 2025 ರವರೆಗಿನ ಒಟ್ಟು 8 ಪ್ರಕರಣಗಳಲ್ಲಿ ಜಪ್ತಿಯಾಗಿರುವ ಈ ಅಕ್ಕಿ ದಾಸ್ತಾನನ್ನು ಪ್ರತ್ಯೇಕವಾಗಿ ಹರಾಜು ಹಾಕಲಾಗುತ್ತದೆ. ಹರಾಜು ಪ್ರಕ್ರಿಯೆಯು ನವೆಂಬರ್ 05 ರಂದು ಬೆಳಗ್ಗೆ 11:30 ಗಂಟೆಗೆ ಸಂಡೂರಿನ ತಾಲೂಕು ಕಚೇರಿಯ ಆಹಾರ ಶಾಖೆಯಲ್ಲಿ ನಡೆಯಲಿದೆ.
ಪ್ರಸ್ತುತ ಸಂಡೂರಿನ ಸಗಟು ಗೋದಾಮಿನಲ್ಲಿ ಸಂಗ್ರಹಿಸಲಾಗಿರುವ ಈ ದಾಸ್ತಾನನ್ನು ಖರೀದಿಸಲು ಆಸಕ್ತಿಯುಳ್ಳ ಬಿಡ್ದುದಾರರು ಭಾಗವಹಿಸಬಹುದಾಗಿದೆ. ಹರಾಜಿನಲ್ಲಿ ಪಾಲ್ಗೊಳ್ಳುವವರು ಮುಂಗಡ ಭದ್ರತಾ ಠೇವಣಿಯಾಗಿ ರೂ.60,000 ಪಾವತಿಸಿ, ನಿಗದಿತ ಷರತ್ತುಗಳೊಂದಿಗೆ ಭಾಗವಹಿಸುವಂತೆ ಸಂಡೂರು ತಹಶೀಲ್ದಾರರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್